ಮನೋರಂಜನೆ

ಮದುವೆಗಾಗಿ ಹಿಂದೂ ಧರ್ಮಕ್ಕೆ ಮತಾಂತರ ಗೊಂಡರೆ ನಟಿ ಸಮಂತಾ?

Pinterest LinkedIn Tumblr

samantha1

ಹೈದ್ರಾಬಾದ್: ಟಾಲಿವುಡ್ ನಲ್ಲಿ ಸದ್ಯಕ್ಕೆ ಟಾಕ್ ಆಫ್ ದ ಟಾಪಿಕ್ ಆಗಿರುವ ಜೋಡಿ ಎಂದರೆ ಅದು ನಟಿ ಸಮಂತಾ ರುತ್ ಪ್ರಭು ಮತ್ತು ನಟ ನಾಗ ಚೈತನ್ಯ. ಇನ್ನೇನು ಸದ್ಯದಲ್ಲೇ ಈ ಜೋಡಿ ಧಾಂ ಧೂಂ ಆಗಿ ಮದುವೆ ಆಗಲಿದ್ದಾರೆ.

ಅಂದಹಾಗೆ ನಟಿ ಸಮಂತಾ ಅವರು ತಮ್ಮ ಪ್ರೀತಿಗೋಸ್ಕರ ತಮ್ಮ ಮೂಲ ಕ್ರಿಶ್ಚಿಯನ್ ಧರ್ಮವನ್ನು ಕೂಡ ಬಿಟ್ಟು ಕೊಡಲು ತಯಾರಾಗಿದ್ದಾರೆ, ಅಂತ ಸದ್ಯಕ್ಕೆ ಇಡೀ ಟಾಲಿವುಡ್ ಅಂಗಳದಲ್ಲಿ ಗುಲ್ಲೆದ್ದಿದೆ.

ಅಷ್ಟಕ್ಕೂ ಈ ಅಂತೆ-ಕಂತೆ ಸುದ್ದಿಗೆ ರೆಕ್ಕೆ-ಪುಕ್ಕ ಹುಟ್ಟಲು ಪ್ರಮುಖ ಕಾರಣ ನಟಿ ಸಮಂತಾ ರುತ್ ಅವರು, ಅಕ್ಕಿನೇನಿ ನಾಗಚೈತನ್ಯ ಅವರ ಮನೆಯಲ್ಲಿ ಪೂಜೆಯೊಂದರಲ್ಲಿ ಭಾಗಿಯಾಗಿದ್ದು. ಈ ವಿಶೇಷ ಪೂಜೆಯ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಹಲವು ಅನುಮಾನಗಳಿಗೆ ಎಡೆ ಮಾಡಿ ಕೊಟ್ಟಿದೆ.

(ಫಿಲ್ಮಿಬೀಟ್)

Comments are closed.