ಮನೋರಂಜನೆ

ಪೋಗೋ ನೋಡೋ ಮಕ್ಕಳೇ ಗಮನಿಸಿ: ಹಳೆ ಹೀರೋಗಳ ಹೊಸ ಕತೆ

Pinterest LinkedIn Tumblr

pogoಮಕ್ಕಳ ಕಾರ್ಟೂನ್ ಚಾನೆಲ್‌ ಪೋಗೋ, ಹಲವು ಹೊಸ ಕಾರ್ಯಕ್ರಮಗಳನ್ನು ಮಕ್ಕಳಿಗಾಗಿ ತಂದಿದೆ.

ಮನೋರಂಜನಾ ಕಾರ್ಯಕ್ರಮಗಳ ಜೊತೆಗೆ ಹೊಸ ಸಾಹಸಗಳು ಮತ್ತು ಸ್ಪರ್ಧೆಗಳನ್ನು ಪೋಗೋ ಚಾನೆಲ್‌ ಆಯೋಜಿಸಿದೆ. ಕಾರ್ಯಕ್ರಮಗಳು ಈಗಾಗಲೇ ಆರಂಭಗೊಂಡಿವೆ. “ಚೋಟಾ ಭೀಮ್‌’, “ಯೋ ಕಾಯ್‌ ವಾಚ್‌’, “ಮೈಟಿ ರಾಜು’, “ಟಾಮ್‌ ಆಂಡ್‌ ಜೆರ್ರಿ’ ಸರಣಿಗಳು ಹೊಸ ಕಥೆಗಳೊಂದಿಗೆ ಪ್ರಸಾರವಾಗುತ್ತಿವೆ.

ಪ್ರತಿ ಶನಿವಾರ ಮಧ್ಯಾಹ್ನ 12 ಗಂಟೆಗೆ ಪೋಗೋ ಫಿಲ್ಮ್ ಫ್ಯಾಕ್ಟರಿಯಲ್ಲಿ ಹೊಸ ಚಲನಚಿತ್ರಗಳು ಪ್ರಸಾರವಾಗುತ್ತಿವೆ. ಪ್ರತಿ ಭಾನುವಾರ ಬೆಳಿಗ್ಗೆ 9.30ಕ್ಕೆ “ಚೋಟಾ ಭೀಮ್‌’ ಹೊಸ ಸಾಹಸ ಮತ್ತು 11 ಗಂಟೆಗೆ “ಮೈಟಿ ರಾಜು’ವಿನ ಸಾಹಸಗಾಥೆಗಳು ಪ್ರಸಾರವಾಗುತ್ತಿವೆ.

ಜೊತೆಗೆ “ಸ್ಕೂಬಿ ಡೂ’ ಮತ್ತು ಅವರ ಗ್ಯಾಂಗ್‌ನ ಥ್ರಿಲ್ಲಿಂಗ್‌ ಕಥೆಗಳೂ ಪೋಗೋದಲ್ಲಿ ಬಿತ್ತರಗೊಳ್ಳಲಿವೆ. ಪ್ರತಿ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 8 ಗಂಟೆಗೆ “ಸ್ಕೂಬಿ ಜಾಸೂಸ್‌’ ಹೊಸ ಸರಣಿ ಪ್ರಸಾರಗೊಳ್ಳಲಿದೆ.

ಮಿಗಿಲಾಗಿ ಪೋಗೋ ಈ ಬಾರಿ ಅತಿದೊಡ್ಡ ಹುಟ್ಟುಹಬ್ಬದ ಕಾರ್ಯಕ್ರಮದೊಂದಿಗೆ ಬರುತ್ತಿದೆ. ಮಕ್ಕಳ ನೆಚ್ಚಿನ “ಚೋಟಾ ಭೀಮ್‌’ನ ಹುಟ್ಟುಹಬ್ಬ ಲೋಡುಗಟ್ಟಲೆ ಉಡುಗೊರೆ ಮತ್ತು ಅಚ್ಚರಿಗಳೊಂದಿಗೆ ಬರಲಿದೆ. ಸ್ಪರ್ಧೆಗಳು ಈಗಾಗಲೇ ಆರಂಭಗೊಂಡಿದ್ದು, ಸೋಮವಾರದಿಂದ ಶುಕ್ರವಾರದವರೆಗೆ ಮಧ್ಯಾಹ್ನ 12.30ಕ್ಕೆ ಮಕ್ಕಳಿಗಾಗಿ ಸ್ಪರ್ಧೆಗಳು ಪ್ರಸಾರವಾಗುತ್ತವೆ.
-ಉದಯವಾಣಿ

Comments are closed.