ಮನೋರಂಜನೆ

ನಟಿ ನಮಿತಾ ರಿಕ್ಷಾ ಚಾಲಕಿ ಜತೆ ಸೆಲ್ಪೀ ತೆಗೆದುಕೊಂಡದ್ದು ಏಕೆ ಗೊತ್ತಾ..?

Pinterest LinkedIn Tumblr

actress-namitha

ಕನ್ನಡದಲ್ಲಿ ‘ನೀಲಕಂಠ’ನ ಮುಡಿಗೇರಿದ್ದ ‘ಹೂ’ ನಮಿತಾ ಈ ವರ್ಷ ‘ಸಿಕ್ಕಾಪಟ್ಟೆ ಇಷ್ಟಪಟ್ಟೆ’ ಅಂತ ಹುಡುಗೀರ ಗ್ಯಾಂಗ್ ಜತೆ ಸ್ಯಾಂಡಲ್ವುಡ್ಗೆ ಬಂದರೂ, ಕನ್ನಡದ ಸಿನಿಪ್ರಿಯರು ಆ ಸಿನಿಮಾವನ್ನು ಇಷ್ಟಪಡಲಿಲ್ಲ. ಕಾರಣ ಅವರು ವರ್ಷದಿಂದ ವರ್ಷಕ್ಕೆ ಸಿನಿಮಾ ಸಂಖ್ಯೆ ಜಾಸ್ತಿಯಾಗದಿದ್ದರೂ, ದೇಹದ ತೂಕ ಹೆಚ್ಚಿಸಿಕೊಂಡಿದ್ದರು. ಹೀಗಾಗಿಯೇ ಕಳೆದ ಐದು ವರ್ಷಗಳಲ್ಲಿ ಅವರು ನಟಿಸಿರುವ ಚಿತ್ರಗಳ ಸಂಖ್ಯೆ ಕೇವಲ 4. ಹೀಗೆ ಬೇಡಿಕೆ ಕಡಿಮೆ ಆಯ್ತು ಅಂತ ನಮಿತಾ ಅವರೇನೂ ಬೇಸರ ಮಾಡಿಕೊಂಡಿಲ್ಲ. ಸಿಕ್ಕ ಅವಕಾಶಗಳೇ ಸಾಕು ಅಂತ ಆಗೊಮ್ಮೆ, ಈಗೊಮ್ಮೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಹೀಗೆ ಸಿನಿಮಾ ಮೂಲಕ ಸದ್ದು ಮಾಡದಿದ್ದರೂ, ನಮಿತಾ ತಮ್ಮ ಸರಳತೆಯಿಂದ ಸುದ್ದಿ ಮಾಡುತ್ತಿದ್ದಾರೆ.

ಹೌದು, ಇತ್ತೀಚೆಗಷ್ಟೇ ನಮಿತಾ ಚೆನ್ನೈನಲ್ಲಿ ಕೆಲಸದ ನಿಮಿತ್ತ ಹೊರಗೆ ಹೋಗಿದ್ದರಂತೆ. ಸೀರೆಯುಟ್ಟ ಮಹಿಳೆಯೊಬ್ಬರು ರಸ್ತೆಯಲ್ಲಿ ಆಟೋ ಓಡಿಸುತ್ತಿರುವುದನ್ನು ನಮಿತಾ ನೋಡಿದ್ದಾರೆ. ಆಗ ಅವರಿಗೆ ಏನನ್ನಿಸಿತೋ, ತಕ್ಷಣ ಕಾರು ನಿಲ್ಲಿಸಿ. ಆಟೋ ಬಳಿ ಹೋದರಂತೆ. ಮಹಿಳಾ ಚಾಲಕಿಯೊಂದಿಗೆ ಮಾತನಾಡಿದಾಗ, ಆಕೆಯ ಹೆಸರು ಧನಲಕ್ಷ್ಮೀ ಎಂದು ತಿಳಿದು ಬಂದಿದೆ. ಕುಟುಂಬದ ಜವಾಬ್ದಾರಿ ಹೊರಲು ಆಟೋ ರಿಕ್ಷಾ ಓಡಿಸುತ್ತಿರುವುದಾಗಿ ಧನಲಕ್ಷ್ಮೀ, ನಮಿತಾ ಬಳಿ ಹೇಳಿಕೊಂಡಿದ್ದಾರೆ. ಆಕೆಯ ಧೈರ್ಯವನ್ನು ಮೆಚ್ಚಿದ ನಮಿತಾ, ಧನಲಕ್ಷ್ಮೀ ಜತೆಗೊಂದು ಸೆಲ್ಪೀ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಫೋಟೋ ನೋಡಿದ ನಮಿತಾಭಿಮಾನಿಗಳೂ ಸಹ ತಮ್ಮ ನೆಚ್ಚಿನ ನಟಿಯ ಸಿಂಪ್ಲಿಸಿಟಿಗೆ ಭೇಷ್ ಎಂದಿದ್ದಾರೆ.

Comments are closed.