ಮನೋರಂಜನೆ

ಇದು ನನ್ನ ಕೊನೆ ಅದ್ಭುತ! ಚಿತ್ರರಂಗಕ್ಕೆ ದೀಪಾಗೌಡ ಗುಡ್‌ಬೈ…

Pinterest LinkedIn Tumblr

deepaನಟಿ ದೀಪಾ ಚಿತ್ರರಂಗದಿಂದ ದೂರವಾಗುತ್ತಿದ್ದಾರೆ! – ಇದು ಯಾರೋ ಹೇಳಿದ ಮಾತಲ್ಲ. ಸ್ವತಃ ಅವರೇ ಸ್ಪಷ್ಟಪಡಿಸಿರುವ ಮಾತು. ಹೌದು, ದೀಪಾಗೌಡ ಗಾಂಧಿನಗರಕ್ಕೆ ಕಾಲಿಟ್ಟು ಎರಡು ವರ್ಷಗಳು ಕಳೆದಿವೆ. ಈ ಅವಧಿಯಲ್ಲಿ ಏಳು ಚಿತ್ರಗಳಲ್ಲಿ ನಟಿಸಿರುವ ಅವರು, ಇಂಥದ್ದೊಂದು ದಿಢೀರ್‌ ನಿರ್ಧಾರ ತೆಗೆದುಕೊಂಡಿದ್ದಾರೆ. ಇಷ್ಟಕ್ಕೂ ದೀಪಾಗೌಡ ಚಿತ್ರರಂಗಕ್ಕೆ ಗುಡ್‌ಬೈ ಹೇಳ್ಳೋಕೆ ಕಾರಣವೇನು? ಅದಕ್ಕೆ ಸ್ಪಷ್ಟ ಉತ್ತರವಿಲ್ಲ. ಆದರೆ, ಆ ಬಗ್ಗೆ ದೀಪಾಗೌಡ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ.

ಹೇಗಿದೆ ಸಿನಿ ಜರ್ನಿ? ಗೊತ್ತಿಲ್ಲ. ಹಾಗಂದ್ರೆ ?
– ಮುಂದೆ ನಾನು ಯಾವ ಪ್ರಾಜೆಕ್ಟ್ ಮಾಡ್ತಾ ಇಲ್ಲ.

ಅಂದರೆ ಅವಕಾಶ ಬಂದಿಲ್ಲ ಅಂತಾನೋ ಅಥವಾ ಬೇರೆ ಕಾರಣವಾ?
– ಹಾಗೇನೂ ಇಲ್ಲ. ನಾನು ಚಿತ್ರರಂಗದಿಂದ ದೂರ ಇರಲು ನಿರ್ಧರಿಸಿದ್ದೇನೆ

ಅರೇ, ಏನಾಯ್ತು, ಯಾಕೆ ಈ ಸಡನ್‌ ನಿರ್ಧಾರ?
– ಎಂಥದ್ದೂ ಇಲ್ಲ, ನನಗೆ ಸಾಕೆನಿಸಿತು. ಸೋ, ಬೇಡ ಅಂತ ನಾನೇ ವೈಯಕ್ತಿಕ ನಿರ್ಧಾರ ಮಾಡಿಕೊಂಡಿದ್ದೇನೆ.

ಮುಂದಾ…?
– ನಾನು ಸ್ಯಾಮ್‌ಸಂಗ್‌ ಕಂಪೆನಿಯಲ್ಲಿ ಕೆಲಸ ಮಾಡ್ತಾ ಇದೀನಿ. ಅಲ್ಲೇ ಕೆಲಸ ಮುಂದುವರೆಸ್ತೀನಿ.

