ರಾಷ್ಟ್ರೀಯ

ಮೋದಿ ವಿರುದ್ಧ ‘ರಕ್ತದ ದಲ್ಲಾಳಿ’ ಹೇಳಿಕೆಗೆ ಅಮಿತ್ ಶಾ ಕಿಡಿ

Pinterest LinkedIn Tumblr

amith-okನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರನ್ನು ‘ರಕ್ತದ ದಲ್ಲಾಳಿ’ ಎಂದ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿಕೆ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದೆ.

ರಾಹುಲ್ ಗಾಂಧಿ ತಮ್ಮ ಮಿತಿಯನ್ನು ಮೀರಿದ್ದು ಮಾತ್ರವಲ್ಲದೆ ಸೇನಾಪಡೆಯ ಸಾಮರ್ಥ್ಯವನ್ನು ಅವಮಾನಿಸಿದ್ದಾರೆ ಎಂದು ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಕಿಡಿ ಕಾರಿದ್ದಾರೆ.

ಪಾಕ್ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಿರ್ದಿಷ್ಟ ದಾಳಿ ನಡೆಸಿದ್ದನ್ನು ರಾಜಕೀಯ ವಿಷಯವನ್ನಾಗಿ ಮಾಡಬೇಡಿ ಎಂದು ರಾಜಕೀಯ ಪಕ್ಷಗಳಲ್ಲಿ ವಿನಂತಿಸಿದ ಶಾ, ಸೇನೆಯ ಕಾರ್ಯಾಚರಣೆ ಬಗ್ಗೆ ಪ್ರಶ್ನಿಸಿದ ದೇಶ ವಿರೋಧಿ ನಾಯಕರಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಮೊದನೆಯವರು ಎಂದಿದ್ದಾರೆ.

ಅದೇ ವೇಳೆ ಕಾಂಗ್ರೆಸ್ ನಾಯಕ ‘ಸೈನಿಕರ ದಲ್ಲಾಳಿ’ ಎಂಬ ಪದವನ್ನು ಬಳಸಿದ್ದು ದುರದೃಷ್ಟಕರ. ಹಲವಾರು ಹಗರಣಗಳಿಂದ ಕೋಟಿಗಟ್ಟಲೆ ಲೂಟಿ ಮಾಡಿರುವ ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಈ ಮಾತು ಬಿಂಬಿಸುತ್ತಿದೆ.

ರಕ್ತದ ದಲ್ಲಾಳಿ ಎಂಬ ಹೇಳಿಕೆಯನ್ನು ನೀಡುವ ಮೂಲಕ ರಾಹುಲ್ ಗಾಂಧಿ ತಮ್ಮ ಮಿತಿಯನ್ನು ಮೀರಿದ್ದಾರೆ. ಈ ಮಾತುಗಳ ಮೂಲಕ ಅವರು ಸೇನಾಪಡೆಯ ಸಾಮರ್ಥ್ಯವನ್ನು ಅವಮಾನಿಸಿದ್ದಾರೆ. ಕಾಂಗ್ರೆಸ್ ಅಧಿಕಾರವಧಿಯಲ್ಲಿ ಹಲವಾರು ಹಗರಣಗಳು ನಡೆದಿರುವುದರಿಂದ ದಲ್ಲಾಳಿ ಎಂಬ ಪದ ಅವರ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಶಾ ಹೇಳಿದ್ದಾರೆ.

ರಾಹುಲ್ ಅವರ ಹೇಳಿಕೆ ಕಾಂಗ್ರೆಸ್ ಪಕ್ಷದ ಮನಸ್ಥಿತಿಯನ್ನು ಬಿಂಬಿಸುತ್ತಿದೆ. ಕಾಂಗ್ರೆಸ್ ನಾಯಕತ್ವದಲ್ಲೇ ಈ ರೀತಿಯ ಚಿಂತನೆಗಳು ಹರಿದು ಬಂದಿವೆ. ಅವರ ಹೇಳಿಕೆಯನ್ನು ನಾನು ಖಂಡಿಸುತ್ತೇನೆ. ದಲ್ಲಾಳಿ ಎಂಬ ಪದ ಕಾಂಗ್ರೆಸ್ ಪಕ್ಷಕ್ಕೆ ಮಾತ್ರ ಸೀಮಿತವಾಗಿರಲಿ ಎಂದು ಶಾ ಗುಡುಗಿದ್ದಾರೆ.

Comments are closed.