ಮುಂಬೈ: ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ತಮ್ಮ ಅಭಿನಯದ ಮರಾಠಿಯ ‘ವೆಂಟಿಲೇಟರ್’ ಸಿನಿಮಾದ ಮೊದಲ ಟೀಸರ್ ಬಿಡುಗಡೆ ಬಗ್ಗೆ ಟ್ವೀಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
‘ವೆಂಟಿಲೇಟರ್’ ಸಿನಿಮಾ ಪರ್ಪಲ್ ಪೆಬ್ಬಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ಟೀಸರ್ ಬಿಡುಗಡೆಯ ಕುರಿತು ಪ್ರಿಯಾಂಕಾ ಟ್ವೀಟರ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದಾರೆ. ಚಿತ್ರವನ್ನು ರಾಜೇಶ್ ಮಪುಸ್ಕರ್ ನಿರ್ದೇಶಿಸುತ್ತಿದ್ದಾರೆ. ಈ ಹಿಂದೆ ‘ಫರಾರಿ ಕೀ ಸವಾರಿ’ ಚಿತ್ರವನ್ನು ನಿರ್ದೇಶಿಸಿದ್ದರು.
‘ವೆಂಟಿಲೇಟರ್’ ಸಿನಿಮಾದಲ್ಲಿ ಅಶುತೋಷ್ ಗೋವಾರೀಕರ್ ನಾಯಕನಾಗಿ ನಟಿಸುತ್ತಿದ್ದು, ಬಹುದಿನಗಳ ನಂತರ ಮತ್ತೆ ನಟನೆಯತ್ತ ಗಮನ ಹರಿಸಿದ್ದಾರೆ.
ಗೋವಾರೀಕರ್ 1990ರಲ್ಲಿ ನಟಿಸಿದ್ದ ಕಭೀ ಹಾ ಕಭೀ ನಾ, ಚಮತ್ಕಾರ್ ಸಿನಿಮಾಗಳು ದೊಡ್ಡ ಮಟ್ಟದ ಯಶಸ್ಸನ್ನು ಗಳಿಸಿದ್ದವು. ಜತೆಗೆ, ಶಾರುಖ್ ಖಾನ್ ಅವರೊಂದಿಗೆ ‘ಸರ್ಕಸ್’ ಎಂಬ ಟಿವಿ ಷೋನಲ್ಲಿಯೂ ಸಹ ಕಾಣಿಸಿಕೊಂಡಿದ್ದರು.