ಕರ್ನಾಟಕ

ಮೆಜೆಸ್ಟಿಕ್ ಎಕ್ಸ್ಪ್ರೆಸ್’ ಮೂಲಕ ಮತ್ತೆ ಸ್ಯಾಂಡಲ್ ವುಡ್‌ಗೆ ಪಾದರ್ಪಣೆ ಮಾಡಿದ “ಸ್ಪರ್ಶ’ ರೇಖಾ”

Pinterest LinkedIn Tumblr

reka_new_film

ಬೆಂಗಳೂರು: ನಿಮಗೆ ‘ಸ್ಪರ್ಶ’ ರೇಖಾ ನೆನಪಿರುತ್ತೆ. ಕಿಚ್ಚ ಸುದೀಪ್ ನಟಿಸಿದ ಸ್ಪರ್ಶ ಸಿನಿಮಾ ಮೂಲಕ ಕನ್ನಡ ಚಿತ್ರರಂಗದಲ್ಲಿ ಗಮನ ಸೆಳೆದಿದ್ದ ನಟಿ. ಈ ಸಿನಿಮಾ ಬಂದ್ಮೇಲೆ ರೇಖಾ ಹೆಸರು ಸ್ಪರ್ಶ ರೇಖಾ ಅಂತ್ಲೇ ಫೇಮಸ್ ಆಗಿತ್ತು.ಆ ನಂತ್ರ ದರ್ಶನ್ ನಾಯಕನಾಗಿ ನಟಿಸಿದ ಚೊಚ್ಚಲ ಸಿನಿಮಾ ‘ಮೆಜೆಸ್ಟಿಕ್’ ಚಿತ್ರಕ್ಕೂ ಇದೇ ಸ್ಪರ್ಶ ರೇಖಾ ನಾಯಕಿಯಾಗಿದ್ದರು. ಸ್ಪರ್ಶ, ಮೆಜೆಸ್ಟಿಕ್ ಹೀಗೆ ಬೆರಳೆಣಿಕೆಯಷ್ಟು ಸಿನಿಮಾಗಳಲ್ಲಿ ನಟಿಸಿದ್ದ ರೇಖಾ ಆಮೇಲೆ ಕಾಣೆಯಾಗಿದ್ರು.

ಇತ್ತೀಚೆಗಷ್ಟೆ ಸೃಜನ್ ಲೋಕೇಶ್ ನಡೆಸಿಕೊಡುತ್ತಿರುವ ರಿಯಾಲಿಟಿ ಶೋ ಮಜಾ ಟಾಕಿಸ್ನಲ್ಲಿ ಕಿಚ್ಚ ಸುದೀಪ್ ಜೊತೆ ಕಾಣಿಸಿಕೊಂಡು ಫ್ಯಾನ್ಸ್ಗೆ ಥ್ರಿಲ್ ಹುಟ್ಟಿಸಿದ್ರು. ಇದ್ರ ಜೊತೆಗೆ ಉಮೇಶ್ ಬಣಕಾರ್ ಜೊತೆ ‘ಮೆಜೆಸ್ಟಿಕ್ ಎಕ್ಸ್ಪ್ರೆಸ್’ ಸಿನಿಮಾದಲ್ಲಿ ಸ್ಪರ್ಶ ರೇಖಾ ನಾಯಕಿಯಾಗಿ ಅಭಿನಯಿಸ್ತಿದ್ದಾರೆ.

ಈ ಚಿತ್ರದ ಶೂಟಿಂಗ್ ಕೂಡ ಈಗಾಗ್ಲೆ ಕಂಪ್ಲೀಟ್ ಆಗಿದೆ. ಆದ್ರೆ ಇದೀಗ ಸ್ಪರ್ಶ ರೇಖಾ ಕಡೆಯಿಂದ ಎಕ್ಸ್ಕ್ಲೂಸಿವ್ ಸುದ್ದಿಯೊಂದು ಬಂದಿದೆ. ಸ್ಯಾಂಡಲ್ವುಡ್ನ ಈ ಚೆಲುವೆ ಇದೀಗ ನಿರ್ದೇಶನಕ್ಕೆ ರೆಡಿಯಾಗ್ತಿದ್ದಾರೆ.
ಹೌದು ರೇಖಾ ಕನ್ನಡದಲ್ಲಿ ಹೊಸ ಸಿನಿಮಾವೊಂದನ್ನು ನಿರ್ದೇಶನ ಮಾಡ್ತಿದ್ದಾರೆ. ಆ ಚಿತ್ರಕ್ಕೆ ‘ಅಕ್ಕಲುಷ ಶೇಮ ಶೀಕಾ’ ಅಂತ ಸಂಸ್ಕೃತದ ಹೆಸರಿಡಲಾಗಿದೆ. ಈ ಪದಕ್ಕೆ ಕನ್ನಡದಲ್ಲಿ ‘ಪವಿತ್ರಳು’ ಅಂತ ಅರ್ಥ. ಈ ಚಿತ್ರದಲ್ಲಿ ರೇಖಾ ನಿರ್ದೇಶನದ ಜೊತೆ ನಟನೆಯೂ ಮಾಡ್ತಾರೆ. ಇನ್ನುಳಿದಂತೆ ಹೊಸ ಕಲಾವಿದರಿಗಾಗಿ ರೇಖಾ ಹುಡುಕಾಡ್ತಿದ್ದಾರೆ.

Comments are closed.