ಮನೋರಂಜನೆ

7ಡಿ ಸಿನಿಮಾ ನೋಡ್ತಾ ಮಾಯಲೋಕಕ್ಕೆ ಹೋಗಿ ಬನ್ನಿ

Pinterest LinkedIn Tumblr

Suli-28-5ನೀವು 3ಡಿ ಸಿನಿಮಾ ನೋಡಿರುತ್ತೀರಿ. 3ಡಿ ಕನ್ನಡಕ ಧರಿಸಿ ಸಿನಿಮಾ ನೋಡುತ್ತಿರುವಾಗ ಸಿನಿಮಾದಲ್ಲಿರುವ ಪಾತ್ರಗಳು, ಪ್ರಾಣಿಗಳು, ಕಾರುಗಳು, ಬಸ್ಸುಗಳು ನಿಮ್ಮೆದುರೇ ಚಲಿಸಿದಂತೆ ಭಾಸವಾಗುತ್ತದೆ. ಇಲ್ಲೇ ಹತ್ತಿರದಲ್ಲಿ ಕೈಯಿಂದ ಮುಟ್ಟುವಷ್ಟು ಸಮೀಪದಲ್ಲಿದೆ ಅಂತ ನೀವಂದುಕೊಳ್ಳುತ್ತೀರಿ. 3ಡಿಯಲ್ಲಿ ವಿಶುವಲ್‌ ಎಫೆಕ್ಟ್ ಮಾತ್ರ. ಆದರೆ ಈಗ 7ಡಿ ಸಿನಿಮಾಗಳ ಕಾಲವೂ ಬಂದಾಗಿದೆ. 7ಡಿ ಸಿನಿಮಾ ನೋಡುತ್ತಿದ್ದರೆ ನೀವು ಈ ಸಿನಿಮಾದ ಭಾಗವಾಗಿ ಹೋಗುತ್ತೀರಿ.

ಹೇಗೆ ಗೊತ್ತಾ? ಸಿನಿಮಾದಲ್ಲಿ ಒಂದು ಬಸ್ಸು ಚಲಿಸುತ್ತಿದ್ದೆ. ನಿಮಗೆ ನೀವೂ ಆ ಬಸ್ಸಲ್ಲಿ ಚಲಿಸಿದ ಅನುಭವವನ್ನು 7ಡಿ ಒದಗಿಸುತ್ತದೆ. ಬಸ್ಸು ಎಲ್ಲಾದರೂ ಹಳ್ಳಕ್ಕೆ ಬಿದ್ದರೆ ನೀವು ಎಗರಿ ಬೀಳುತ್ತೀರಿ. ಹಾಗೆ ಹೋಗುತ್ತಿರುವಾಗಲೇ ಮಳೆ ಬಂದರೆ ನಿಮ್ಮ ಮೇಲೂ ಮಳೆ ಹನಿ ಬೀಳುತ್ತದೆ. ಇದ್ದಕ್ಕಿದ್ದಂತೆ ಪ್ರಾಣಿಯೊಂದು ಬಸ್ಸಿನ ಕಿಟಕಿ ಪಕ್ಕ ಬಂದು ನಿಂತರೆ ನೀವು ಬೆಚ್ಚಿ ಬೀಳುತ್ತೀರಿ.

7ಡಿ ಸಿನಿಮಾ ನೋಡುತ್ತಿದ್ದಂತೆಯೇ ಒಂದು ಮಾಯಾಲೋಕಕ್ಕೆ ಹೋದ ಅನುಭವ ಆಗುತ್ತದೆ. ಮಕ್ಕಳಂತೂ ಸಿಕ್ಕಾಪಟ್ಟೆ ಎಂಜಾಯ್‌ ಮಾಡುತ್ತಾರೆ. ಅಂದಹಾಗೆ ಈ 7ಡಿ ಸಿನಿಮಾಗಳು ತುಂಬಾ ಕಡಿಮೆ ಅವಧಿಯವು. 15 ರಿಂದ 20 ನಿಮಿಷ ಅವಧಿಯ ಸಿನಿಮಾಗಳು. ಬೆಂಗಳೂರಿನಲ್ಲಿ ನಾಲ್ಕು ಕಡೆಗಳಲ್ಲಿ ನೀವು ಈ 7ಡಿ ಸಿನಿಮಾ ನೋಡಬಹುದು. ಇಲ್ಲಿ ಕೆಲವು ಕಡೆ 9ಡಿ ಸಿನಿಮಾ ಪ್ರದರ್ಶನವೂ ಇದೆ. ಪುರ್ಸೊತ್ತಿದ್ದಾಗ ಮಕ್ಕಳ ಜೊತೆ ಹೋಗಿ 7ಡಿ ಸಿನಿಮಾ ನೋಡ್ಕೊಂಡ್‌ ಬನ್ನಿ.

