ಇಸ್ಲಾಮಾಬಾದ್: ಸತತ ಆರು ವರ್ಷಗಳ ಬಳಿಕ ಟೆಸ್ಟ್ ಕ್ರಿಕೆಟ್ ಗೆ ಪಾದಾರ್ಪಣೆ ಮಾಡುತ್ತಿರುವ ಮೊಹಮ್ಮದ್ ಅಮೀರ್ ವಿರಾಟ್ ಕೊಹ್ಲಿಯನ್ನು ವಿಶ್ವದ ಬೆಸ್ಟ್ ಬ್ಯಾಟ್ಸ್ ಮ್ಯಾನ್ ಎಂದು ಬಣ್ಣಿಸಿದ್ದಾರೆ.
ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಯೊಂದಿಗೆ ಮಾತನಾಡಿದ ಪಾಕಿಸ್ತಾನದ ಪ್ರತಿಭಾನ್ವಿತ ವೇಗದ ಬೌಲರ್, “ಕಠಿಣ ಪರಿಸ್ಥಿತಿಯಲ್ಲೂ ಕೆಚ್ಚೆದೆಯಿಂದ ಬ್ಯಾಟಿಂಗ್ ಮಾಡುವ ವಿರಾಟ್ ಕೊಹ್ಲಿ ನಿಸ್ಸಂದೇಹವಾಗಿ ಅತ್ಯುತ್ತಮ ಅಟಗಾರನಾಗಿದ್ದಾರೆ” ಎಂದು ಅಭಿಪ್ರಾಯಪಟ್ಟಿದ್ದಾರೆ.
“ಕೊಹ್ಲಿಯಂಥ ಶ್ರೇಷ್ಠ ಆಟಗಾರರು ಟೀಂ ಇಂಡಿಯಾ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇವರು ಕಠಿಣ ಪರಿಸ್ಥಿತಿಯಲ್ಲಿ ತಮ್ಮ ಸಾಮರ್ಥ್ಯ ಹೆಚ್ಚಿಸಿಕೊಂಡು ತಂಡವನ್ನು ಸೋಲಿನಿಂದ ಪಾರು ಮಾಡುತ್ತಾರೆ. ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ ಕ್ರಿಕೆಟ್ ಪಂದ್ಯದಲ್ಲಿ ಕೊಹ್ಲಿ ಮಾಡಿದ ಬ್ಯಾಟಿಂಗ್ ಅದಕ್ಕೆ ನಿದರ್ಶನವಾಗಿದೆ” ಎಂದು ಮೊಹಮ್ಮದ್ ಆಮೀರ್ ಹೇಳಿದ್ದಾರೆ.
Comments are closed.