ರಾಷ್ಟ್ರೀಯ

ಶಾಸಕಾಂಗ ಪಕ್ಷದ ನಾಯಕಿಯಾಗಿ ಮಮತಾ ಅವಿರೋಧ ಆಯ್ಕೆ

Pinterest LinkedIn Tumblr

mama

ಕೋಲ್ಕತ್ತ(ಪಿಟಿಐ): ಮಮತಾ ಬ್ಯಾನರ್ಜಿ ಅವರು ತೃಣಮೂಲ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕಿಯಾಗಿ ಶುಕ್ರವಾರ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇಲ್ಲಿ ನಡೆದ ಪಕ್ಷದ ಸಭೆಯಲ್ಲಿ ಬೆಹಲ ಪಶ್ಚಿಮ ಕ್ಷೇತ್ರದಿಂದ ಪುನರ್‌ ಆಯ್ಕೆಯಾಗಿರುವ ಟಿಎಂಸಿಯ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು, ಶಾಸಕಾಂಗ ಪಕ್ಷದ ನಾಯಕತ್ವ ಸ್ಥಾನಕ್ಕೆ ಮಮತಾ ಅವರ‌ ಹೆಸರನ್ನು ಸೂಚಿಸಿದರು. ಎಲ್ಲ ಶಾಸಕರು ಮಮತಾ ಅವರ ಹೆಸರನ್ನು ಅನುಮೋದಿಸಿ, ಅವಿರೋಧವಾಗಿ ಆಯ್ಕೆ ಮಾಡಿದರು.

ಬಳಿಕ ರಾಜಭವನಕ್ಕೆ ತೆರಳಿದ ಮಮತಾ ಅವರು, ರಾಜ್ಯಪಾಲರನ್ನು ಭೇಟಿ ಮಾಡಿ, ನೂತನ ಸರ್ಕಾರ ರಚೆನಗೆ ಹಕ್ಕು ಪ್ರತಿಪಾದಿಸಿದರು.

Comments are closed.