ಮನೋರಂಜನೆ

ಬಾಹುಬಲಿ 2 ಸಿನೆಮಾದ ರಾಣಾ ದಗ್ಗುಭಾಟಿ ಪೋಟೋ ವೈರಲ್ !

Pinterest LinkedIn Tumblr

baahubali-rana

ನವದೆಹಲಿ: ಬಹುನಿರೀಕ್ಷಿತ ಬಾಹುಬಲಿ 2 ಚಿತ್ರಕ್ಕೆ ಇದೀಗ ಅಂತಿಮ ಸ್ಪರ್ಶ ನೀಡಲಾಗುತ್ತಿದೆ. ಎಸ್ಎಸ್ ರಾಜಮೌಳಿ ನಿರ್ದೇಶನದ ಬಾಹುಬಲಿ ಮೊದಲ ಭಾಗದಲ್ಲಿ ಅಬ್ಬರಿಸಿದ್ದ ಬಲ್ಲಾಳ ದೇವ ಪಾತ್ರದಾರಿ ರಾಣಾ ದಗ್ಗುಭಾಟಿ ಇದೀಗ ಬಾಹುಬಲಿ 2 ಕ್ಲೈಮ್ಯಾಕ್ಸ್ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇದಕ್ಕಾಗಿ ಜಿಮ್ಮಲ್ಲಿ ಭಾರೀ ವರ್ಕ್ಔಟ್ನಡೆಸುತ್ತಿದ್ದು, ತಮ್ಮ ಈ ಕಸರತ್ತಿನ ಪೋಟೋವನ್ನು ಟ್ವಿಟರ್ನಲ್ಲಿ ಹರಿಬಿಡುವ ಮೂಲಕ ಮತ್ತಷ್ಟು ಕುತೂಹಲ ಕೆರಳಿಸಿದ್ದಾರೆ.

ಇನ್ನಷ್ಟು ಬಲಿಷ್ಠ ಎಂಬ ಅಡಿ ಬರಹದೊಂದಿಗೆ ತಮ್ಮ ಚಿತ್ರವನ್ನು ಟ್ವೀಟ್ ಮಾಡಿದ ಈ ನಟ, ಬಾಹುಬಲಿ 2ಗಾಗಿ ತನ್ನ ತೂಕವನ್ನು ಏರಿಸಿಕೊಂಡಿರುವೆ. ಆದರೆ ಈ ಹಿಂದಿನ ಬಲ್ಲಾಳ ದೇವನೇ ಅಧಿಕ ತೂಕ ಹೊಂದಿದ್ದ ಎಂದು ರಾಣಾ ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ. ಕೆಲ ದಿನಗಳ ಹಿಂದಷ್ಟೇ ಬಾಹುಬಲಿ 2 ಚಿತ್ರದ ಲೋಗೋ ಬಿಡುಗಡೆಮಾಡಲಾಗಿತ್ತು.

2017ರಲ್ಲಿ ತೆರೆಕಾಣಲಿರುವ ಈ ಚಿತ್ರಕ್ಕೆ ಈಗಿನಿಂದಲೇ ಬಾರಿ ಜನಮನ್ನಣೆ ದೊರೆಯುತ್ತದೆ. ಇದಕ್ಕೆ ಕಾರಣ ಕಟ್ಟಪ್ಪ ಬಾಹುಬಲಿಯನ್ನು ಏಕೆ ಕೊಂದ ಎಂಬ ಪ್ರಶ್ನೆಯೇ ಮೂಲ ಕಾರಣ.

Comments are closed.