ಅಂತರಾಷ್ಟ್ರೀಯ

ಶ್ರೀಲಂಕಾ: ಪ್ರವಾಹ, ಭೂಕುಸಿತಕ್ಕೆ 63 ಬಲಿ, 134 ಜನ ಕಾಣೆ

Pinterest LinkedIn Tumblr

h9r7refqಕೊಲಂಬೊ(ಪಿಟಿಐ): ಧ್ವೀಪ ರಾಷ್ಟ್ರ ಶ್ರೀಲಂಕಾದಲ್ಲಿ ಮಳೆ ಮುಂದುವರಿದಿದ್ದು, ಪ್ರವಾಹ ಹಾಗೂ ಭೂಕುಸಿತದಿಂದಾಗಿ ಶುಕ್ರವಾರದವರೆಗೆ 63 ಜನ ಸಾವಿಗೀಡಾಗಿದ್ದು, 134 ಮಂದಿ ಕಾಣೆಯಾಗಿದ್ದಾರೆ. ಎರಡು ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ.

ರಕ್ಷಣಾ ಕಾರ್ಯಚಾರಣೆ ನಡೆಯುತ್ತಿದ್ದು, ಮೂರು ಲಕ್ಷ ಜನರಿಗೆ ತಾತ್ಕಾಲಿಕ ವಸತಿ ಶಿಬಿರ ಕಲ್ಪಿಸಲಾಗಿದೆ. ಸೇನಾ ಸಿಬ್ಬಂದಿ ಎರಡು ಲಕ್ಷ ಜನರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಿದ್ದಾರೆ. ಬಿರುಗಾಳಿ, ಮಳೆ ಹಾಗೂ ಭೂಕುಸಿತದಿಂದ 350 ಮನೆಗಳು ನಾಶವಾಗಿವೆ ಎಂದು ವಿಪತ್ತು ನಿರ್ವಹಣ ಅಧಿಕಾರಿಗಳು ತಿಳಿಸಿದ್ದಾರೆ.

ಮೂರು ದಿನಗಳಿಂದ ಧಾರಾಕಾರ ಮಳೆ ಸುರಿದಿದ್ದು, ಕಿಲಿನೊಚ್ಚಿ ಜಿಲ್ಲೆಯಲ್ಲಿ ಅತಿ ಹೆಚ್ಚು 373.2 ಮಿ.ಮೀ. ದಾಖಲಾಗಿದೆ.

ಶ್ರೀಲಂಕಾ ಕ್ರಿಕೆಟ್‌ ತಂಡ ನೆರೆ ಸಂತ್ರಸ್ತರಿಗೆ ₹ 4.62 ಲಕ್ಷ ನೆರವು ನೀಡಿದೆ. ಸಂತ್ರಸ್ತರ ನೆರವಿಗೆ ಮುಂದಾಗಿರುವ ಭಾರತ, ಪರಿಹಾರ ಸಾಮಗ್ರಿ ಹೊತ್ತ ಹಡಗನ್ನು ಶ್ರೀಲಂಕಾಕ್ಕೆ ಕಳುಹಿಸಿದೆ.

Comments are closed.