ಲಾಹೋರ್: ಮಹತ್ವದ ತೀರ್ಪೊಂದರಲ್ಲಿ ಪಾಕಿಸ್ತಾನದ ಭಯೋತ್ಪಾದನೆ ನಿಗ್ರಹ ನ್ಯಾಯಾಲಯವೊಂದು ಲಷ್ಕರ್-ಇ=-ತೊಯ್ಬಾ ಕಮಾಂಡರ್ ಝುಕಿ-ಉರ್-ರೆಹಮಾನ್ ಲಖ್ವಿ ಮತ್ತು 2008ರ 26/11 ಮುಂಬೈ ದಾಳಿ ಪ್ರಕರಣದ ಇತರ 6 ಮಂದಿ ಆರೋಪಿಗಳ ವಿರುದ್ಧ 166 ಮಂದಿಯ ಕೊಲೆಗೆ ಪ್ರಚೋದನೆ ನೀಡಿದ ಆರೋಪವನ್ನು ಪ್ರತಿಯೊಬ್ಬನ ಮೇಲೂ ಹೊರಿಸುವಂತೆ ಆದೇಶ ನೀಡಿದೆ.
‘7 ಮಂದಿ ಶಂಕಿತರ ವಿರುದ್ಧ ವೈಯಕ್ತಿಕವಾಗಿ ಮುಂಬೈ ದಾಳಿ ಪ್ರಕರಣದಲ್ಲಿ ಮೃತನಾದ ಪ್ರತಿಯೊಬ್ಬ ವ್ಯಕ್ತಿಯ ಕೊಲೆಗೂ ಪ್ರಚೋದನೆ ನೀಡಿದ ಆರೋಪವನ್ನು ಹೊರಿಸಲಾಗುವುದು’ ಎಂದು ವಿಚಾರಣಾ ನ್ಯಾಯಾಲಯದ ಆದೇಶವನ್ನು ಉಲ್ಲೇಖಿಸುತ್ತಾ ಹಿರಿಯ ಕೋರ್ಟ್ ಅಧಿಕಾರಿಯೊಬ್ಬರು ತಿಳಿಸಿದರು.
ಏನಿದ್ದರೂ ಈ ಶಂಕಿತರ ಪಾಟೀ ಸವಾಲಿಗೆ ಅವಕಾಶ ನೀಡಲಾಗುವುದಿಲ್ಲ ಎಂದು ಕೋರ್ಟ್ ಹೇಳಿದೆ ಎಂದು ಅಧಿಕಾರಿ ನುಡಿದರು. ಲಖ್ವಿ ಮತ್ತು ಇತರ ಶಂಕಿತ ಆರೋಪಿಗಳ ಮೇಲಿನ ಆರೋಪಗಳಿಗೆ ತಿದ್ದುಪಡಿ ಮಾಡಲು ಅವಕಾಶ ನೀಡುವಂತೆ ಪ್ರಾಸೆಕ್ಯೂಷನ್ ಎರಡು ತಿಂಗಳುಗಳ ಹಿಂದೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಪ್ರಾಸೆಕ್ಯೂಷನ್ ಮತ್ತು ಆರೋಪಿ ಪರ ವಕೀಲರ ವಾದ ಪ್ರತಿವಾದಗಳ ಬಳಿಕ ಮಾಚ್ ತಿಂಗಳಲ್ಲಿ ವಿಚಾರಣಾ ನ್ಯಾಯಾಲಯವು ತನ್ನ ತೀರ್ಪನ್ನು ಕಾಯ್ದಿರಿಸಿತ್ತು.
Comments are closed.