ಮನೋರಂಜನೆ

ನಟಿ ಪ್ರಿಯಾಮಣಿ ವಿವಾಹ ನಿಶ್ಚಿತಾರ್ಥ; ಮುಸ್ತಫಾ ಜತೆ ಮದುವೆ

Pinterest LinkedIn Tumblr

Musthapaದಕ್ಷಿಣ ಭಾರತದ ಬಹುಬೇಡಿಕೆಯ ನಟಿ, ಪಂಚಭಾಷಾ ತಾರೆ ಪ್ರಿಯಾಮಣಿ ಅವರ ಮದುವೆ ನಿಶ್ಚಿತಾರ್ಥ ಸದ್ದಿಲ್ಲದೇ ನಡೆದಿದೆ. ತನ್ನ ಬಹುಕಾಲದ ಗೆಳೆಯ, ಮುಂಬೈ ಮೂಲದ ಮುಸ್ತಫಾ ರಾಜಾ ಜತೆ ಪ್ರಿಯಾಮಣಿ ಉಂಗುರ
ಬದಲಾಯಿಸಿ ಕೊಂಡಿದ್ದಾರೆ.

ಪ್ರಿಯಾಮಣಿ ಅವರ ಸ್ವಗೃಹದಲ್ಲೇ ಈ ಕಾರ್ಯಕ್ರಮ ನಡೆದಿದ್ದು ಹುಡುಗ- ಹುಡುಗಿ ಎರಡೂ ಕಡೆಯವರು ನಿಶ್ಚಿತಾರ್ಥಕ್ಕೆ ಸಾಕ್ಷಿಯಾದರು. ಎರಡೂ ಕುಟುಂಬದ ಒಪ್ಪಿಗೆಯಂತೆ ನಿಶ್ಚಿತಾರ್ಥ ನಡೆದಿದೆ. ಈ ವರ್ಷದ ಕೊನೆ ಯಲ್ಲಿ ಮದುವೆ ಜರುಗುವ ಸಾಧ್ಯತೆ ಇದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಸಿಸಿಎಲ್‌ ಪಂದ್ಯಾವಳಿಯ ವೇಳೆ ಪ್ರಿಯಾಮಣಿ ಅವರಿಗೆ ಮುಸ್ತಫಾ ರಾಜಾ ಜತೆ ಪರಿಚಯವಾಗಿ ಪ್ರೀತಿಗೆ ತಿರುಗಿತ್ತು. ಅದು ಈಗ ಕಂಕಣ ಭಾಗ್ಯದ ಹೊಸ್ತಿಲಿಗೆ ಬಂದು ನಿಂತಿದೆ.

ಕನ್ನಡದ ರಾಮ್‌, ಕೋಕೋ, ಅಣ್ಣಾಬಾಂಡ್‌, ವಿಷ್ಣುವರ್ಧನ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದು ದನ ಕಾಯೋನೂ ಮುಂತಾದ ಚಿತ್ರಗಳು ಬಿಡುಗಡೆ ಯಾಗಬೇಕಿದೆ. ಅಲ್ಲದೇ ತಮಿಳು, ತೆಲಗು, ಮಲೆಯಾಳಂ, ಹಿಂದಿ ಚಿತ್ರಗಳಲ್ಲೂ ಪ್ರಿಯಾಮಣಿ ನಟಿಸಿದ್ದು “ಅತ್ಯುತ್ತಮ ನಟಿ’ ರಾಷ್ಟ್ರ, ರಾಜ್ಯ ಹಾಗೂ ಫಿಲಂಫೇರ್‌ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ಪ್ರಿಯಾಮಣಿ ಮೂಲತಃ ಬೆಂಗಳೂರಿನವರು. ಅರಬಿಂದೋ ಮೆಮೋರಿಯಲ್‌ ಸ್ಕೂಲ್‌, ಬಿಷಪ್‌ ಕಾಟನ್‌ ಮಹಿಳಾ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದ್ದಾರೆ.
-ಉದಯವಾಣಿ

Comments are closed.