ಅಂತರಾಷ್ಟ್ರೀಯ

ಅಮೆರಿಕದಲ್ಲಿ ಮ್ಯಾಥ್ಯೂ ಚಂಡಮಾರುತ: 300ಕ್ಕೂ ಹೆಚ್ಚು ಸಾವು

Pinterest LinkedIn Tumblr

chandaವಾಷಿಂಗ್ಟನ್: ಅಮೆರಿಕದಲ್ಲಿ ಬೀಸುತ್ತಿರುವ ಮ್ಯಾಥ್ಯೂ ಚಂಡಮಾರುತಕ್ಕೆ 300 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಇಲ್ಲಿನ ಹೈಟಿಯಲ್ಲಿ ಸುಮಾರು 339 ಮಂದಿ ಸಾವನ್ನಪ್ಪಿದ್ದಾರೆಂದು ಅಧಿಕಾರಿಗಳು ತಿಳಿಸಿದ್ದಾರೆ.

10 ವರ್ಷಕ್ಕೂ ಹೆಚ್ಚು ಸಮಯುದ ನಂತರ ಅಮೆರಿಕದಲ್ಲಿ ಈ ದೈತ್ಯ ಚಂಡಮಾರುತ ಬಂದಿದೆ.ಈ ನಡುವೆ ಅಧ್ಯಕ್ಷ ಒಬಾಮಾ ಸೌತ್ ಕ್ಯಾರೊಲಿನಾ ಮತ್ತು ಫ್ಲೋರಿಡಾದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ.

haiti
2007ರಲ್ಲಿ ಕೆರಿಬಿಯನ್‍ನಲ್ಲಿ ಈ ದೈತ್ಯ ಮ್ಯಾಥ್ಯೂ ಚಂಡಮಾರುತ ಬೀಸಿತ್ತು. ಗಂಟೆಗೆ ಸುಮಾರು 230 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಫ್ಲೋರಿಡಾ, ಜಾರ್ಜಿಯಾ ಹಾಗೂ ಸೌತ್ ಕ್ಯಾರೊಲಿನಾದಲ್ಲಿ ಲಕ್ಷಾಂತರ ನಿವಾಸಿಗಳಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುವಂತೆ ಸೂಚಿಸಲಾಗಿದೆ.

ಹೈಟಿಯಲ್ಲಿ ಚಂಡಮಾರುತದಿಂದ ಸಂಭವಿಸಿರುವ ದುರಂತದಿಂದಾಗಿ ಭಾನುವಾರದಂದು ಇಲ್ಲಿ ನಡೆಯಬೇಕಿದ್ದ ಅಧ್ಯಕ್ಷೀಯ ಚುನಾವಣೆಯನ್ನು ಮುಂದೂಡಲಾಗಿದೆ. ಬುಧವಾರದಿಂದ ಶನಿವಾರದವರೆಗೆ ನಿಗದಿಯಾಗಿದ್ದ ಸುಮಾರು 3862 ವಿಮಾನಗಳ ಹಾರಾಟವನ್ನು ರದ್ದುಪಡಿಸಲಾಗಿದೆ.

Comments are closed.