ಅಂತರಾಷ್ಟ್ರೀಯ

ನನಗೆ ಶಾಂತಿ ಬೇಕು: ಟ್ವಿಟರ್ ಮೂಲಕ ಸಿರಿಯಾದ ಬಾಲಕಿ

Pinterest LinkedIn Tumblr

banaಅಲೆಪ್ಪೋ: ಉತ್ತರ ಸಿರಿಯಾದ ಅಲೆಪ್ಪೊ ನಗರದಲ್ಲಿ ಪ್ರತಿನಿತ್ಯ ಬಾಂಬ್ ಸುರಿಮಳೆ. ಅಲ್ಲಿನ ಭಯಭೀತ ಜನ ಜೀವನದ ಬಗ್ಗೆ ಏಳು ವರ್ಷದ ಬಾಲಕಿ ಟ್ವಿಟರ್‍ ನಲ್ಲಿ ಹೇಳಿಕೊಂಡಾಗ, ಜಗತ್ತೇ ಆ ಬಾಲಕಿಗಾಗಿ ಪ್ರಾರ್ಥಿಸಿತ್ತು.

ಸೆಪ್ಟೆಂಬರ್ 24ರಂದು ಟ್ವಿಟರ್ ಲೋಕಕ್ಕೆ ಪ್ರವೇಶ ಮಾಡಿದ ಈ ಬಾಲಕಿಯ ಹೆಸರು ಬನಾ ಅಲಬೆದ್. ಅಲೆಪ್ಪೋ ನಗರ ನಿವಾಸಿಯಾಗಿರುವ ಈ ಬಾಲಕಿ ತಮ್ಮ ನಗರದ ಮೇಲೆ ನಡೆಯುತ್ತಿರುವ ಬಾಂಬ್ ದಾಳಿಯ ಚಿತ್ರಣವನ್ನು ಟ್ವಿಟರ್ ಮೂಲಕ ಹಂಚಿಕೊಂಡಿದ್ದೇ ತಡ ಮಾಧ್ಯಮಗಳು ಬಾಲಕಿಯತ್ತ ಗಮನ ಹರಿಸಿದವು.

”ನನಗೆ ಶಾಂತಿ ಬೇಕು” ಎಂದು ಟ್ವೀಟ್ ಮಾಡಿದ ಬನಾ, ತದನಂತರ ಅಲ್ಲಿನ ಯುದ್ಧದ ಭೀಕರತೆಯ ಚಿತ್ರಣಗಳನ್ನು ಬಿಚ್ಚುತ್ತಾ ಹೋದಳು. ನೆಟ್‍ಲೋಕದಲ್ಲಿ ಗಮನ ಸೆಳೆದ ಈಕೆಗೆ ಈಗ ಟ್ವಿಟರ್‍ ನಲ್ಲಿ 50,000 ಫಾಲೋವರ್ಸ್ ಇದ್ದಾರೆ.

ಬಾಂಬ್ ಆಕ್ರಮಣದಿಂದ ತನ್ನ ಗೆಳೆಯರ ಮನೆ ನಾಶವಾಗಿ, ಗೆಳೆಯರನ್ನು ಕಳೆದುಕೊಂಡಿರುವ ದುಃಖವನ್ನೂ ಈ ಬಾಲಕಿ ಟ್ವೀಟ್ ಮಾಡಿದ್ದಾಳೆ.

ಇತ್ತೀಚಿನ ಪೋಸ್ಟ್ ವೊಂದರಲ್ಲಿ ನಮ್ಮ ಮನೆಯ ಮುಂದೆ ಬಿದ್ದ ಬಾಂಬ್ ಎಂದು ಚಿತ್ರವನ್ನೂ ಶೇರ್ ಮಾಡಿದ್ದ ಬಾಲಕಿ, ಬಾಂಬ್ ದಾಳಿ ನಿಲ್ಲಿಸುವಂತೆ ಮನವಿ ಮಾಡಿದ್ದಾಳೆ. ಕೆಲವೊಂದು ಪೋಸ್ಟ್ ಗಳನ್ನು ಬಾಲಕಿಯ ಅಮ್ಮ ಫಾತೆಮಾನೂ ಅಪ್‍ಡೇಟ್ ಮಾಡುತ್ತಿರುತ್ತಾರೆ.

ಬನಾ ಮತ್ತು ಆಕೆಯ ಪುಟ್ಟ ತಮ್ಮನೂ ಶಾಲೆಗೆ ಹೋಗುವುದಿಲ್ಲ. ಇತ್ತ, ನಾನು ಯುದ್ಧವನ್ನು ಮರೆಯುವುದಕ್ಕಾಗಿ ಓದುತ್ತೇನೆ ಎಂದು ಹೇಳುವ ಬನಾ, ನಾನು ಮತ್ತು ನನ್ನ ಅಮ್ಮ ಇಲ್ಲಿನ ಬಾಂಬ್ ದಾಳಿ ಬಗ್ಗೆ ಹೇಳಲಿಚ್ಛಿಸುತ್ತೇವೆ ಎಂದು ಟ್ವೀಟ್ ಮಾಡಿದ್ದಾಳೆ.
ಯಾಕೆ ಜಗತ್ತಿನಲ್ಲಿರುವ ಇತರ ಜನರಿಗೆ ನಮ್ಮ ದನಿ ಕೇಳಿಸುವುದಿಲ್ಲವೇ? ಯಾಕೆ ಅವರು ಯಾರೂ ನಮಗೆ ಸಹಾಯ ಮಾಡುವುದಿಲ್ಲವೆ? ಎಂದು ಮಗಳು ನನ್ನಲ್ಲಿ ಕೇಳಿದ್ದಳು ಅಂತಾರೆ ಫಾತೆಮಾ.

ಇದೀಗ ಸಿರಿಯಾದಲ್ಲಿ ಯುದ್ಧಭೀತಿಯಿಂದಿರುವ ಜನರ ಸ್ಥಿತಿಗತಿಗಳನ್ನು ಬನಾ ಜಗತ್ತಿಗೇ ತಿಳಿಸುತ್ತಿದ್ದಾಳೆ. ನಾವು ಉಗ್ರರಲ್ಲ, ನಾವೆಲ್ಲರೂ ಸಾಮಾನ್ಯ ಮನುಷ್ಯರೇ. ನಾವು ಸಿರಿಯಾದವರು, ನಾವು ಅಲೆಪ್ಪೋದ ಜನ ಎಂದು ಫಾತೆಮಾ ಹೇಳಿರುವುದಾಗಿ ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ.

Follow
Bana Alabed @AlabedBana
I need peace. Who can give me?. – Bana #Aleppo
12:27 AM – 8 Oct 2016
225 225 Retweets 400 400 likes
Follow
Bana Alabed @AlabedBana
Last now was bombing but we are still alive, Thank you. – Bana #Aleppo
12:17 AM – 8 Oct 2016

Comments are closed.