ಮನೋರಂಜನೆ

ಒತ್ತುವರಿ ಬಗ್ಗೆ ನೀಡಲಾದ ನೋಟಿಸ್​ಗೆ ಉತ್ತರಿಸಿದ ನಟ ದರ್ಶನ್

Pinterest LinkedIn Tumblr

darshan

ಬೆಂಗಳೂರು: ಒತ್ತುವರಿ ಸಂಬಂಧ ಜಿಲ್ಲಾಡಳಿತ ಸೆ. 28ರಂದು ಜಾರಿ ಮಾಡಿದ್ದ ನೋಟಿಸ್ಗೆ ನಟ ದರ್ಶನ್ ಮತ್ತು ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಉತ್ತರ ನೀಡಿದ್ದಾರೆ.

ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್್ಸ ಬಡಾವಣೆಯಲ್ಲಿರುವ ದರ್ಶನ್ ಮನೆ ಮತ್ತು ಶಾಮನೂರು ಆಸ್ಪತ್ರೆ ಕಟ್ಟಡ ಸೇರಿ 69 ಕಟ್ಟಡಗಳ ಮಾಲೀಕರಿಗೆ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ದಕ್ಷಿಣ ತಾಲೂಕು ತಹಸೀಲ್ದಾರ್ ಶಿವಕುಮಾರ್ ನೋಟಿಸ್ ಜಾರಿ ಮಾಡಿ ಉತ್ತರಿಸಲು ವಾರದ ಗಡುವು ನೀಡಿದ್ದರು. ಬುಧವಾರ ಗಡುವು ಮುಕ್ತಾಯಗೊಳ್ಳುವ ಕೊನೇ ಗಳಿಗೆಯಲ್ಲಿ ವಕೀಲರ ಮೂಲಕ ಉತ್ತರ ನೀಡಿದ್ದಾರೆ.

ಉತ್ತರದೊಂದಿಗೆ ತಮ್ಮ ಬಳಿ ಇರುವ ದಾಖಲೆಗಳನ್ನು ಸಲ್ಲಿಸಿದ್ದಾರೆ ಎನ್ನಲಾಗಿದೆ. ಇವುಗಳ ಪರಿಶೀಲನೆ ನಂತರ ಮುಂದಿನ ಕ್ರಮ ತೆಗೆದುಕೊಳ್ಳಲು ಜಿಲ್ಲಾಡಳಿತ ನಿರ್ಧರಿಸಿದೆ.

ಒತ್ತುವರಿ ಜಾಗವನ್ನು ಕೂಡಲೇ ಸರ್ಕಾರಕ್ಕೆ ಒಪ್ಪಿಸಬೇಕು. ಆಕ್ಷೇಪಣೆಗಳಿದ್ದಲ್ಲಿ ವಾರದೊಳಗೆ ದಾಖಲೆಗಳೊಂದಿಗೆ ಸಲ್ಲಿಸಬೇಕು. ಉತ್ತರ ನೀಡಲು ವಿಫಲರಾದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಹಾಗೂ ಒತ್ತುವರಿ ತೆರವಿಗೆ ತಗಲುವ ವೆಚ್ಚವನ್ನು ಒತ್ತುವರಿದಾರರಿಂದಲೇ ವಸೂಲಿ ಮಾಡುವುದಾಗಿ ನೋಟಿಸ್ನಲ್ಲಿ ಎಚ್ಚರಿಸಲಾಗಿತ್ತು. ಒಟ್ಟು 9 ಆಸ್ತಿಗಳ ಮಾಲೀಕರು ದಾಖಲೆ ಸಲ್ಲಿಸಿದ್ದಾರೆ.

ಹದ್ದಿಗಿಡದ ಹಳ್ಳ (ರಾಜಕಾಲುವೆ) ಒತ್ತುವರಿ ಮಾಡಿ ಐಡಿಯಲ್ ಹೋಮ್್ಸ ಬಡಾವಣೆ ನಿರ್ಮಾಣ ಮಾಡಲಾಗಿದೆ. ಇದರಲ್ಲಿ ದರ್ಶನ್ ಮನೆಯಿಂದ 2 ಗುಂಟೆ ಜಾಗ ಮತ್ತು ಶಿವಶಂಕರಪ್ಪ ಅವರಿಗೆ ಸೇರಿದ ಎಸ್.ಎಸ್. ಆಸ್ಪತ್ರೆಯಿಂದ 22 ಗುಂಟೆ ಜಾಗ ಸೇರಿ 69 ಜನರಿಂದ 7.31 ಎಕರೆ ಜಾಗ ಒತ್ತುವರಿಯಾಗಿದೆ ಎಂಬುದು ಭೂದಾಖಲೆಗಳ ಜಂಟಿ ನಿರ್ದೇಶಕರ ವರದಿಯಲ್ಲಿ ತಿಳಿದು ಬಂದಿತ್ತು. ಈ ವರದಿ ಆಧಾರದಲ್ಲಿ ಜಿಲ್ಲಾಡಳಿತ ನೋಟಿಸ್ ನೀಡಿತ್ತು.

Comments are closed.