ಮನೋರಂಜನೆ

ಅಮೀರ್ ಇಂಗ್ಲಿಷ್ ಅಭಿಮಾನಿಗಳ ಆಕ್ರೋಶ ಎದುರಿಬೇಕಾಗುತ್ತದೆ: ಕುಕ್

Pinterest LinkedIn Tumblr

ameerಲಂಡನ್: ಪಾಕಿಸ್ತಾನದ ವೇಗಿ ಮೊಹಮ್ಮದ್ ಅಮೀರ್ ಇಂಗ್ಲೀಷ್ ಅಭಿಮಾನಿಗಳ ಆಕ್ರೋಶವನ್ನು ಎದುರಿಸಬೇಕಾಗುತ್ತದೆ ಎಂದು ಅಲಸ್ಟೈರ್ ಕುಕ್ ಹೇಳಿದ್ದಾರೆ. ಅಮೀರ್ ಪಾಕಿಸ್ತಾನದ ಪರ ಟೆಸ್ಟ್ ಪಂದ್ಯಗಳಿಗೆ ಕಮ್ ಬ್ಯಾಕ್ ಆಗಿದ್ದು, ಇಂಗ್ಲೆಂಡ್ ವಿರುದ್ಧ ಲಾರ್ಡ್ಸ್‌ನಲ್ಲಿ ಮೊದಲ ಪಂದ್ಯವನ್ನು ಆಡಲಿದ್ದಾರೆ. ಮ್ಯಾಚ್ ಫಿಕ್ಸಿಂಗ್‌ನಂತಹ ತಪ್ಪು ಮಾಡಿದಾಗ ಶಿಕ್ಷೆಗಿಂತ ಹೆಚ್ಚಾಗಿ ಪರಿಣಾಮಗಳು ಜಾಸ್ತಿಯಾಗಿರುತ್ತದೆ ಎಂದು ಕುಕ್ ಪ್ರತಿಕ್ರಿಯಿಸಿದರು.

ಮ್ಯಾಚ್ ಫಿಕ್ಸರ್‌ಗಳಿಗೆ ಆಜೀವ ನಿಷೇಧವನ್ನು ವಿಧಿಸಬೇಕೆಂದು ಕುಕ್ ಮತ್ತೊಮ್ಮೆ ಕರೆ ನೀಡಿದರು. ಅಮೀರ್‌‍ಗೆ ನೀಡಿದ ನಿಷೇಧದ ಶಿಕ್ಷೆ ತಮಗೆ ಒಪ್ಪಿಗೆಯಾಯಿತೊ, ಇಲ್ಲವೋ ಅದು ಬೇರೆ ವಿಚಾರ, ಆದರೆ ಅವರು ನಿಷೇಧದ ಶಿಕ್ಷೆ ಅನುಭವಿಸಿ ಕಮ್ ಬ್ಯಾಕ್ ಆಗಿದ್ದಾರೆ ಎಂದು ಕುಕ್ ಹೇಳಿದರು.

ಸ್ಟುವರ್ಟ್ ಬ್ರಾಡ್ ಈ ಕುರಿತು ಪ್ರತಿಕ್ರಿಯಿಸುತ್ತಾ, ಪಂದ್ಯ ಫಿಕ್ಸ್ ಮಾಡುವವರಿಗೆ ಆಜೀವ ನಿಷೇಧದ ಪರ ನಾನಿದ್ದೇನೆ. ಅಮೀರ್ ಪ್ರಕರಣದಲ್ಲಿ ಅವನ ವಿರುದ್ಧ ಆಡುವುದಕ್ಕೆ ಯಾವುದೇ ಕೆಟ್ಟ ಭಾವನೆ ಇಲ್ಲ ಎಂದು ವೇಗಿ ಹೇಳಿದರು. ಅವನು ಮಾಡಿದ್ದು ತಪ್ಪಾಗಿದ್ದರೂ ಅವನು ತೀರಾ ಯುವ ವಯಸ್ಕನಾಗಿದ್ದು, ಅದರ ಪರಿಣಾಮಗಳ ಅರಿವು ಇರಲಿಲ್ಲ ಎಂದು ಹೇಳಿದ್ದಾರೆ.

Comments are closed.