ಚನೈ: ಕಳೆದ ಆರು ದಿನಗಳಿಂದ ಕಾಣೆಯಾಗಿರುವ ಭಾರತೀಯ ವಾಯುಪಡೆಯ ವಿಮಾನ AN-32 ಶೋಧಾರಚರಣೆ ಮುಂದುವರಿದಿದೆ. ಸಮುದ್ರದ ಮೇಲ್ಪದರದಲ್ಲಿ ಹಾಗೂ ಸಮುದ್ರದ ಒಳಗೆ ಮೂರರಿಂದ ಮೂರುವರೆ ಕಿಲೋಮೀಟರ್ ಆಳದಲ್ಲಿ ಯಾವುದೇ ಬಗೆಯ ಕುರುಹುಗಳು ಕಾಣಸಿಗದ ಕಾರಣ ಈಗ ಸುಮುದ್ರ ಒಳಗೆ ಮತ್ತಷ್ಟು ಆಳಕ್ಕೆ ಅತ್ಯಾಧುನಿಕ ಜಲಾಂತರ್ಗಾಮಿಗಳು ಇಳಿಯಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಂತರ್ಜಲ ಕ್ಯಾಮೆರಾ ಹಾಗೂ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಐಎನ್ಎಸ್ ನಿರೂಪಕ್ ಜಲಾಂತರ್ಗಾಮಿ ಬುಧವಾರ ಶೋಧ ಕಾರ್ಯಾಚರಣೆಗೆ ಇಳಿದಿದೆ. ಇದರ ನೆರವಿಗೆ ಭಾರತ ಭೂವೈಜ್ಞಾನಿಕ ಸಮೀಕ್ಷೆಯ ಸಮುದ್ರಶಾಸ್ತ್ರೀಯ ಸಂಶೋಧನೆ ಹಡಗು, ಸಮುದ್ರ ರತ್ನಾಕರ , ಉಪ ಮೇಲ್ಮೈ ಹುಡುಕಾಟದಲ್ಲಿ ಭಾಗಿಯಾಗಿದೆ. ಜೊತೆಗೆ, ನ್ಯಾಷನಲ್ ಇನ್ಸ್ಟಿಟ್ಯೂಟ್ ಓಷನ್ ಟೆಕ್ನಾಲಜಿ ಸಂಶೋಧನೆ ಹಡಗು, ಸಾಗರ್ ನಿಧಿ, ಸಮುದ್ರ ತಳದಲ್ಲಿ ಪ್ರೊಫೈಲಿಂಗ್ ನಡೆಸುವಲ್ಲಿ ನೆರವಾಗಲಿದ್ದು ಇನ್ನು ಕೆಲವು ದಿನಗಳಲ್ಲಿ ಹುಡುಕಾಟ ಪ್ರದೇಶ ತಲುಪಬಹುದೆಂದು ನಿರೀಕ್ಷಿಸಲಾಗಿದೆ.
ಲೋಕಸಭೆಯಲ್ಲಿ ಇದರ ಬಗ್ಗೆ ಮಾತನಾಡಿದ ರಕ್ಷಣಾ ಸಚಿವ ಮನೋಹರ್ ಪರಿಕರ್ ಈವರೆಗೂ AN-32 ವಿಮಾನದ ಅವಶೇಷಗಳು ಇನ್ನೂ ಲಭ್ಯವಾಗಿಲ್ಲ. ವಿಮಾನ ಕೊನೆಯದಾಗಿ ವ್ಯಾಪ್ತಿಗೆ ಸಿಕ್ಕಿದ್ದಾಗ ಬಂಗಾಳಕೊಲ್ಲಿಯ ಕೆಲವುಭಾಗಗಳಲ್ಲಿ ಗುಡುಗು ಸಿಡಿಲುಗಳ ಸೂಚನೆಗಳಿದ್ದುದ್ದಾಗಿ ತಿಳಿದುಬಂದಿದೆ. ಹವಾಮಾನದ ವೈಪರೀತ್ಯ ಶೋಧಕಾರ್ಯಾಚರಣೆಗೆ ಅಡ್ಡಿಯಾಗುತ್ತಿದ್ದು ಇನ್ನಷ್ಟು ಆಧುನಿಕ ತಂತ್ರಜ್ಞಾನಗಳನ್ನು ಹೊಂದಿರುವ ಜಲಾಂತರ್ಗಾಮಿಗಳನ್ನು ಕಾರ್ಯಾಚರಣೆಗೆ ಇಳಿಸಿದ್ದಾಗಿ ಹೇಳಿದ್ದಾರೆ.
Comments are closed.