ರಾಷ್ಟ್ರೀಯ

ಮೂರು ತಪ್ಪಿತಸ್ಥ ಸಿಂಹಗಳಿಗೆ ಜೀವಾವಧಿ ಶಿಕ್ಷೆ

Pinterest LinkedIn Tumblr

-lions_ಗುಜರಾತ್ : ಕಳೆದ ಮೇ ತಿಂಗಳಿನಲ್ಲಿ ಇಲ್ಲಿನ ಗಿರ್ ರಾಷ್ಟ್ರೀಯ ಉದ್ಯಾನವನದಲ್ಲಿ ಮೂವರನ್ನು ಬಲಿ ಪಡೆದಿದ್ದ ಮೂರು “ತಪ್ಪಿತಸ್ಥ” ಸಿಂಹಗಳಿಗೆ ಅಲ್ಲಿನ ಸಿಬ್ಬಂದಿಗಳು ಜೀವಮಾನ ಪೂರ್ತಿ ಪಂಜರವಾಸದ ಶಿಕ್ಷೆಯನ್ನು ವಿಧಿಸಿದ್ದಾರೆ.

ಕಳೆದ ಎಪ್ರಿಲ್ ಹಾಗೂ ಮೇ ತಿಂಗಳಲ್ಲಿ 14 ವರ್ಷದ ಬಾಲಕ ಸೇರಿದಂತೆ ಮಹಿಳೆ ಹಾಗೂ ವೃದ್ದರೊಬ್ಬರನ್ನು ಸಿಂಹಗಳು ದಾಳಿ ನಡೆಸಿ ಹತ್ಯೆಗೈದಿದ್ದವು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಗಿರ್ ಉದ್ಯಾನವನದ ಸಿಬ್ಬಂದಿ ವರ್ಗ ಎಲ್ಲಾ 18 ಗಂಡು ಸಿಂಹಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದರು. ಅದರಂತೆಯೇ ಗುರುವಾರದಂದು ಸಿಬ್ಬಂದಿಗಳು ಮೂರು ಸಿಂಹಗಳನ್ನು ಗುರುತಿಸಿದ್ದು ಅವುಗಳನ್ನು ಜೀವಮಾನ ಪೂರ್ತಿ ಬೋನಿನಲ್ಲಿಡಲು ನಿರ್ದರಿಸಿದ್ದಾರೆ.

ಈ ಕುರಿತು ಮಾತನಾಡಿದ ಜುನಗಢ್ ಅರಣ್ಯ ವಿಭಾಗದ ಮುಖ್ಯ ಸಂರಕ್ಷಣಾಧಿಕಾರಿ, ಎ.ಪಿ.ಸಿಂಗ್ ಮೂವರ ಹತ್ಯೆಗೆ ಕಾರಣವಾದ ಸಿಂಹ ಯಾವುದೆಂದು ಪತ್ತೆ ಹಚ್ಚಲು ಸಿಂಹಗಳ ಹೆಜ್ಜೆ ಗುರುತನ್ನು ಸಂಗ್ರಹಿಸಿದ್ದೆವು. ಬಳಿಕ ಅವುಗಳ ಮಲ ವಿಸರ್ಜನೆಯ ಮಾದರಿಯಲ್ಲಿ ಒಂದು ಗಂಡು ಸಿಂಹ ಸೇರಿದಂತೆ ಎರಡು ಸಿಂಹಿಣಿಗಳು ಮೃತರ ಮಾಂಸವನ್ನು ತಿಂದಿರುವುದು ಸಾಭಿತಾಗಿದೆ. ಗಂಡು ಸಿಂಹ ದಾಳಿ ನಡೆಸಿದ್ದು ಅದರ ಕಾಲಿನ ಉಗುರುಗಳಲ್ಲಿ ಮೃತರ ಚರ್ಮ ಅಂಟಿಕೊಂಡಿತ್ತು, ದೇಹದ ಅರ್ಧ ಭಾಗಗಳನ್ನು ಗಂಡು ಸಿಂಹ ತಿಂದರೆ ಉಳಿದ ಭಾಗಗಳನ್ನು ಸಿಂಹಿಣಿಗಳು ತಿಂದಿವೆ” ಎಂದಿದ್ದಾರೆ.

ಸಿಂಹಗಳ ಜೀವಾವಧಿ ಶಿಕ್ಷೆಯ ಕುರಿತು ಮಾತನಾಡಿದ ಸಿಂಗ್ ” ಒಂದು ಬಾರಿ ಸಿಂಹಗಳಿಗೆ ಮನುಷ್ಯ ಮಾಂಸದ ರುಚಿ ಸಿಕ್ಕರೆ ತುಂಬಾ ಅಪಾಯಕಾರಿಯಾಗಿದ್ದು ಅವು ಯಾವಾಗಲು ಮಾನವರ ಮಾಂಸವನ್ನೇ ತಿನ್ನಲು ಹೊಂಚು ಹಾಕುತ್ತವೇ. ದೇಶದಲ್ಲಿ ಅತೀ ಹೆಚ್ಚು ಪ್ರವಾಸಿಗರನ್ನು ಸೆಳೆಯುವ ರಾಷ್ಟ್ರೀಯ ಉದ್ಯಾನವನದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಜಾಗ್ರತೆ ವಹಿಸುವ ದೃಷ್ಟಿಯಿಂದ ಈ ಕ್ರಮಗಳನ್ನು ಕೈಗೊಂಡಿದ್ದೇವೆ” ಎಂದರು.

Comments are closed.