ಮನೋರಂಜನೆ

ಉಗ್ರರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯನ್ನು ಹೊಗಳಿದ ಗಾಯಕ ಅದ್ನಾನಿ ಸಮಿ

Pinterest LinkedIn Tumblr

adnan-sami

ಮುಂಬೈ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿನ ಉಗ್ರ ನೆಲೆಗಳ ಮೇಲೆ ಭಾರತೀಯ ಸೇನೆ ನಡೆಸಿದ ಸೀಮಿತ ದಾಳಿಯನ್ನು ಇತ್ತೀಚೆಗಷ್ಟೇ ಭಾರತೀಯ ಪೌರತ್ವವನ್ನು ಪಡೆದಿದ್ದ ಗಾಯಕ ಅದ್ನಾನಿ ಸಮಿ ಹೊಗಳಿದ್ದಾರೆ.

ಗಡಿಯಲ್ಲಿ ಉಗ್ರರು ಭಯೋತ್ಪಾದನಾ ಚಟುವಟಿಕೆಗಳನ್ನು ನಡೆಸುತ್ತಿದ್ದರೂ ಇಷ್ಟು ದಿನ ಮೌನವಾಗಿಯೇ ಇದ್ದು, ಶಾಂತಿಯನ್ನು ಕಾಪಾಡಿಕೊಂಡು ಬಂದಿದ್ದ ಭಾರತೀಯ ಸೇನೆ ಭಯೋತ್ಪಾದನೆ ವಿರುದ್ಧ ಸಿಡೆದಿದ್ದಿತ್ತು. ಇದರಂತೆ ಉಗ್ರರ ನೆಲೆಗಳ ಮೇಲೆ ನಡೆಸಲಾದ ಸೀಮಿತ ದಾಳಿಯಲ್ಲಿ ಸುಮಾರು 50 ಉಗ್ರರನ್ನು ಸದೆಬಡಿಯುವಲ್ಲಿ ಯಶಸ್ವಿಯಾಗಿತ್ತು.

ಭಾರತೀಯ ಸೇನೆ ನಡೆಸಿದ್ದ ಸೀಮಿತ ದಾಳಿ ಕುರಿತಂತೆ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಅದ್ನಾನ್ ಸಮಿ, ಭಾರತ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ ದೊಡ್ಡ ಶುಭಾಷಯಗಳನ್ನು ಹೇಳಲು ಇಚ್ಛಿಸುತ್ತೇನೆ. ಫ್ರೌಢತೆ ಹಾಗೂ ಅತ್ಯಂತ ಚಾತುರ್ಯತೆಯಿಂದ ನಮ್ಮ ಸೇನೆ ಉಗ್ರರ ವಿರುದ್ಧ ಯಶಸ್ವಿಯಾಗಿ ಕಾರ್ಯಾಚರಣೆಯನ್ನು ನಡೆಸಿದೆ ಎಂದು ಹೇಳಿದ್ದಾರೆ.

ಅದ್ನಾನ್ ಸಮಿ ಅವರ ಈ ಪ್ರತಿಕ್ರಿಯೆಗೆ ಹಲವು ಪಾಕಿಸ್ತಾನ ಜನರು ವಿರೋಧ ವ್ಯಕ್ತಪಡಿಸಿದ್ದು, ಸಾಕಷ್ಟು ಅಕ್ರೋಶಭರಿತವಾಗಿ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ಪಾಕಿಸ್ತಾನ ಜನರ ಈ ಅಕ್ರೋಶಭರಿತ ಪ್ರತಿಕ್ರಿಯೆಗೆ ಅದ್ನಾನಿ ಸಮಿ ತಮ್ಮ ಟ್ವಿಟರ್ ನಲ್ಲಿ ಮತ್ತೊಂದು ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಈ ಹಿಂದೆ ನಾನು ಮಾಡಿದ್ದ ಟ್ವೀಟ್ ಗೆ ಪಾಕಿಸ್ತಾನ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲಿನ ಜನರು ಪಾಕಿಸ್ತಾನ ಮತ್ತು ಭಯೋತ್ಪಾದನೆಯನ್ನು ಒಂದೇ ರೀತಿಯಾಗಿ ನೋಡುತ್ತಿದ್ದಾರೆಂಬುದು ಈ ಪ್ರತಿಕ್ರಿಯೆಗಳಿಂದ ಸ್ಪಷ್ಟವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.

Comments are closed.