ಅಂತರಾಷ್ಟ್ರೀಯ

ಮುಖದ ಸೌಂದರ್ಯಕ್ಕೆ ಮಾರಕವಾಗಿರುವ ಬ್ಲ್ಯಾಕ್‌ಹೆಡ್‌ಹೋಗಲಾಡಿಸಲು ಇಲ್ಲಿದೆ 3 ಟಿಪ್ಸ್‌

Pinterest LinkedIn Tumblr

black-heds

ನಿಮಗದು ಬೇಕೋ ಬೇಡ್ವೋ ಅಂತಾನು ಕೇಳದೇ ಮೂಗಿನ ತುದೀಲಿ ಕಪ್ಪು ಕಪ್ಪು ಚುಕ್ಕೆ ಬಂದೇ ಬಿಡುತ್ತೆ. ಈ ರೀತಿ ಬ್ಲ್ಯಾಕ್‌ಹೆಡ್ಸ್‌ಕಾಣಿಸಿಕೊಂಡರೆ ಹೆಣ್ಮಕ್ಕಳ ಸಂಕಟ ನೋಡಕ್ಕಾಗಲ್ಲ. ಬ್ಲ್ಯಾಕ್‌ಹೆಡ್ಸ್‌ಅಂದರೆ ಮತ್ತೇನಿಲ್ಲ, ನಿಮ್ಮ ಮೂಗಿನ ತುದಿ, ಬದಿಗಳ ಗ್ರಂಥಿಗಳಲ್ಲಿ ಕೊಳೆ ಸೇರಿಕೊಂಡು ಪುಟ್‌ಪುಟಾಣಿ ಕಪ್ಪುಚುಕ್ಕೆಗಳಾಗಿರುತ್ತವೆ. ಕೊಳೆ ಸೇರಿಕೊಂಡ ಕಾರಣ ಚರ್ಮದ ಉಸಿರಾಟ ಸರಾಗವಾಗದೇ ಮುಖದ ಸೌಂದರ್ಯಕ್ಕೆ ಸಮಸ್ಯೆಯಾಗುತ್ತೆ. ಕರೆಯದೇ ಬರೋ ಈ ಅತಿಥಿಯನ್ನು ಆಚೆ ಹಾಕೋದಕ್ಕೆ ಸೌಂದರ್ಯತಜ್ಞರು 3 ಟಿಪ್ಸ್‌ಕೊಟ್ಟಿದ್ದಾರೆ.

ಮೂಗಿನ ತುದೀಗೆ ಮಣ್ಣು ಮೆತ್ತಿ.
ಕ್ಲೇ ಅಥವಾ ಜೇಡಿ ಮಣ್ಣನ್ನು ಪ್ರಾಕೃತಿಕ ಚಿಕಿತ್ಸೆಗಳಲ್ಲಿ ಪರಿಣಾಮಕಾರಿಯಾಗಿ ಬಳಸುತ್ತಾರೆ. ನಿಮ್ಮ ಮೂಗಿನ ತುದಿಯ ಶತ್ರುವಿನ ವಿರುದ್ಧ ಹೋರಾಡೋದಕ್ಕೆ ಜೇಡಿಮಣ್ಣ ಪ್ರಮುಖ ಅಸ್ತ್ರ. ಬೆಂಟೋನೈಟ್‌ಕ್ಲೇಯನ್ನು ಸ್ವಲ್ಪ ನೀರಿನ ಜೊತೆಗೆ ಮಿಕ್ಸ್‌ಮಾಡಿ ಪೇಸ್ಟ್‌ನ ಹಾಗೆ ಮಾಡಿ. ಮುಖಕ್ಕೆ ಹಚ್ಚಿ. 20 ನಿಮಿಷ ಬಿಟ್ಟು ತೊಳೆಯಿರಿ. ಮೂಗಿನ ತುದಿ, ಬದಿಯ ಕಪ್ಪು ನಿವಾರಣೆಯಾಗೋ ಜೊತೆಗೆ ಮುಖವೂ ಮಣ್ಣಲ್ಲಿ ಮಿಂದು ಫ್ರೆಶ್‌ಆಗುತ್ತೆ.

ಎಗ್‌ವೈಟ್‌ನ ಲೇಯರ್‌
ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಬಿಳಿ ಭಾಗವನ್ನು ಮುಖಕ್ಕೆ ಹಚ್ಚಿ. ಮೊದಲಿಗೆ ತೆಳುವಾಗಿ ಒಂದು ಲೇಯರ್‌ಹಚ್ಚಿ ಅದು ಒಣಗಿದ ಮೇಲೆ ಇನ್ನೊಂದು ಲೇಯರ್‌ಹಚ್ಚಿ. ಹೀಗೆ 3 ರಿಂದ 5 ಲೇಯರ್‌ಎಗ್‌ವೈಟ್‌ಹಚ್ಚಿ. ಒಣಗಿದ ಮೇಲೆ ಮುಖ ತೊಳೆಯಿರಿ.

ಹಾಲು ಮತ್ತು ಜೇನು
ಶುದ್ಧ ಜೇನು ಮತ್ತು ಹಾಲನ್ನು ಮಿಕ್ಸ್‌ಮಾಡಿ ಸ್ವಲ್ಪ ಬಿಸಿಮಾಡಿ. ಆರಿದ ಬಳಿಕ ಬ್ಯಾéಕ್‌ಹೆಡ್‌ಇರುವ ಜಾಗಕ್ಕೆ ಹತ್ತಿಯಿಂದ ದಪ್ಪಕ್ಕೆ ಹಚ್ಚಿ. ಒಣಗಿದ ಬಳಿಕ ಉಗುರು ಬೆಚ್ಚಗಿನ ನೀರಲ್ಲಿ ತೊಳೆಯಿರಿ. ಬ್ಲ್ಯಾಕ್‌ಹೆಡ್‌ಸಮಸ್ಯೆಯಿಂದ ಹೊರಬರಬಹುದು.

Comments are closed.