ಕ್ರೀಡೆ

ಈ ವಿರಾಟ್‌ ಕೊಹ್ಲಿಯನ್ನು ಕಂಡು ಎಷ್ಟೋ ಜನ ಮೋಸ ಹೋಗಿದ್ದಾರೆ..!

Pinterest LinkedIn Tumblr

khli_look_alike

ಕಾನ್ಪುರ: ಜಗತ್ತಿನಲ್ಲಿ ಒಬ್ಬ ವ್ಯಕ್ತಿಯನ್ನೇ ಹೋಲುವ ಇನ್ನೊಬ್ಬ ವ್ಯಕ್ತಿ ಇರುತ್ತಾನೆ. ವೀರೇಂದ್ರ ಸೆಹ್ವಾಗ್‌, ಸಚಿನ್‌ ತೆಂಡುಲ್ಕರ್‌, ಶಿಖರ್‌ ಧವನ್‌, ಬಾಲಿವುಡ್‌ ನಟರಾದ ಶಾರುಖ್‌ ಖಾನ್‌, ಸೈಫ್ ಅಲಿ ಖಾನ್‌ ರಂತಹ ಸ್ಟಾರ್‌ಗಳನ್ನೇ ಹೋಲುವ ವ್ಯಕ್ತಿಗಳನ್ನು ಈ ಹಿಂದೆ ನಾವು ನೋಡಿದ್ದೇವೆ. ಇದೀಗ ಭಾರತ ಟೆಸ್ಟ್‌ ತಂಡದ ನಾಯಕ ವಿರಾಟ್‌ ಕೊಹ್ಲಿಯನ್ನೇ ಹೋಲುವ ವ್ಯಕ್ತಿಯೊಬ್ಬರು ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಮಾತ್ರವಲ್ಲ ಸ್ವತಃ ಆಫ್ರಿಕಾ ಸ್ಫೋಟಕ ಬ್ಯಾಟ್ಸ್‌ಮನ್‌ ಎಬಿಡಿ ವಿಲಿಯರ್, ಕ್ರಿಕೆಟ್‌ ವಿಶ್ಲೇಷಕ ಹರ್ಷಾ ಭೋಗ್ಲೆ ಕೂಡ ಮೋಸ ಹೋಗಿದ್ದಾರೆ. ವಿಷಯ ತಿಳಿದ ಬಳಿಕ ಸ್ವತಃ ಕೊಹ್ಲಿ ಗೌರವ್‌ ಜತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

ಯಾರಿವರು?ಹೆಸರು ಗೌರವ್‌ ನಾರಂಗ್‌. ಮೂಲತಃ ಕಾನ್ಪುರದ ಉದ್ಯಮಿ. ಕೊಹ್ಲಿಯ ದೊಡ್ಡ ಅಭಿಮಾನಿ. ಇವರು ಕೊಹ್ಲಿಯನ್ನೇ ಹೋಲುತ್ತಾರೆ. ಕೊಹ್ಲಿಯಂತೆ ಹೇರ್‌ಕಟ್ಟಿಂಗ್‌, ಗಡ್ಡವನ್ನು ಬಿಟ್ಟುಕೊಂಡಿದ್ದಾರೆ. ನಡಿಗೆ, ಬಟ್ಟೆ ಎಲ್ಲವೂ ಕೊಹ್ಲಿಯಂತೆ ಇರುವುದರಿಂದ ಎಲ್ಲರು ಇವರನ್ನು ಕೊಹ್ಲಿಯೆಂದೇ ಭಾವಿಸಿ ಹಿಂದೆ ಬಿದ್ದಿದ್ದಾರೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಾನ್ಪುರದ ಹೋಟೆಲ್‌ ಲ್ಯಾಂಡ್‌ ಮಾಕ್‌ ìಗೆ ಗೌರವ್‌ ಹೋಗಿದ್ದರು. ಇದೇ ವೇಳೆ ಭಾರತ – ದಕ್ಷಿಣ ಆಫ್ರಿಕಾ ತಂಡ ಅದೇ ಹೋಟೆಲ್‌ನಲ್ಲಿ ತಂಗಿತ್ತು. ಈ ವೇಳೆ ಎಬಿಡಿ ವಿಲಿಯರ್ ಕೊಹ್ಲಿಯೆಂದು ಭಾವಿಸಿ “ಹಲೋ..ವಿರಾಟ್‌’ ಎಂದಿದ್ದಾರೆ. ನಂತರ ಅವರಿಗೆ ವಿರಾಟ್‌ ಅಲ್ಲ ಎನ್ನುವುದು ತಿಳಿದಿದೆ. ಕ್ರಿಕೆಟ್‌ ವಿಶ್ಲೇಷಕ ಹರ್ಷಾ ಭೋಗ್ಲೆ ಕೂಡ ಹೋಟೆಲ್‌ನಲ್ಲಿ ಅದೇ ಗೌರವ್‌ ನಾರಂಗ್‌ ಅವರನ್ನು ನೋಡಿ ಗೊಂದಲಕ್ಕೀಡಾಗಿದ್ದಾರೆ!

Comments are closed.