ರಾಷ್ಟ್ರೀಯ

ಆನ್‌ಲೈನ್‌ ಖರೀದಿ ಹೆಚ್ಚು ಜನಪ್ರಿಯ: ಸಮೀಕ್ಷೆ

Pinterest LinkedIn Tumblr

onlineನವದೆಹಲಿ(ಪಿಟಿಐ): ಇತ್ತೀಚೆಗೆ ಶೇಕಡಾ 80ರಷ್ಟು ಗ್ರಾಹಕರು ಅಗತ್ಯ ವಸ್ತುಗಳ ಖರೀದಿಗೆ ಮಾರಾಟ ಮಳಿಗೆಗಳಿಗೆ ಭೇಟಿ ನೀಡುವ ಬದಲು ಅಂತರ್ಜಾಲ ತಾಣದಲ್ಲಿ ‘ಆನ್‌ಲೈನ್‌’ ಮೂಲಕ ವಸ್ತುಗಳ ಕೊಳ್ಳುತ್ತಿದ್ದಾರೆ.

ಇತ್ತೀಚೆಗೆ ಯಾಹೂ ಮತ್ತು ಮೈಂಡ್‌ಶೇರ್‌ ಸಂಸ್ಥೆಗಳು ಜಂಟಿಯಾಗಿ ‘ಆನ್‌ಲೈನ್‌ ಗ್ರಾಹಕರ ಇತ್ತೀಚಿನ ಪ್ರವೃತ್ತಿ’ ಕುರಿತು ನಡೆಸಿದ ಸಮೀಕ್ಷೆ ವರದಿಯಲ್ಲಿ ಹೇಳಿದೆ.

ಶೇ 31ರಷ್ಟು ಗ್ರಾಹಕರು ದೈಹಿಕ ಶ್ರಮ ಮತ್ತು ಸಮಯ ಉಳಿಕೆ ಉದ್ದೇಶಕ್ಕೆ ಆನ್‌ಲೈನ್‌ ಮೊರೆ ಹೋಗಿದ್ದಾರೆ. ಇದ್ದರಿಂದ ಮಳಿಗೆಗಳಿಗೆ ತೆರಲಿ ಉತ್ಪನ್ನ ಖರೀದಿಸುವವರ ಪ್ರಮಾಣ ಕಡಿಮೆಯಾಗಿದೆ. ಶೇ 28ರಷ್ಟು ಗ್ರಾಹಕರು ಆನ್‌ಲೈನ್‌ನಲ್ಲಿ ಅಗತ್ಯ ವಸ್ತುಗಳಿಗೆ ಸಿಗುವ ರಿಯಾಯಿತಿ ಮತ್ತು ಅವುಗಳ ಪ್ರಚಾರಕ್ಕೆ ಆಕರ್ಷಿತರಾಗಿದ್ದಾರೆ.

ಆನ್‌ಲೈನ್‌ ಖರೀದಿ ಪ್ರಕ್ರಿಯೆಯಲ್ಲಿ ಹೆಚ್ಚು ಹೆಚ್ಚು ಗ್ರಾಹಕರನ್ನು ಸಂರ್ಪಕಿಸುವ ವಿವಿಧ ವಿದ್ಯುನ್ಮಾನ ಸಾಧನಗಳಿಗೆ ಹೋಲಿಸಿದರೆ ಮೊಬೈಲ್‌ ಫೋನ್‌ ಪ್ರಮುಖ ಪಾತ್ರ ವಹಿಸುತ್ತದೆ.

ವಯಸ್ಕರ ದೈನಂದಿನ ಉಡುಪು, ವಿದ್ಯುನ್ಮಾನ ಉಪಕರಣಗಳು, ಮಕ್ಕಳ ಆಟಿಕೆಗಳು ಹಾಗೂ ಸಾಕು ಪ್ರಾಣಿಗಳ ಅಗತ್ಯ ಉತ್ಪನಗಳನ್ನು ಗ್ರಾಹಕರು ಅನ್‌ಲೈನ್‌ನಲ್ಲಿ ಹೆಚ್ಚಾಗಿ ಖರೀದಿಸುತ್ತಾರೆ ಎಂದು ಸಮೀಕ್ಷೆ ತಿಳಿಸಿದೆ.

ಪ್ರಸುತ್ತ ಭಾರತದಲ್ಲಿನ ಆನ್‌ಲೈನ್‌ ಗ್ರಾಹಕ ಪ್ರಮಾಣ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇದು ಇ– ಕಾಮರ್ಸ್ ಕಾರ್ಯ ನಿರ್ವಹಣೆಗೆ ಬೇಕಾದ ಸಂಪರ್ಕ ಸಂವಹನ ಕೌಶಲ್ಯದ ಅಭಿವೃದ್ಧಿಗೆ ಸಹಾಯವಾಗುತ್ತದೆ ಎಂದು ಮೈಂಡ್‌ಶೇರ್‌ ಸಂಸ್ಥೆಯ ಮುಖ್ಯ ಉತ್ಪನ್ನ ಅಧಿಕಾರಿ ಎಂ.ಪಿ. ಪಾರ್ಥಸಾರಥಿ ಅಭಿಪ್ರಾಯಪಟ್ಟಿದ್ದಾರೆ.

ಆನ್‌ಲೈನ್‌ ಖರೀದಿ ಪ್ರಕ್ರಿಯೇಯಲ್ಲಿ ತೊಡಗುವ ಗ್ರಾಹಕರು ಅಧಿಕೃತವಲ್ಲದ ಸರಕುಗಳು ಮತ್ತು ವಿಶ್ವಾಸಾರ್ಹವಲ್ಲದ ವಿತರಣೆ ಹಾಗೂ ಗುಣಮಟ್ಟ ನಿಯಂತ್ರಣ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಸಮೀಕ್ಷೆ ಸೂಚಿಸಿದೆ.

Comments are closed.