ಎಲ್ಇಡಿಯ ಬೀದಿ ದೀಪಗಳಿಂದ ಮನುಷ್ಯನ ದೇಹದ ಮೇಲೆ ಹಾನಿಕಾರಕ ಪರಿಣಾಮ ಉಂಟಾಗುತ್ತದೆ ಎಂದು ಹೊಸ ಸಂಶೋಧನೆಯಿಂದ ಬಹಿರಂಗವಾಗಿದೆ. ಸಿಯಾಟಿಲ್ ಎಂಬ ಅಂಶವನ್ನು ಹೊಂದಿರುವ ಬಲ್ಬ್ನಿಂದ ಬೊಜ್ಜು ಸೇರಿದಂತೆ ವಿವಿಧ ಖಾಯಿಲೆಗಳು ಬರುವ ಸಾಧ್ಯತೆ ಇದೆ ಎಂದು ಅಮೆರಿಕನ್ ಮೆಡಿಕಲ್ ಅಸೋಸಿಯೇಶನ್ ತಿಳಿಸಿದೆ.
ಪ್ರಕಾಶಮಾನವಾದ ಬೆಳಕನ್ನು ಹೊಂದಿದ ಮನೆಗಳಲ್ಲಿ ನಿದ್ದೆ ಬರದೇ ಇರುವುದು, ತೂಕಡಿಕೆ, ಹಗಲಿನ ಕಾರ್ಯಚಟುವಟಿಕೆ ದುರ್ಬಲಗೊಳ್ಳುವುದು, ಸ್ಥೂಲ ಕಾಯ ಹೆಚ್ಚಾಗಿ ಕಂಡು ಬರುತ್ತದೆ ಎಂದು ಇತ್ತೀಚಿನ ಹಲವು ಸಮೀಕ್ಷೆಗಳು ತಿಳಿಸಿವೆ. ನೀಲಿ ಬಣ್ಣದ ಎಲ್ಇಡಿ ಬೀದಿ ದೀಪಗಳು ತರಂಗಾಂತರದಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ರಾತ್ರಿ ಸಮಯದಲ್ಲಿ ಮೆಲಟೋನಿನ್ನ್ನು ನಿಗ್ರಹಿಸುತ್ತದೆ. ಬಿಳಿ ಬಣ್ಣದ ಎಲ್ಇಡಿ ದೀಪಗಳು ರೂಢಿಯಲ್ಲಿರುವ ಸಾದಾ ದೀಪಕ್ಕಿಂತ ಐದು ಪಟ್ಟು ಹೆಚ್ಚಿನ ಪರಿಣಾಮವನ್ನು ನಿದ್ದೆಯ ಮೇಲೆ ಬೀರುತ್ತದೆ. ಅಲ್ಲದೇ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳನ್ನೂ ತಂದಿಡುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.