ರಾಷ್ಟ್ರೀಯ

ಅಮೆರಿಕದ ಅಧ್ಯಕ್ಷೀಯ ಚುನಾವಣೆ; ಟ್ರಂಪ್ ಬಂದರೆ ಭಾರತ ಸಂಕಷ್ಟ !

Pinterest LinkedIn Tumblr

Donald Trump

ನವದೆಹಲಿ: ಅಮೆರಿಕದ ಅಧ್ಯಕ್ಷೀಯ ಚುನಾವಣೆ ಸಮೀಪಿಸುತ್ತಿದ್ದು, ಬರಾಕ್ ಒಬಾಮ ಅಧಿಕಾರಾವಧಿ ಕೆಲ ದಿನಗಳಲ್ಲಿ ಅಂತ್ಯವಾಗಲಿದೆ. ಭಾರತದ ಪರ ಒಲವು ಹೊಂದಿರುವ ಒಬಾಮ ಅಧಿಕಾರಾವಧಿ ಮುಕ್ತಾಯಕ್ಕೂ ಮೊದಲೇ ಅಮೆರಿಕದೊಂದಿಗೆ ಕೆಲ ಮಹತ್ವದ ರಕ್ಷಣಾ ಒಪ್ಪಂದಗಳನ್ನು ಅಂತಿಮ ಗೊಳಿಸಲು ಭಾರತ ಯತ್ನಿಸುತ್ತಿದೆ. ಅಮೆರಿಕದಿಂದ 22 ಅತ್ಯಾಧುನಿಕ ಡ್ರೋನ್ ಖರೀದಿಗೆ ಭಾರತ ನಿರ್ಧರಿಸಿದ್ದು, ಖರೀದಿ ಒಪ್ಪಂದವನ್ನು ಶೀಘ್ರ ಮುಗಿಸಲು ಪ್ರಯತ್ನ ನಡೆಸಲಾಗುತ್ತಿದೆ.

ಮುಂದಿನ ತಿಂಗಳು ನಡೆಯಲಿರುವ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಹಿಲರಿ ಕ್ಲಿಂಟನ್ ಮತ್ತು ಡೊನಾಲ್ಡ್ ಟ್ರಂಪ್ ನಡುವೆ ಭಾರಿ ಸ್ಪರ್ಧೆ ಏರ್ಪಟ್ಟಿದೆ. ಸಮಬಲದ ಪೈಪೋಟಿಯ ನಡುವೆಯೂ ಟ್ರಂಪ್ ಪರ ಅಮೆರಿಕನ್ನರ ಒಲವು ಹೆಚ್ಚಿದೆ ಎನ್ನಲಾಗುತ್ತಿದೆ. ಭಾರತಕ್ಕೆ ಹೊರಗುತ್ತಿಗೆ ಸ್ಥಗಿತ ಸೇರಿ ಹಲವು ಕ್ರಮಗಳನ್ನು ಕೈಗೊಳ್ಳುವುದಾಗಿ ಈಗಾಗಲೇ ಟ್ರಂಪ್ ಚುನಾವಣಾ ಭಾಷಣಗಳಲ್ಲಿ ಹೇಳಿದ್ದಾರೆ. ಅವರು ಅಧ್ಯಕ್ಷರಾಗಿ ಆಯ್ಕೆಯಾದರೆ ಭಾರತಕ್ಕೆ ತುಸು ಹಿನ್ನಡೆಯಾಗುವ ಸಾಧ್ಯತೆ ಇದೆ. ಅವರ ವಿದೇಶಾಂಗ ನೀತಿ ಕೂಡ ಭಾರತಕ್ಕೆ ಸಹಕಾರಿಯಾಗಲಾರದು ಎಂದು ಹೇಳಲಾಗುತ್ತಿದೆ. ಹೀಗಾಗಿ ಬರಾಕ್ ಒಬಾಮ ಅಧ್ಯಕ್ಷೀಯ ಅವಧಿಯಲ್ಲೇ ಮಹತ್ವದ ರಕ್ಷಣಾ ಒಪ್ಪಂದಗಳನ್ನು ಪೂರೈಸಲು ಭಾರತ ಮುಂದಾಗಿದೆ.

22 ಅತ್ಯಾಧುನಿಕ ಡ್ರೋನ್: ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ 22 ರಕ್ಷಣಾ ಡ್ರೋನ್ಗಳನ್ನು ಪೂರೈಸುವಂತೆ ಭಾರತ ಜೂನ್ನಲ್ಲಿ ಅಮೆರಿಕಕ್ಕೆ ಮನವಿ ಮಾಡಿದೆ. ಡ್ರೋನ್ ಬಳಕೆಯಿಂದ ಭೂಸೇನೆ ಮತ್ತು ವಾಯುಪಡೆಗೆ ಪ್ರಯೋಜನವಾಗಲಿದೆ. ಗಡಿಯಲ್ಲಿ ಉಗ್ರ ಚಟುವಟಿಕೆಯ ಮೇಲೆ ನಿಗಾ ಇಡುವ ಜತೆಗೆ ಉಗ್ರರ ದಾಳಿಯನ್ನು ವಿಫಲಗೊಳಿಸಬಹುದು. ಮಾನವ ರಹಿತ ಡ್ರೋನ್ ನಿಗದಿತ ನಿರ್ದೇಶನ ಮೇರೆಗೆ ಗುರಿ ತಲುಪಿ ಹಿಂದಿರುಗುವ ಸಾಮರ್ಥ್ಯ ಹೊಂದಿದೆ. ಡ್ರೋನ್ ಖರೀದಿ ಸಂಬಂಧ ಮಾತುಕತೆ ನಡೆಯುತ್ತಿದ್ದು, ಪ್ರಮುಖ ಹಂತವನ್ನು ಒಬಾಮ ಸರ್ಕಾರ ಅಧಿಕಾರದಲ್ಲಿರುವಾಗಲೇ ಪೂರ್ಣಗೊಳಿಸಿ ದರೆ ಭಾರತಕ್ಕೆ ಪ್ರಯೋಜನವಾಗಲಿದೆ.

Comments are closed.