ಮುಂಬೈ

ಡೆಡ್ಲಿ ಬೈಕ್‌ ಸ್ಟಂಟ್‌ ಗೆ ಯುವಕನ ಪ್ರಾಣವೇ ಹೋಯ್ತು

Pinterest LinkedIn Tumblr

Mumbai Biker-700ಮುಂಬಯಿ : ಬೈಕ್‌ ಸ್ಟಂಟ್‌ ನಡೆಸುವ ‘ಮಾರಣಾಂತಿಕ ಖಯಾಲಿ’ ಇಂದಿನ ಯುವ ಜನರಲ್ಲಿ ತೀವ್ರವಾಗಿ ಹೆಚ್ಚುತ್ತಿರುವುದು ಕಳವಳಕಾರಿ ಸಂಗತಿ. ಎಷ್ಟೋ ವೇಳೆ ಯುವ ಜನರ ಈ ಅಪಾಯಕಾರಿ ಖಯಾಲಿ ದಾರುಣ ಸಾವಿನೊಂದಿಗೆ ಅಂತ್ಯಗೊಂಡಿರುವುದು ಕಂಡು ಬಂದಿದೆ.

ಕೆಲವು ದಿನಗಳ ಹಿಂದೆ ಮುಂಬಯಿಯ ಮೆರೈನ್‌ ಡ್ರೈವ್‌ನ ವಾಹನ ದಟ್ಟನೆಯ ರಸ್ತೆಯಲ್ಲಿ ಯುವಕನೋರ್ವ ಅತ್ಯಂತ ಅಪಾಯಕಾರಿ ಎನಿಸುವ ಬೈಕ್‌ ಸ್ಟಂಟ್‌ ನಡೆಸುತ್ತಿರುವಾಗ ಮುಗ್ಗರಿಸಿ ಬಿದ್ದು ಪ್ರಾಣ ಕಳೆದುಕೊಂಡ !

ಈತನ ಈ ಬೈಕ್‌ ಸ್ಟಂಟ್‌ ವಿಡಿಯೋ ಚಿತ್ರೀಕರಣ ನಡೆಸುತ್ತಿದ್ದವರಿಗೆ ಕೆಲವೇ ಕ್ಷಣಗಳಲ್ಲಿ ತಮ್ಮ ಪರಮಾಪ್ತ ಸ್ನೇಹಿತನಿಗೆ ಸಾವು ಸನ್ನಿಹಿತವಾಗಿರುವ ಯಾವುದೇ ಸೂಚನೆ ಇರಲಿಲ್ಲ.

ಎಲ್ಲವೂ ಥ್ರಿಲ್‌ ಗಾಗಿ ಎನ್ನುವಂತೆ ನಡೆದ ಈ ಘಟನೆಯಲ್ಲಿ ಹೆಲ್ಮೆಟ್‌ ಕೂಡ ಧರಿಸಿಕೊಂಡಿರದ ಯುವಕನು ಅಂತಿಮವಾಗಿ ರೋಡ್‌ ಡಿವೈಡರ್‌ಗೆ ತಲೆ ಬಡಿದು ಸತ್ತ.

ಅದಾಗಿ ಆತನ ಸ್ನೇಹಿತರು ತಾವು ಚಿತ್ರಿಕರಿಸಿಕೊಂಡಿದ್ದ ಈ ಬೈಕ್‌ ಸ್ಟಂಟ್‌ನ ವಿಡಿಯೋವನ್ನು ಸಾಮಾಜಿಕ ಜಾಲ ತಾಣಕ್ಕೆ ಅಪ್‌ಲೋಡ್‌ ಮಾಡಿದ್ದಾರೆ. ಅದೀಗ ವೈರಲ್‌ ಆಗಿದೆ.

ಒಟ್ಟಿನಲ್ಲಿ ಒಂದು ಮಾತು : ಬದುಕಿನಲ್ಲಿ ಥ್ರಿಲ್‌ ಇರಲಿ; ಆದರೆ ಅಮೂಲ್ಯವಾದ ಜೀವ ಅದಕ್ಕೆ ಎರವಾಗದಿರಲಿ – ಅಲ್ಲವೇ?
-ಉದಯವಾಣಿ

Comments are closed.