ಅಂತರಾಷ್ಟ್ರೀಯ

ಉದ್ದೀಪನ ಮದ್ದು ಸೇವಿಸಿದ್ದ ವಿಷಯ ಬಹಿರಂಗ ಮಾಡಿದ್ದ ರಷ್ಯಾದ ಆಟಗಾರ್ತಿ ಶರಪೋವಾ ಎರಡು ವರ್ಷ ಅಮಾನತು

Pinterest LinkedIn Tumblr

maria-sharapova

ಲಂಡನ್‌ (ಎಪಿ): ಟೆನಿಸ್‌ ಟೂರ್ನಿಗಳ ವೇಳೆ ಉದ್ದೀಪನ ಮದ್ದು ಸೇವಿಸಿದ್ದ ಬಗ್ಗೆ ತಪ್ಪೊಪ್ಪಿಕೊಂಡಿದ್ದ ರಷ್ಯಾದ ಮರಿಯಾ ಶರಪೋವಾ ಅವರಿಗೆ ಅಂತರ ರಾಷ್ಟ್ರೀಯ ಟೆನಿಸ್‌ ಫೆಡರೇಷನ್‌ ಎರಡು ವರ್ಷ ಅಮಾನತು ಶಿಕ್ಷೆ ಹೇರಿದೆ.

29 ವರ್ಷದ ಶರಪೋವಾ ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಒಂದು, ಫ್ರೆಂಚ್‌ ಓಪನ್ ಟೂರ್ನಿಯ ಸಿಂಗಲ್ಸ್‌ನಲ್ಲಿ ಎರಡು ಸಲ ಚಾಂಪಿಯನ್‌ ಆಗಿದ್ದಾರೆ. 2004ರ ವಿಂಬಲ್ಡನ್‌ ಮತ್ತು 2006ರ ಅಮೆರಿಕ ಓಪನ್‌ ಟೂರ್ನಿ ಗಳಲ್ಲಿಯೂ ಟ್ರೋಫಿ ಎತ್ತಿ ಹಿಡಿದಿದ್ದರು.

‘ಆಸ್ಟ್ರೇಲಿಯಾ ಓಪನ್‌ ಗ್ರ್ಯಾಂಡ್‌ ಸ್ಲಾಮ್‌ ಟೂರ್ನಿಯ ವೇಳೆ ಗೊತ್ತಿಲ್ಲದೇ ಮೆಲ್ಡೋನಿಯಮ್‌ ಸೇವಿಸಿದ್ದೆ’ ಎಂದು ಇದೇ ವರ್ಷದ ಜನವರಿಯಲ್ಲಿ ಲಾಸ್‌ ಏಂಜಲೀಸ್‌ನಲ್ಲಿ ನಡೆದಿದ್ದ ಪತ್ರಿಕಾ ಗೋಷ್ಠಿಯಲ್ಲಿ ಶರಪೋವಾ ಬಹಿರಂಗ ಗೊಳಿಸಿದ್ದರು. ಆದ್ದರಿಂದ ಅಂತರ ರಾಷ್ಟ್ರೀಯ ಟೆನಿಸ್‌ ಫೆಡರೇಷನ್ ಮಾರ್ಚ್‌ನಲ್ಲಿಯೇ ಅವರನ್ನು ಅಮಾ ನತು ಮಾಡಿತ್ತು. ಆದರೆ ಎಷ್ಟು ವರ್ಷ ಅಮಾನತು ಎಂಬುದನ್ನು ತಿಳಿಸಿರಲಿಲ್ಲ.

‘ವಿಶ್ವ ಉದ್ದೀಪನಾ ಮದ್ದು ತಡೆಘಟಕದ ನಿಯಮಾವಳಿಯ ಪ್ರಕಾರ ಮೆಲ್ಡೋನಿಯಮ್ ಅನ್ನು ಸೇವಿಸ ಬಾರದು ಎನ್ನುವ ವಿಷಯ ನನಗೆ ಗೊತ್ತಿರಲಿಲ್ಲ’ ಎಂದು ಶರಪೋವಾ ಹೇಳಿದ್ದರು.

ರಷ್ಯಾದ ಈ ಆಟಗಾರ್ತಿ ವಿಶ್ವ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಹೊಂದಿದ್ದರು. ವಿಂಬಲ್ಡನ್‌ ಟೂರ್ನಿ ಯಲ್ಲಿ ಚೊಚ್ಚಲ ಪ್ರಶಸ್ತಿ ಜಯಿಸಿದಾಗ ಅವರಿಗೆ 17 ವರ್ಷವಾಗಿತ್ತು. 18ನೇ ವಯಸ್ಸಿಗೆ ರ್‍ಯಾಂಕಿಂಗ್‌ನಲ್ಲಿ ಅಗ್ರಸ್ಥಾನ ಸಂಪಾದಿಸಿದ್ದರು. ಅಮೆರಿಕ ಓಪನ್‌ನಲ್ಲಿ ಪ್ರಶಸ್ತಿ ಗೆದ್ದಾಗ ಅವರಿಗೆ 19 ವರ್ಷವಷ್ಟೇ. ನಂತರದ ವರ್ಷದಲ್ಲಿಯೇ ಅವರು ಆಸ್ಟ್ರೇಲಿಯಾ ಓಪನ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿದ್ದರು.

ಬಲಗೈ ಭುಜದ ನೋವಿಗೆ ಒಳಗಾಗಿದ್ದ ಕಾರಣ ಅವರು ಸಾಕಷ್ಟು ಟೂರ್ನಿಗಳಿಂದ ಹಿಂದೆ ಸರಿದಿದ್ದರು. ಇದರಿಂದ ನೂರಕ್ಕಿಂತಲೂ ಹೆಚ್ಚು ರ್‍ಯಾಂಕ್‌ಗೆ ಕುಸಿದಿದ್ದರು. ಎಲ್ಲಾ ಸಂಕಷ್ಟ ಗಳನ್ನು ಮೆಟ್ಟಿ ನಿಂತು ಬಂದ ಶರ ಪೋವಾ 2012ರಲ್ಲಿ ಫ್ರೆಂಚ್‌ ಓಪನ್‌ ಟೂರ್ನಿಯಲ್ಲಿ ಪ್ರಶಸ್ತಿ ಎತ್ತಿ ಹಿಡಿದು ಸಾಮರ್ಥ್ಯ ಸಾಬೀತು ಮಾಡಿದ್ದರು.

ಶರಪೋವಾ ಇದೇ ವರ್ಷದ ಆಸ್ಟ್ರೇಲಿಯಾ ಓಪನ್‌ ಟೆನಿಸ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಹೋರಾಟದಲ್ಲಿ ಅಮೆರಿಕದ ಸೆರೆನಾ ವಿಲಿಯಮ್ಸ್‌ ವಿರುದ್ಧ ಆಡಿದ್ದರು. ನಂತರ ಅವರು ಯಾವ ಟೂರ್ನಿಗಳಲ್ಲಿಯೂ ಪಾಲ್ಗೊಂಡಿಲ್ಲ. 2012ರ ಲಂಡನ್‌ ಒಲಿಂಪಿಕ್ಸ್‌ನ ಸಿಂಗಲ್ಸ್‌ನಲ್ಲಿ ಬೆಳ್ಳಿ ಜಯಿಸಿದ್ದರು.

Comments are closed.