ಮನೋರಂಜನೆ

‘ಹೆಬ್ಬುಲಿ’ ಪ್ರಶ್ನೆಗೆ ‘ಯು-ಟರ್ನ್’ ಉತ್ತರ; ಟ್ವಿಟ್ಟರ್ ನಲ್ಲಿ ನಡೆದ ಸ್ಟಾರ್ ನಟರ ಬಗ್ಗೆ ಚಿಲಿಪಿಲಿ

Pinterest LinkedIn Tumblr

Sudeep2ಬೆಂಗಳೂರು: ಕನ್ನಡದ ಜನಪ್ರಿಯ ನಟ ಸುದೀಪ್ ಮತ್ತು ಖ್ಯಾತ ಯುವ ನಿರ್ದೇಶಕ ಪವನ್ ಕುಮಾರ್ ಅವರ ಟ್ವಿಟ್ಟರ್ ಪ್ರಶ್ನೋತ್ತರ ಸಾಮಾಜಿಕ ಅಂತರ್ಜಾಲದಲ್ಲಿ ಸಂಚಲನ ಮೂಡಿಸಿದೆ.
‘ಹೆಬ್ಬುಲಿ’ ಚಿತ್ರದ ನಟ ಸುದೀಪ್, ಪವನ್ ಕುಮಾರ್ ನಿರ್ದೇಶನದ ‘ಯು-ಟರ್ನ್’ ಸಿನೆಮಾದ ಬಗ್ಗೆ ಮಾತನಾಡಿ, “ಅತಿ ಒಳ್ಳೆಯ ಚಿತ್ರ ಎಲ್ಲರೂ ಅತ್ಯುತ್ತಮವಾಗಿ ನಟಿಸಿದ್ದಾರೆ ಆದರೆ ಕೆಲವು ದಿನಗಳ ಹಿಂದೆ ನೀವು ಬರೆದದ್ದನ್ನು ಓದಿದ್ದೆ. ನೀವು ಸ್ಟಾರ್ ನಟರ ಜೊತೆಗೆ ಕೆಲಸ ಮಾಡುವುದಿಲ್ಲ ಎಂದಿದ್ದಿರಿ. ಪವನ್ ಕುಮಾರ್ ಅವರಿಗೆ ನನ್ನ ಪ್ರಶ್ನೆ, ಈ ಸ್ಟಾರ್ ನಟರೆಲ್ಲಾ ಯಾರ್ಯಾರು?” ಎಂದು ಕೇಳಿ ಟ್ವಿಟ್ಟರ್ ನಲ್ಲಿ ವಿಡಿಯೋವೊಂದನ್ನು ಭಾನುವಾರ ತೇಲಿಬಿಟ್ಟಿದ್ದರು.
@actorinme pic.twitter.com/lptoRG9Biw

— Kichcha Sudeepa (@KicchaSudeep) 13 June 2016
ಈ ಪ್ರಶ್ನೆಗೆ ರೂಪಕದ ಉತ್ತರ ನೀಡಿರುವ ಪವನ್ ಕುಮಾರ್ “ನೀವು ನನ್ನ ಸಿನೆಮಾ ನೋಡಿ ಇಷ್ಟೆಲ್ಲಾ ಹೇಳಿರುವುದಕ್ಕೆ ಸಂತೋಷ. ನಮಗೆ ಆಡಿ ಕಾರು ತೆಗೆದುಕೊಳ್ಳುವ ಆಸೆ ಇರುತ್ತದೆ. ಆದರೆ ತೆಗೆದುಕೊಳ್ಳುವುದಕ್ಕೆ ಶಕ್ತಿ ಇರುವುದಿಲ್ಲ. ಆಗ ನಾನು ಆಡಿ ಕಾರ್ ಓಡಿಸುವುದಿಲ್ಲ ಎಂದು ಸುಲಭವಾಗಿ ಹೇಳುತ್ತೇವೆ” ಎಂದಿರುವ ಪವನ್ ಕುಮಾರ್, ಸ್ಟಾರ್ ನಟರನ್ನು ಹಾಕಿಕೊಂಡು ಸಿನೆಮಾ ಮಾಡುವ ಆಸೆಯಿದ್ದರೂ, ಆ ಶಕ್ತಿ ತಮಗಿಲ್ಲ ಎಂದು ಜಾಣ್ಮೆಯ ಉತ್ತರ ನೀಡಿ ವಿಡಿಯೋ ಮೂಲಕವೇ ಪ್ರತಿಕ್ರಿಯಿಸಿದ್ದಾರೆ.
@KicchaSudeep i have answered sir.. pic.twitter.com/SPVNcpkUlp

— Pawan Kumar (@actorinme) 13 June 2016
ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಹೆಚ್ಚಿನ ಚರ್ಚೆಗೆ ಎಡೆಮಾಡಿಕೊಟ್ಟಿದೆ.

Comments are closed.