ಮನೋರಂಜನೆ

ಸ್ನೇಹಿತರಾಗಿದ್ದ ಬಿಪಾಶಾ-ಪ್ರಿಯಾಂಕಾ ಈಗ ವೈರಿಗಳಾಗಿರುದರ ಹಿಂದಿದೆ ರೋಚಕ ಕಹಾನಿ !

Pinterest LinkedIn Tumblr

bipasha_basu_priyanka_chopra_war

ತೀರಾ ಇತ್ತೀಚಿನವರೆಗೂ ಸ್ನೇಹಿತೆಯರಾಗಿದ್ದ ಪ್ರಿಯಾಂಕಾ ಚೋಪ್ರಾ ಮತ್ತು ಬಿಪಾಶಾ ಬಸು ಇದ್ದಕ್ಕಿದ್ದಂತೆಯೇ ದುಷ್ಮನ್ಗಳಾಗಿದ್ದಾರೆ. ಇದಕ್ಕೆಲ್ಲ ಕಾರಣ ರಾಧಿಕಾ ಆಪ್ಟೆ ಎಂಬುದು ಇಂಟರೆಸ್ಟಿಂಗ್! ಎಲ್ಲಿಯೂ ಸಾರ್ವಜನಿಕವಾಗಿ ಜಗಳ ಮಾಡಿಕೊಳ್ಳದ ಈ ಮೂವರು ಪರಸ್ಪರ ದ್ವೇಷಿ ಗಳಾಗಿದ್ದು ಏಕೆ ಅಂತಿರಾ? ಅದರ ಹಿಂದೊಂದು ಕಹಾನಿ ಇದೆ.

ನಡೆದಿದ್ದೇನೆಂದರೆ, ಪ್ರಿಯಾಂಕಾ ನಿರ್ವಿುಸಲಿರುವ ಹೊಸ ಚಿತ್ರಕ್ಕೆ ನಾಯಕಿಯ ಆಯ್ಕೆ ಪ್ರಕ್ರಿಯೆ ನಡೆಯುತ್ತಿತ್ತು. ಮಹಿಳಾ ಉದ್ಯಮಿ ಕಲ್ಪನಾ ಸರೋಜ್ ಅವರ ಜೀವನಾಧಾರಿತ ಕಥೆಯುಳ್ಳ ಈ ಚಿತ್ರದಲ್ಲಿ ನಟಿಸಲು ಬಿಪಾಶಾ ಮತ್ತು ರಾಧಿಕಾ ಇಬ್ಬರೂ ಉತ್ಸಾಹ ತೋರಿಸಿದ್ದರು. ಹೇಗಿದ್ದರೂ ತಾವು ಪ್ರಿಯಾಂಕಾಗೆ ಸ್ನೇಹಿತೆಯಾದ್ದರಿಂದ ತಮ್ಮನ್ನೇ ಸೆಲೆಕ್ಟ್ ಮಾಡುತ್ತಾರೆ ಎಂಬುದು ಬಿಪಾಶಾ ನಂಬಿಕೆಯಾಗಿತ್ತು. ಆದರೆ ನಡೆದಿದ್ದೇ ಬೇರೆ. ಆ ಪಾತ್ರಕ್ಕೆ ರಾಧಿಕಾ ಸೂಕ್ತವಾಗುತ್ತಾರೆ ಎಂದು ಪ್ರಿಯಾಂಕಾಗೆ ಅನಿಸಿದ್ದೇ ತಡ, ಯಾವುದೇ ಮುಲಾಜಿಲ್ಲದೆ ನಾಯಕಿ ಪಟ್ಟವನ್ನು ರಾಧಿಕಾಗೆ ನೀಡಿದರು. ಪರಿಣಾಮ, ಬಿಪಾಶಾ ನಂಬಿಕೆ ತಲೆಕೆಳಗಾಯಿತು. ಕಡೇ ಪಕ್ಷ ಸ್ನೇಹಕ್ಕಾದರೂ ಬೆಲೆ ಕೊಟ್ಟು ತಮ್ಮನ್ನು ಆಯ್ಕೆ ಮಾಡಬಹುದಿತ್ತು ಎಂದು ಬಿಪಾಶಾ ವಾದ ಮಂಡಿಸಿದ್ದಾರೆ. ಆದರೆ ವೃತ್ತಿಯಲ್ಲಿ ವಸ್ತುನಿಷ್ಠತೆ ಕಾಪಾಡಿಕೊಂಡಿರುವ ಪ್ರಿಯಾಂಕಾ ಯಾವುದೇ ಕಾರಣಕ್ಕೂ ನಿರ್ಧಾರ ಬದಲಾಯಿಸಿಲ್ಲ. ಇದು ಇವರಿಬ್ಬರ ನಡುವೆ ಮುನಿಸಿಗೆ ಕಾರಣವಾಗಿದೆ.

ಬಿಪಾಶಾ ಜತೆಗಿನ ಸ್ನೇಹ ಮುರಿದು ಬಿದ್ದರೇನಂತೆ, ಇದೀಗ ಪ್ರಿಯಾಂಕಾಗೆ ಹೊಸ ಗೆಳತಿ ಸಿಕ್ಕಿದ್ದಾರೆ. ಯಾರದು? ಕತ್ರಿನಾ ಕೈಫ್! ಹೌದು, ಈವರೆಗೂ ಅಷ್ಟಕಷ್ಟೇ ಎಂಬಂತಿದ್ದ ಇವರಿಬ್ಬರೂ ಕೆಲವು ದಿನಗಳಿಂದ ತುಂಬ ಅನ್ಯೋನ್ಯತೆ ಬೆಳೆಸಿಕೊಂಡಿದ್ದಾರಂತೆ. ಇತ್ತೀಚೆಗೆ ಇಬ್ಬರೂ ಒಟ್ಟಾಗಿ ಡಿನ್ನರ್ ಸವಿದಿದ್ದು, ರಣಬೀರ್ ಕಪೂರ್ ಬಗ್ಗೆಯೂ ಮಾತನಾಡಿದ್ದಾರಂತೆ. ಪುರುಷರ ದಬ್ಬಾಳಿಕೆ ಎದುರಿಸಲು ಮಹಿಳೆಯರೆಲ್ಲ ಹೇಗೆ ಒಗ್ಗೂಡಬೇಕು ಎಂದೂ ಚರ್ಚೆ ನಡೆಸಿದ್ದಾರೆ ಎಂಬ ಗುಸುಗುಸು ಬಿ-ಟೌನ್ ಗಲ್ಲಿಯಿಂದ ಕೇಳಿಬರುತ್ತಿದೆ.

Comments are closed.