ಮಾಡರ್ನ್ ಮಸ್ತಿ

ಇದೊಂದು 7ಡಿ ಸಿನಿಮಾ ತೋರಿಸುವ ತಾಣ. ಮಾಡರ್ನ್ ಮಸ್ತಿ ಶಾಖೆಗಳು ಎರಡು ಕಡೆ ಇವೆ. ಒಂದು ನಾಗವಾರದಲ್ಲಿರುವ ಎಲಿಮೆಂಟ್‌ ಮಾಲ್‌ನಲ್ಲಿ. ಇನ್ನೊಂದು ವೈಟ್‌ಫೀಲ್ಡ್‌ನಲ್ಲಿರುವ ಫೋರಂ ವಾಲ್ಯೂ ಮಾಲ್‌ನಲ್ಲಿ. ಫೋರಂ ವಾಲ್ಯೂ ಮಾಲ್‌ನಲ್ಲಿ ಸದ್ಯ ಎರಡು ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಒಂದು ಟೆರಿಫಿಕ್‌ ಡೈನೋಸಾರ್‌ ಆ್ಯಂಡ್‌ ವೈಲ್ಡ್‌ ಕೋಸ್ಟರ್‌. ಇನ್ನೊಂದು ಎಕ್ಸ್‌ಡಿ ಪ್ಲಸ್‌ ಫಾರೆಸ್ಟ್‌ ಅಡ್ವೆಂಚರ್‌. ಎಲಿಮೆಂಟ್‌ ಮಾಲ್‌ನಲ್ಲಿ ಟೆರಿಫಿಕ್‌ ಡೈನೋಸಾರ್‌ ಆ್ಯಂಡ್‌ ವೈಲ್ಡ್‌ ಕೋಸ್ಟರ್‌ ಮತ್ತು ಟೆಂಪಲ್‌ ರನ್‌ ಆ್ಯಂಡ್‌ ಫಾರೆಸ್ಟ್‌ ಅಡ್ವೆಂಚರ್‌. ನೀವು ನಿಮ್ಮ ಸಮಯ ನೋಡಿಕೊಂಡು ನಿಮ್ಮಿಷ್ಟದ ಸಿನಿಮಾಗಳಿಗೆ ಹೋಗಬಹುದು.

ದೂ- 9902759356

ಟಿಕೆಟ್‌- ರೂ.150

ವೆಬ್‌ಸೈಟ್‌- www.modernxd.com
ಫೇಸ್‌ಬುಕ್‌- https://www.facebook.com/ModernMastii7d/timeline

7ಡಿ ವೋಯೆಜ್‌

ಬೆಳ್ಳಂದೂರಿನಲ್ಲಿರುವ ಸೆಂಟ್ರಲ್‌ ಮಾಲ್‌ನಲ್ಲಿ ಇರುವುದು 7ಡಿ ವೋಯೆಜ್‌. ಮಗ್ರಾತ್‌ ರಸ್ತೆಯಲ್ಲಿರುವ ಗರುಡಾ ಮಾಲ್‌ನಲ್ಲಿ 7ಡಿ ವಿಆರ್‌ ವೋಯೆಜ್‌ ಸಿನಿಮಾ ಇದೆ. ಇವೆರಡರಲ್ಲೂ ಸದ್ಯ ಎರಡು ಸಿನಿಮಾಗಳು ಪ್ರದರ್ಶನಗೊಳ್ಳುತ್ತಿವೆ. ಒಂದು ಆಫ್ರೋಡ್‌ ರೇಸಿಂಗ್‌ ಆ್ಯಂಡ್‌ ಏಲಿಯನ್‌ ವಿಸಿಟ್ಸ್‌ ಏನÒಂಟ್‌ ಅರ್ತ್‌. ಇನ್ನೊಂದು ಟ್ರೈಕ್‌ ಕೋಸ್ಟರ್‌ ಆ್ಯಂಡ್‌ ಜಂಗಲ್‌ ಅಡ್ವೆಂಚರ್‌. ಒಂದು ಸಿನಿಮಾ ಆದ ನಂತರ ಇನ್ನೊಂದು ಸಿನಿಮಾ ಪ್ರದರ್ಶನ ಇರುತ್ತದೆ. ಹಾಗಾಗಿ ಒಂದ್ಸಲ ಹೋದರೆ ಎರಡೂ ಸಿನಿಮಾ ನೋಡಿಕೊಂಡು ಬರಬಹುದು.
ದೂ- 080 49029560
ಟಿಕೆಟ್‌-
ಗರುಡಾ ಮಾಲ್‌- ರೂ. 170
ಸೆಂಟ್ರಲ್‌ ಮಾಲ್‌- ರೂ.160
ಫೇಸ್‌ಬುಕ್‌- https://www.facebook.com/7DVoyage/timeline

-ಉದಯವಾಣಿ

Comments are closed.