
ಇಸ್ಲಾಮಾಬಾದ್: ಪಾಕಿಸ್ತಾನ ಟಿ20 ತಂಡದ ಮಾಜಿ ನಾಯಕ ಶಾಹಿದ್ಅಫ್ರಿದಿ ಜನಸೇವೆಗಾಗಿ ರಾಜಕೀಯ ರಂಗಪ್ರವೇಶ ಮಾಡಲು ನಿರ್ಧರಿಸಿದ್ದಾರೆ.
ಸದ್ಯ ತನ್ನದೇ ಸಹಾಯಾರ್ಥ ಸಂಘ-ಸಂಸ್ಥೆಗಳಲ್ಲಿ ಜನಸೇವೆಯಲ್ಲಿ ಬ್ಯುಸಿಯಾಗಿರುವ ಅಫ್ರಿದಿ, ‘‘ನಾನು ರಾಜಕೀಯ ಸೇರಲು ಬಯಸುತ್ತೇನೆ. ಆದಾಗ್ಯೂ ನನ್ನ ಕೆಲ ಹಿತೈಷಿಗಳು ರಾಜಕೀಯ ಬೇಡ ಎಂದು ಸಲಹೆ ಮಾಡಿದರು. ನನ್ನ ಮಟ್ಟಿಗೆ ರಾಜಕಾರಣಿಯೊಬ್ಬ ಜನರ ಸೇವಕನಾಗಿದ್ದು, ಆತ ಯಾವುದೇ ಕಾರಣಕ್ಕೂ ಜನರಿಗೆ ಮೋಸ ಮಾಡಕೂಡದು.
ಸದ್ಯಕ್ಕಂತೂ ನಾನು ಅಸಹಾಯಕ ಮಕ್ಕಳಿಗಾಗಿ ಶಾಲೆಯೊಂದನ್ನು ನಡೆಸುತ್ತಿದ್ದು, ಈ ಜನಸೇವೆ ನಿರಂತರವಾಗಿ ಮುಂದುವರೆಯಲಿದೆ’’ ಎಂದು 36 ವರ್ಷದ ಅಫ್ರಿದಿ ಬಿಬಿಸಿ ಉರ್ದು ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಸ್ಫೋಟಕ ಬ್ಯಾಟ್ಸ್’ಮನ್ ರಾಜಕೀಯ ಕುರಿತ ಒಲವು ತೀವ್ರ ಸಂಚಲನವನ್ನುಂಟು ಮಾಡಿದೆ.
Comments are closed.