ಮನೋರಂಜನೆ

ಶಾರೂಖ್ ಖಾನ್‌ಗೆ ಜನರ ಮುಂದೆ ತಿನ್ನಲು ನಾಜಿಕೆಯಾಗುತ್ತಂತೆ..!

Pinterest LinkedIn Tumblr

shaಮುಂಬೈ: ಬಾಲಿವುಡ್ ನಟ ಶಾರೂಖ್ ಖಾನ್ ಫಿಟ್ ಆಗಿ ಇರಲು ಪೌಷ್ಟಿಕ ಆಹಾರವನ್ನು ಸೇವನೆ ಮಾಡುತ್ತಾರೆ. ಆದ್ರೆ ಹಲವು ಜನರ ಮುಂದೆ ಆಹಾರ ಸೇವಿಸಲು ಅವರಿಗೆ ನಾಚಿಕೆ ಆಗುತ್ತಂತೆ. ಬೇಯಿಸಿದ ಕೋಳಿ, ಕೋಸುಗಡ್ಡೆ ಅವರ ದೈನಂದಿನ ಆಹಾರವಾಗಿದೆ, ನಾನು ಅನೇಕ ಜನರ ಮುಂದೆ ತಿನ್ನಲು ಇಷ್ಟಪಡುವುದಿಲ್ಲ. ಈ ಸಂದರ್ಭದಲ್ಲಿ ನಾನು ಸ್ವಲ್ಪ ಸಂಕೋಚ ಪಡುತ್ತೇನೆ ಎಂದು ಅವರು ತಿಳಿಸಿದ್ದಾರೆ.

ಆರೋಗ್ಯಕ್ಕಾಗಿ ಟಿಪ್ಸ್ ನೀಡಿದ ಶಾರೂಖ್ ಫಿಟ್ ಆಗಿ ಇರಲು ದಿನಕ್ಕೆ ಒಂದು ಗಂಟೆಯಾದ್ರೂ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಕೊಳ್ಳಿ ಎಂದ ಅವರು ಊಟ ಮಾಡುವಾಗ ನೀವು ನಿಧಾನವಾಗಿ ತಿನ್ನಬೇಕು ಎಂದು ತಿಳಿಸಿದರು.

ಕಿಂಗ್ ಖಾನ್ ಶಾರೂಖ್ ಖಾನ್ ಹಾಗೂ ಆಲಿಯಾ ಅಭಿನಯದ ‘ಡಿಯರ್ ಜಿಂದಗಿ ‘ಚಿತ್ರ ನವೆಂಬರ್ 25ಕ್ಕೆ ರಿಲೀಸ್ ಕಾಣಲಿದೆ. ಶಾರೂಖ್ ಖಾನ್ ಜತೆಗೆ ಆಲಿಯಾಳ ಕಾಂಬಿನೇಷನ್ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ..

ವಿಶೇಷವೆಂದರೆ ಈ ಚಿತ್ರದಲ್ಲಿ ಶಾರೂಖ್ ಜತೆಗಿನ ಆಲಿಯಾಳ ಕೆಮೆಸ್ಟ್ರಿ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.

Comments are closed.