ಮನೋರಂಜನೆ

ವಿರಾಟ್ ಆಕ್ರಮಣಕಾರಿ ವ್ಯಕ್ತಿತ್ವ ಮೊಟಕು ಮಾಡುವುದಿಲ್ಲ: ಕುಂಬ್ಳೆ

Pinterest LinkedIn Tumblr

veeratಬೆಂಗಳೂರು: ವಿರಾಟ್ ಕೊಹ್ಲಿ ಅವರ ಮೈದಾನದಲ್ಲಿನ ಆಕ್ರಮಣಕಾರಿ ಮನೋಭಾವವನ್ನು ಮೊಟಕುಗೊಳಿಸುವಲ್ಲಿ ತಾನು ಕಡೆಯ ವ್ಯಕ್ತಿಯಾಗಿರುತ್ತೇನೆ ಎಂದು ಟೀಂ ಇಂಡಿಯಾ ಹೊಸ ಕೋಚ್ ಅನಿಲ್ ಕುಂಬ್ಳೆ ಹೇಳಿದ್ದಾರೆ. ಆದರೆ ಭಾರತದ ರಾಯಭಾರಿಗಳಾಗಿ ತೆಳುಗೆರೆಯೊಂದು ಅಸ್ತಿತ್ವದಲ್ಲಿರುವ ಅರಿವನ್ನು ಆಟಗಾರರು ಹೊಂದಿರಬೇಕು ಮತ್ತು ಅದಕ್ಕೆ ಗೌರವಿಸಬೇಕು ಎಂದು ಕುಂಬ್ಳೆ ಹೇಳಿದ್ದಾರೆ.

ನಾನು ಕೊಹ್ಲಿ ಆಕ್ರಮಣಕಾರಿ ಮನೋಭಾವ ಇಷ್ಟಪಡುತ್ತೇನೆ. ನಾನು ಕೂಡ ಅವರಿಗೆ ಭಿನ್ನವಾಗಿಲ್ಲ. ಆದರೆ ಮೈದಾನದಲ್ಲಿ ಹೇಗೆ ವರ್ತಿಸಬೇಕು ಎಂಬ ಕುರಿತು ಬಹುಶಃ ನಮ್ಮಿಬ್ಬರ ನಡುವೆ ವ್ಯತ್ಯಾಸವಿರಬಹುದು. ಒಬ್ಬ ವ್ಯಕ್ತಿಯ ಸಹಜ ಪ್ರವೃತ್ತಿಯನ್ನು ನಾನು ಖಂಡಿತವಾಗಿ ಮೊಟಕುಗೊಳಿಸುವುದಿಲ್ಲ ಎಂದು ಕುಂಬ್ಳೆ ಕೊಹ್ಲಿ ಉಪಸ್ಥಿತಿಯಲ್ಲೇ ಹೇಳಿದರು.

ಆದರೆ ಕೋಹ್ಲಿ ಸೇರಿದಂತೆ ಎಲ್ಲಾ ಆಕ್ರಮಣಕಾರಿ ಮನೋಭಾವದ ಆಟಗಾರರಿಗೆ ಎಚ್ಚರಿಕೆ ನೀಡುತ್ತಾ, ನಾವು ಭಾರತದ ರಾಯಭಾರಿಗಳಾಗಿ ಮತ್ತು ಭಾರತ ತಂಡದ ಭಾಗವಾಗಿರುವುದು ಎಷ್ಟು ಮುಖ್ಯವೆಂದು ಅರಿತಿರಬೇಕು ಎಂದು ಹೇಳಿದರು.

Comments are closed.