ರಾಷ್ಟ್ರೀಯ

ಭಟ್ಕಳ ಮೂಲದ ಉಗ್ರ ಅಬ್ದುಲ್ ವಾಹಿದ್ ಅಂದರ್

Pinterest LinkedIn Tumblr

vaheed-e1463734380309ದೆಹಲಿ: ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಹಿರಿಯ ಸದಸ್ಯ ಅಬ್ದುಲ್ ವಾಹಿದ್ ಸಿದ್ದಿಬಾಪನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಮಧ್ಯಾಹ್ನ ಬಂಧಿಸಿದ್ದಾರೆ.

ಕರ್ನಾಟಕದ ಭಟ್ಕಳ ಮೂಲದ ಅಬ್ದುಲ್ ವಾಹಿದ್ ಬಂಧಿತ ಉಗ್ರ.

ಬಂಧಿತ ವಾಹಿದ್‌ ದುಬೈನಲ್ಲಿದ್ದುಕೊಂಡು ಉಗ್ರ ಸಂಘಟನೆಗಳಿಗೆ ಹಣಕಾಸು ನೆರವು ನೀಡುತ್ತಿದ್ದುದು ಬಯಲಾಗಿದೆ. ಆ ಬಳಿಕ ದುಬೈ ಈತನನ್ನು ಗಡಿಪಾರು ಮಾಡಿದ್ದುಇಂದು ಎನ್‌ಐಎ ವಶಕ್ಕೆ ಪಡೆದಿದೆ.

ಭಾರತದಲ್ಲಿ ನಡೆದ ಹಲವು ಪ್ರಮುಖ ದಾಳಿ ಮತ್ತು ವಿಧ್ವಂಸಕ ಕೃತ್ಯಗಳಿಗೂ ಈತ ಪ್ರಮುಖ ಕಾರಣಕರ್ತನಾಗಿದ್ದು, ಪೊಲೀಸರು ಈತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು.

ಇದೀಗ ಮಾರುವೇಶದಲ್ಲಿ ದುಬೈನಿಂದ ದೆಹಲಿಗೆ ಬಂದಿಳಿದ ವಾಹಿದ್ ತನಿಖಾ ದಳದ ಬಲೆಗೆ ಬಿದ್ದಿರುವುದು ಹಲವು ಪ್ರಕರಣಗಳ ವಿಚಾರಣೆಗೆ ಸಹಕಾರಿಯಾದಂತಾಗಿದೆ.

Comments are closed.