ಕರ್ನಾಟಕ

ಕಾವೇರಿ ಬಿಕ್ಕಟ್ಟು; ಮಧ್ಯ ಪ್ರವೇಶಿಸಿದ ಕೇಂದ್ರ: ನಿರ್ವಹಣಾ ಮಂಡಳಿಗೆ ವಿರೋಧ

Pinterest LinkedIn Tumblr

kaveri

ನವದೆಹಲಿ: ಕೊನೆಗೂ ಕರ್ನಾಟಕದ ನೆರವಿಗೆ ಧಾವಿಸಿದ ಕೇಂದ್ರ ಸರ್ಕಾರ ಆಗಮಿಸಿದೆ. ಕಾವೇರಿ ನೀರು ನಿರ್ವಹಣಾ ಮಂಡಳಿ ರಚನೆ ಎಂದು ಸುಪ್ರೀಂಕೋರ್ಟ್’ನಲ್ಲಿ ಕೇಂದ್ರ ಸರ್ಕಾರ ಅಫಿಡವಿಟ್ ಸಲ್ಲಿಸಿದೆ.

ಮಂಡಳಿ ರಚನೆ ಆದೇಶ ಮಾರ್ಪಾಡು ಕೋರಿ ಕೇಂದ್ರದಿಂದ ಸುಪ್ರೀಂ ಕೋರ್ಟ್’ಗೆ ಅರ್ಜಿ ಅಲ್ಲಿಸಿದ್ದು, ಮಂಡಳಿ ರಚಿಸುವಂತೆ ಆದೇಶಿಸುವ ಅಧಿಕಾರ ಸುಪ್ರೀಂಕೋರ್ಟ್ಗೆ ಇಲ್ಲ ಬದಲಾಗಿ ಈ ಅಧಿಕಾರ ಕೇವಲ ಸಂಸತ್ತಿಗೆ ಮಾತ್ರ ಇದೆ ಎಂದು ಅಟಾರ್ನಿ ಜನರಲ್ ಮುಕುಲ್ ರೋಹ್ಟಗಿ ವಾದ ಮಂಡಿಸಿದ್ದಾರೆ.

ಕೇಂದ್ರದ ಮಾರ್ಪಾಡು ಅರ್ಜಿ ವಿಚಾರಣೆಗೆ ಅಂಗೀಕರಿಸಿದ ಸುಪ್ರೀಂಕೋರ್ಟ್ ನಾಳೆ ಮಧ್ಯಾಹ್ನ 2 ಗಂಟೆಗೆ ಅರ್ಜಿ ವಿಚಾರಣೆ ನಡೆಸಲಿದೆ. ಆದರೆ ಕೇಂದ್ರ ಸರ್ಕಾರದ ಸಲ್ಲಿಸಿರುವ ಈ ಅರ್ಜಿ ವಿಚಾರಣೆಗೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದೆ.

Comments are closed.