
ನವದೆಹಲಿ : ಬಾಲಿವುಡ್ ಬಹುಬೇಡಿಕೆ ನಟಿ ದೀಪಿಕಾ ಪಡುಕೋಣೆ ಡಿಪ್ರೆಶ ನ್ ನಿಂದ ಬಳಲುತ್ತಿದ್ದ ವಿಚಾರವನ್ನು ಇತ್ತೀಚಿಗೆ ಬಹಿರಂಗಪಡಿಸಿದ್ದು ಗೊತ್ತೇ ಇದೆ. ಇದೀಗ ಅದರಿಂದ ಹೊರಬರಲು ಯಾವುದು ಸಹಾಯವಾಯಿತು ಎನ್ನುವುದನ್ನು ಬಿಚ್ಚಿಟ್ಟಿದ್ದಾರೆ.
ಕಳೆದ ಎರಡು ವರ್ಷಗಳಿಂದ ಬಳಲುತ್ತಿದ್ದ ಸುದೀರ್ಘ ಡಿಪ್ರೆಶನ್’ನಿಂದ ಹೊರಬರಲು ಸ್ಪೋರ್ಟ್ಸ್ ಸಹಾಯವಾಯಿತಂತೆ. ಹಾಗಾಗಿ ಫೇಸ್ ಬುಕ್ ನಲ್ಲಿ ಯುವಜನರಿಗೆ ಯಾವುದಾದರೂ ಕ್ರೀಡೆಯಲ್ಲಿ ತೊಡಗಿಕೊಳ್ಳಿ ಎಂದು ಸ್ಪೂರ್ತಿ ನೀಡಿದ್ದಾರೆ.
“ಕ್ರೀಡೆ ನನಗೆ ಕಠಿಣ ಪರಿಸ್ಥಿಗಳನ್ನು, ವೈಫಲ್ಯಗಳನ್ನು ಎದುರಿಸುವುದು ಹೇಗೆ ಎನ್ನುವುದನ್ನು ಕಲಿಸಿದೆ. ಅದೇ ರೀತಿ ಯಶಸ್ಸನ್ನು ಹೇಗೆ ಸ್ವೀಕರಿಸಬೇಕು ಎನ್ನುವುದನ್ನು ಹೇಳಿಕೊಟ್ಟಿದೆ. ಜೊತೆಗೆ ನಮ್ರತೆಯನ್ನು ಕಲಿಸಿದೆ” ಎಂದು ದೀಪಿಕಾ ಹೇಳಿಕೊಂಡಿದ್ದಾರೆ.
Comments are closed.