ಅಂತರಾಷ್ಟ್ರೀಯ

ನೀರಿಗೆ ಬಿದ್ದ 2 ವರ್ಷದ ಮಗುವನ್ನು ರಕ್ಷಿಸ ಹೋಗಿ ಪ್ರಾಣ ಬಿಟ್ಟ ತಾಯಿ!

Pinterest LinkedIn Tumblr

coloradomomಸಾಲ್ಟ್ ಲೇಕ್ ಸಿಟಿ: ಬೋಟಿಂಗ್ ವೇಳೆ ನೀರಿಗೆ ಬಿದ್ದ 2 ವರ್ಷದ ಮಗುವನ್ನು ರಕ್ಷಿಸಲು ಮುಂದಾದ ತಾಯಿಯೊಬ್ಬಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ದುರಂತ ಅಮೆರಿಕದ ಕೊಲೊರಾಡೋ ದಲ್ಲಿ ನಡೆದಿದೆ.
ಕೊಲೊರಾಡೊದ ಸಾಲ್ಟ್ ಲೇಕ್ ಸಿಟಿ ಬಳಿ ಇರುವ ಲೇಕ್ ಪಾವೆಲ್ ನಲ್ಲಿ ಈ ದುರಂತ ಸಂಭವಿಸಿದ್ದು, ಮಗುವನ್ನು ರಕ್ಷಿಸಿ ಪ್ರಾಣಬಿಟ್ಟ ತಾಯಿಯನ್ನು 35 ವರ್ಷದ ಚೆಲ್ಸೆ ರಸೆಲ್ ಎಂದು ಗುರುತಿಸಲಾಗಿದೆ. ಸಾಲ್ಟ್ ಲೇಕ್ ಸಿಟಿ ಬಳಿ ಇರುವ ಲೇಕ್ ಪಾವೆಲ್ ಗೆ ತನ್ನ ಮಕ್ಕಳೊಂದಿಗೆ ಪ್ರವಾಸಕ್ಕೆ ಬಂದಿದ್ದ, ಚೆಲ್ಸೆ ರಸೆಲ್ ಬೋಟಿಂಗ್ ಮುಂದಾಗಿದ್ದಾರೆ. ಈ ವೇಳೆ ಆಕೆಯ 2 ವರ್ಷದ ಪುಟ್ಟ ಮಗು ಆಟವಾಡುವ ವೇಳೆ ನೀರಿಗೆ ಬಿದ್ದಿದ್ದು, ಕೂಡಲೇ ನೀರಿಗೆ ಹಾರಿದ ಚೆಲ್ಸೆ ರಸೆಲ್ ನೀರಿನಲ್ಲಿ ಮುಳುಗಿದ್ದ ಮಗುವನ್ನು ನೀರಿನ ಮೇಲೆ ಎತ್ತಿ ಹಿಡಿದಿದ್ದಾರೆ.
ಈ ವೇಳೆ ಸುತ್ತಮುತ್ತ ಬೇರೆ ಯಾರೂ ಇಲ್ಲದ ಕಾರಣ ಮಗುವನ್ನು ಯಾರೂ ದಡಕ್ಕೆ ಸಾಗಿಸಿಲ್ಲ. ತಾಯಿ ಚೆಲ್ಸೆ ರಸೆಲ್ ಸತತ ಐದು ನಿಮಿಷಗಳ ಕಾಲ ನೀರಿನಲ್ಲಿ ಮುಳುಗಿ ಮಗುವನ್ನು ನೀರಿನ ಮೇಲೆ ಎತ್ತಿ ಹಿಡಿದಿದ್ದಾರೆ. ಈ ವೇಳೆ ಇದನ್ನು ಕಂಡ ದಾರಿಹೋಕರು ಕೂಡಲೇ ಮಗುವನ್ನು ರಕ್ಷಿಸಿದ್ದಾರೆ. ಮಗುವನ್ನು ದಡಕ್ಕೆ ತಂದಾಗ ಮಗು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದರಿಂದ ಮಗುವಿಗೆ ಅಲ್ಲಿ ನೆರೆದಿದ್ದವರು ಸಿಪಿಆರ್ ನೀಡಿ ರಕ್ಷಿಸಿದ್ದಾರೆ.
ಬಳಿಕ ಸುಮಾರು ಅರ್ಧ ಗಂಟೆ ಬಳಿಕ ಮಗುವಿನ ತಾಯಿ ಇಲ್ಲದಿರುವುದನ್ನು ಗಮನಿಸಿದ ಅವರು, ನೀರಿನಲ್ಲಿ ತಾಯಿ ಇರುವುದನ್ನು ಮನಗಂಡು ಆಕೆಯನ್ನು ದಡಕ್ಕೆ ಎಳೆದು ತಂದಿದ್ದಾರೆ. ಆದರೆ ಅಷ್ಟುಹೊತ್ತಿಗಾಗಲೇ ದುರಂತ ನಡೆದುಹೋಗಿದ್ದು, ನೀರಿನಲ್ಲಿ ಮುಳುಗಿದ್ದರಿಂದ ತಾಯಿ ಉಸಿರಾಟವಿಲ್ಲದೇ ಸಾವನ್ನಪ್ಪಿದ್ದಾಳೆ. ಮಗು ವಿನ ಯೋಗಕ್ಷೇಮ ನೋಡಿದ್ದರಾದರೂ, ನೀರಿನಲ್ಲಿ ಮುಳುಗಿರುವ ತಾಯಿಯನ್ನು ಮರೆತಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಲೇಕ್ ಪಾವೆಲ್ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ದುರಂತ ನಡೆದ ಸ್ಥಳದಿಂದ ಆಸ್ಪತ್ರೆ ಸುಮಾರು 200 ಮೈಲಿ ದೂರವಿದ್ದು, ಆಸ್ಪತ್ರೆ ಸಮೀಪದಿದ್ದರೆ ಆಕೆಯನ್ನು ಬದುಕಿಕೊಳ್ಳಬಹುದಿತ್ತು ಎಂದು ಸ್ಥಳೀಯರು ಅಭಿಪ್ರಾಯಪಟ್ಟಿದ್ದಾರೆ.

Comments are closed.