ಮನೋರಂಜನೆ

ಅಕ್ಷಯ್ ಕುಮಾರ್ ಮಾಡಲಿದ್ದಾರೆ ಸಲಿಂಗಕಾಮಿ ಪಾತ್ರ

Pinterest LinkedIn Tumblr

akshay-kumarನವದೆಹಲಿ: ನಾಯಕನ ಪಾತ್ರಗಳಿಗೆ ಕಟ್ಟುಬೀಳದೆ ತನ್ನ ನಟನಾ ಸಾಮರ್ಥ್ಯ ತೋರಲು ಬಾಲಿವುಡ್ನ ಬೇಡಿಕೆಯ ನಟ ಅಕ್ಷಯ್ ಕುಮಾರ್ ತಮ್ಮ ಮುಂಬರುವ ಚಿತ್ರ ‘ಡಿಶೂಂ’ ನಲ್ಲಿ ಸಲಿಂಗಕಾಮಿಯ ಪಾತ್ರ ನಿರ್ವಹಿಸಲಿದ್ದಾರೆ. ಇತ್ತೀಚೆಗೆ ಬಾಲಿವುಡ್ನಲ್ಲಿ ತೆರೆಕಂಡ ಕಪೂರ್ ಆಂಡ್ ಸನ್ಸ್ ಮತ್ತು ಅಲಿಗರ್ ಎಂಬ ಚಿತ್ರಗಳ ಸಾಲಿಗೆ ಡಿಶೂಂ ಕೂಡ ಸೇರ್ಪಡೆಯಾಗಲಿದೆ.

ಚಿತ್ರದ ಚಿತ್ರೀಕರಣ ಆರಂಭವಾಗಿದ್ದು, ಸದ್ಯ ಅಬುಧಾಬಿಯಲ್ಲಿ ಸಹನಟರಾದ ವರುಣ್ ಧವನ್ ಮತ್ತು ಜಾನ್ ಅಬ್ರಾಹಾಂ ಜತೆ ಕೆಲ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಡಿಶೂಂ ಚಿತ್ರದಲ್ಲಿ ಅಕ್ಕಿ ಸ್ಕರ್ಟ್ ಕೂಡ ಧರಿಸಿದ್ದಾರೆ ಎಂಬ ಸುದ್ದಿ ಹರಡಿದೆ.

ಚಿತ್ರವನ್ನು ರೋಹಿತ್ ಧವನ್ ನಿರ್ದೇಶನ ಮಾಡುತ್ತಿದ್ದಾರೆ. ನಾಯಕಿಯಾಗಿ ಬಾಲಿವುಡ್ ಬ್ಯೂಟಿ ಜಾಕ್ವೆಲಿನ್ ಫರ್ನಾಂಡಿಸ್ ನಟಿಸುತ್ತಿದ್ದಾರೆ. ಜೂನ್ 29 ಕ್ಕೆ ಚಿತ್ರ ತೆರೆಕಾಣುವ ನಿರೀಕ್ಷೆಯಿದೆ.

Comments are closed.