ಹೀಗೆ ದಿಢೀರ್‌ ಡಿಸೈಡ್‌ನಿಂದ ಪ್ರಶ್ನೆಗಳು ಹುಟ್ಟಿಕೊಳ್ಳುತ್ತವಲ್ಲಾ?
– ನಂಗೆ ಇಲ್ಲಿ ಯಾವುದೇ ಬೇಜಾರಿಲ್ಲ. ಹ್ಯಾಪಿಯಾಗಿ ಕೆಲಸ ಮಾಡಿದ್ದೀನಿ. ಯಾಕೋ ಸಿನ್ಮಾ ಮಾಡೋಕೆ ಇಂಟ್ರೆಸ್ಟ್‌ ಇಲ್ಲ ಅನಿಸ್ತಾ ಇತ್ತು. ಸೋ, ಹೊರ ಹೋಗುತ್ತಿದ್ದೇನೆ.

ನೀವೂ ನಿಮ್ಮ ಅಕ್ಕನ ಫಾಲೋ ಮಾಡ್ತೀರಾ ಅನ್ನಿ?
– ಅವರಿಗೆ ಮದ್ವೆಯಾಯ್ತು. ನಂಗಿನ್ನೂ ಇಲ್ಲ. ಆ ಬಗ್ಗೆ ಸದ್ಯ ಯೋಚಿಸಿಲ್ಲ.

ಇಂಡಸ್ಟ್ರಿಯಲ್ಲಿ ಬೇಜಾರಾಗುವ ಘಟನೆಗಳೇನಾದ್ರೂ ನಡೀತಾ?
-ಎಂಥದ್ದಲ್ಲೂ ಇಲ್ಲಪ್ಪಾ, ಖುಷಿಯಾಗಿಯೇ ಕೆಲಸ ಮಾಡಿದ್ದೇನೆ. ಯಾವ ಘಟನೆಗಳೂ ನಡೆದಿಲ್ಲ. ಬೇಜಾರೂ ಇಲ್ಲ.

ಒಳ್ಳೇ ಅವಕಾಶ ಬಂದರೆ?
– ಇದುವರೆಗೆ ಬಂದದ್ದನ್ನು ಒಪ್ಪಿಕೊಂಡು ಮಾಡಿದೆ. ಒಳ್ಳೇ ಅವಕಾಶಕ್ಕೆ ಕಾದಿದ್ದುಂಟು ಬರಲಿಲ್ಲ. ಈಗ ಬಂದರೂ ಬೇಡ.

ಬೇರೆ ಭಾಷೆಯಿಂದ ಅವಕಾಶ ಬಂದರೆ?
– ಈಗಾಗಲೇ ತಮಿಳಿನ “ಮುಲ್ಲ ಮುಲ್ಲಾವರೈ’ ಎಂಬ ತಮಿಳು ಚಿತ್ರದಲ್ಲಿ ಮಾಡಿದ್ದೇನೆ. ಬೇರೆ ಬಂದರೂ ಒಲ್ಲೆ.

ನೀವೇನಾದ್ರೂ ಡಿಪ್ರಶನ್‌ಗೆ ಹೋಗಿಬಿಟ್ರೋ ಏನೋ?
– ಹ್ಯಾಪಿಯಾಗಿದ್ದೇನೆ. ಮೊದಲೇ ಹೇಳಿದ್ನಲ್ಲ. ಇದು ನನ್ನ ಪರ್ಸನಲ್‌ ಡಿಸೈಡ್‌.

ಓದುವ ಸಲುವಾಗಿ ಏನಾದ್ರೂ ಗುಡ್‌ಬೈ ಹೇಳ್ತಾ ಇದೀರಾ?
– ಹಾಗೇನೂ ಇಲ್ಲ. ಈಗಾಗಲೇ ಕಂಪೆನಿಯೊಂದರಲ್ಲಿ ಕೆಲಸ ಮಾಡ್ತಾ ಇದೀನಿ. ಏರ್‌ ಹೋಸ್ಟೆಸ್‌ ತರಬೇತಿ ಆಗಿದೆ. ಇಂಡಿಗೋ ಏರ್‌ಲೈನ್ಸ್‌ನಲ್ಲಿ ಕೆಲಸವೂ ಮಾಡಿದ್ದುಂಟು. ಬಿಕಾಂ ಮುಗಿದಿದೆ. ಎಂಬಿಎ ಮಾಡುತ್ತಿದ್ದೇನೆ.

-ಉದಯವಾಣಿ

Comments are closed.