ಕರ್ನಾಟಕ

ಕಾವೇರಿ ನೀರು ಬಿಡಲು ಸಾಧ್ಯವಿಲ್ಲ: ಕೇಂದ್ರ ತಂಡಕ್ಕೆ ರಾಜ್ಯ ಸರಕಾರ

Pinterest LinkedIn Tumblr
Irrigation Minister M B Patil greets the Central Water Commission (CWC) chairman G S Jha and team, at the meeting held at Vidhana Soudha in Bengaluru on Friday. Former Chief Secretary Arvind Jadhav and Chief Secretary Subhashchandra Kuntia are also seen. -Photo/ VS
 M B Patil 

ಬೆಂಗಳೂರು: ತೀವ್ರ ಮಳೆ ಕೊರತೆಯಿಂದಾಗಿ ಕಾವೇರಿಕೊಳ್ಳದ ಜಲಾಶಯಗಳಿಂದ ತಮಿಳುನಾಡಿಗೆ ನೀರು ಹರಿಸಲು ಸಾಧ್ಯವಿಲ್ಲದೇ  ಇರುವ ಅಸಹಾಯಕ ಪರಿಸ್ಥಿತಿಯನ್ನು ಕೇಂದ್ರದ ಅಧ್ಯಯನ ತಂಡದ ಮುಂದೆ ವಿವರಿಸಿರುವ ರಾಜ್ಯ ಸರ್ಕಾರ, ನಾಡಿನ ಸಂಕಷ್ಟವನ್ನು ಮನವರಿಕೆ ಮಾಡಿಕೊಟ್ಟಿದೆ.

ಸುಪ್ರೀಂಕೋರ್ಟ್‌ ಸೂಚನೆ ಮೇರೆಗೆ ಕಾವೇರಿ ಕೊಳ್ಳದ ಜಲಾಶಯಗಳ ಸ್ಥಿತಿ ಅಧ್ಯಯನ ನಡೆಸಲು ಕೇಂದ್ರ ಜಲ ಆಯೋಗದ ಅಧ್ಯಕ್ಷ ಜಿ.ಎಸ್‌. ಝಾ ನೇತೃತ್ವದ ಸಮಿತಿ ಎರಡು ದಿನ ರಾಜ್ಯ ಪ್ರವಾಸ ಕೈಗೊಂಡಿದೆ. ವಿಧಾನಸೌಧದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ವಿಡಿಯೊ ದೃಶ್ಯಗಳು, ಅಂಕಿ ಅಂಶಗಳ ಮೂಲಕ ರಾಜ್ಯದ ಕಷ್ಟವನ್ನು ಸಮಿತಿ ಮುಂದೆ ವಿವರಿಸಲಾಯಿತು. ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ ಅವರು ಸಮಗ್ರ ಮಾಹಿತಿ ಇರುವ ಮನವಿಯನ್ನು ಇದೇ ಸಂದರ್ಭದಲ್ಲಿ ಸಲ್ಲಿಸಿದರು.

ನೈರುತ್ಯ ಮುಂಗಾರು ಅವಧಿಯಲ್ಲಿ ಕೆಆರ್‌ಎಸ್‌ ಅಚ್ಚುಕಟ್ಟು ಪ್ರದೇಶದಲ್ಲಿ ಶೇ 34 ಮತ್ತು ಕಬಿನಿ ಅಚ್ಚುಕಟ್ಟು ಪ್ರದೇಶದಲ್ಲಿ ಶೇ 47ರಷ್ಟು ಮಳೆ ಕೊರತೆಯಾಗಿದೆ. ಕೆಆರ್‌ಎಸ್‌ನಲ್ಲಿ 42 ವರ್ಷಗಳಲ್ಲಿ ಎರಡನೇ ಬಾರಿಗೆ ಅತಿ ಕಡಿಮೆ ನೀರಿನ ಸಂಗ್ರಹವಾಗಿದೆ.

41 ವರ್ಷಗಳ ಸರಾಸರಿ ಗಮನಿಸಿದರೆ ಮುಂಗಾರು ಅವಧಿಯಲ್ಲಿ ಕಾವೇರಿ ಕೊಳ್ಳದ ನಾಲ್ಕೂ ಜಲಾಶಯಗಳಿಗೆ 257 ಟಿಎಂಸಿ ಅಡಿಗಳಷ್ಟು ನೀರು ಹರಿದು ಬರಬೇಕಿತ್ತು. ಆದರೆ, ಈ ಬಾರಿ ಕೇವಲ 131.51 ಟಿಎಂಸಿ ಅಡಿ ಸಂಗ್ರಹವಾಗಿದ್ದು, ಶೇ 51.2 ರಷ್ಟು ನೀರಿನ ಕೊರತೆ ಇದೆ ಎಂದು ಕೇಂದ್ರದ ತಂಡಕ್ಕೆ ವಿವರಿಸಲಾಗಿದೆ.

Comments are closed.