ಮನೋರಂಜನೆ

ಹೊಸ ಕೆಲಸಕ್ಕೆ ಕೈ ಹಾಕಿದ ನಟಿ ರಾಖಿ ಸಾವಂತ್ !

Pinterest LinkedIn Tumblr

rakhi

ಸಿನಿಮಾಗಿಂತ ಹೆಚ್ಚಾಗಿ ತಮ್ಮ ವಿವಾದಿತ ಹೇಳಿಕೆ ಮತ್ತು ಕಣ್ ಕುಕ್ಕುವ ಡ್ರೆಸಿಂಗ್ನಿಂದ ಹೆಚ್ಚು ಸದ್ದು, ಸುದ್ದಿ ಮಾಡಿದ ‘ಕು/ವಿ’ ಖ್ಯಾತಿ ಬಾಲಿವುಡ್ ನಟಿ ರಾಖಿ ಸಾವಂತ್ ಅವರಿಗೆ ಸಲ್ಲುತ್ತದೆ. ಸಿನಿಮಾಗಳಲ್ಲಿ ನಟಿಸಿ, ಕುಣಿದು, ಕಿರುತೆರೆಯಲ್ಲಿ ಕಾಣಿಸಿಕೊಂಡು, ಮ್ಯೂಸಿಕ್ ವಿಡಿಯೋ ಸಾಂಗ್ಗಳಲ್ಲಿ ಮಿಂಚಿದ್ದು ಸಾಲದು ಅಂತ ರಾಜಕಾರಣದಲ್ಲೂ ಇಣುಕು ಹಾಕಿದ ಗಟ್ಟಿಗಿತ್ತಿ ರಾಖಿ. ಈ ‘ಬಜಾರಿ ಬ್ಯೂಟಿ’ ಈಗ ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ.

ಹೌದು, ರಾಖಿ ಸಾವಂತ್ ಸದ್ಯ ಡೈರೆಕ್ಟರ್ ಕ್ಯಾಪ್ ಧರಿಸಿದ್ದಾರೆ. ಹಾಗಂತ ಅವರೇನೂ ಸಿನಿಮಾ ನಿರ್ದೇಶಿಸುತ್ತಿಲ್ಲ, ಬದಲಾಗಿ ಮ್ಯೂಸಿಕ್ ವೀಡಿಯೋ ಒಂದಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ‘ಈ ಮ್ಯೂಸಿಕ್ ವಿಡಿಯೋದಲ್ಲಿ 30 ಡಾನ್ಸರ್ಗಳನ್ನು ನಿರ್ದೇಶಿಸಲಿದ್ದೇನೆ. ಜತೆಗೆ ನನ್ನ ಅಭಿಮಾನಿಗಳ ಒತ್ತಾಯದ ಮೇರೆಗೆ ನಾನೂ ಕಾಣಿಸಿಕೊಳ್ಳಲಿದ್ದೇನೆ. ಇದೇ ತಿಂಗಳು ಗೋವಾದಲ್ಲಿ ಶೂಟಿಂಗ್ ಪ್ರಾರಂಭವಾಗಲಿದೆ. ನಾನಂತೂ ಸಖತ್ ಎಕ್ಸೈಟ್ ಆಗಿದ್ದೇನೆ’ ಎಂದು ಹಾಡಿನ ಕುರಿತು ರಾಖಿ ಮಾಹಿತಿ ನೀಡಿದ್ದಾರೆ. ಇತ್ತೀಚೆಗಷ್ಟೇ ತಾವು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವ ಕುರಿತು ತುಟಿ ಬಿಚ್ಚಿರುವ ಈ ‘ಪರ್ದೇಸಿಯಾ’ ಪ್ರತಿಭೆ, ‘ಅದೇನು ಮಹಾ, ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವ ಬಾಲಿವುಡ್ ನಟಿಯರಿಂದ ಬರೋಬ್ಬರಿ 3 ಟ್ರಕ್ನಷ್ಟು ಪ್ಲಾಸ್ಟಿಕ್ ಶೇಖರಿಸಿಕೊಳ್ಳಬಹುದು’ ಎಂದು ಕಾಲೆಳೆದಿದ್ದಾರೆ.

Comments are closed.