ರಾಷ್ಟ್ರೀಯ

ಅಸ್ಸಾಂ: 22ಕ್ಕೆ ಶಾಸಕಾಂಗ ಪಕ್ಷದ ಸಭೆ, 24ಕ್ಕೆ ಸರ್ಕಾರ ರಚನೆ

Pinterest LinkedIn Tumblr

assam

ಗುವಾಹಟಿ(ಪಿಟಿಐ): ಅಸ್ಸಾಂನಲ್ಲಿ ಗದ್ದುಗೆ ಏರಲು ಸಿದ್ಧತೆ ನಡೆಸಿರುವ ಬಿಜೆಪಿಯು ಪಕ್ಷದ ಪ್ರಥಮ ಶಾಸಕಾಂಗ ಸಭೆಯನ್ನು ಮೇ 22ರಂದು ನಡೆಸಲಿದ್ದು, ಮುಖ್ಯಮಂತ್ರಿ ಅಭ್ಯರ್ಥಿ ಸರ್ಬಾನಂದ ಸೋನೋವಾಲ್ ಅವರನ್ನು ಶಾಸಕಾಂಗ ಪಕ್ಷದ ನಾಯಕರನ್ನಾಗಿ ಆಯ್ಕೆ ಮಾಡಲಿದೆ. ಮೇ 24ರಂದು ನೂತನ ಸರ್ಕಾರ ರಚನೆ ಮಾಡಲಿದೆ.

ಗುವಾಹಟಿಯಲ್ಲಿನ ಪಕ್ಷದ ಕೇಂದ್ರ ಕಚೇರಿಯಲ್ಲಿ ಶುಕ್ರವಾರ ಅನೌಪಚಾರಿಕ ಸಭೆ ಸೇರಿದ್ದ ನೂತನ ಶಾಸಕರು, ಪಕ್ಷದ ನಾಯಕರಾಗಿ ಸರ್ಬಾನಂದ ಸೋನೋವಾಲ್ ಅವರ ಆಯ್ಕೆ ಕುರಿತು ಮಾತುಕತೆ ನಡೆಸಿದರು ಎಂದು ಪಕ್ಷದ ವಕ್ತಾರ ಹಿಮಂತ ಬಿಸ್ವಾಸ್‌ ಶರ್ಮ ಹೇಳಿದ್ದಾರೆ.

‘ಅಭೂತಪೂರ್ವ ಗೆಲುವು ಪಡೆದಿರುವ ಬಿಜೆಪಿ ಶಾಸಕಾಂಗ ಪಕ್ಷದ ಪ್ರಥಮ ಸಭೆಯನ್ನು ಮೇ 22ರಂದು ನಡೆಸಲಿದ್ದು, ಅಂದು ನಾಯಕರನ್ನಾಗಿ ಸರ್ಬಾನಂದ ಸೋನೋವಾಲ್ ಅವರನ್ನು ಆಯ್ಕೆ ಮಾಡಲಿದೆ ಎಂದು ಶರ್ಮ ತಿಳಿಸಿದರು.

ಮೇ 24ರಂದು ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ನೂತನ ಸರ್ಕಾರ ರಚನೆಯಾಗಲಿದೆ. ಬಿಜೆಪಿ ಅಧ್ಯಕ್ಷ ಅಮಿತ್ ಷಾ ಹಾಗೂ ಬಿಜೆಪಿಯ ಹಿರಿಯ ನಾಯಕರು ಸೇರಿದಂತೆ ಎನ್‌ಡಿಎ ಸರ್ಕಾರದ ಎಲ್ಲಾ ಕೇಂದ್ರ ಸಚಿವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ಅವರು ಮಾಹಿತಿ ನೀಡಿದರು.

ಪ್ರಸ್ತುತ ಕೇಂದ್ರ ಸರ್ಕಾರದ ಕ್ರೀಡಾ ಸಚಿವರಾಗಿರುವ ಸರ್ಬಾನಂದ ಸೋನೋವಾಲ್ ಅವರು, ಇಂದು ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಷಾ ಅವರನ್ನು ಭೇಟಿ ಮಾಡಿ ಚುನಾವಣೆ ಫಲಿತಾಂಶ ಹಾಗೂ ನೂತನ ಸರ್ಕಾರ ರಚನೆ ಸಂಬಂಧ ಮಾತುಕತೆ ನಡೆಸಲಿದ್ದಾರೆ.

Comments are closed.