ಮನೋರಂಜನೆ

ಯೂ ಟರ್ನ್ ರೀಮೇಕ್‌ ಮಾಡ್ತಿದಾರೆ ಸಮಂತಾ

Pinterest LinkedIn Tumblr

sama“ಲೂಸಿಯಾ’ ಪವನ್‌ ಸಿನಿಮಾ ಮಾಡಿದ್ರೆ ಏನೋ ವಿಶೇಷ ಇದ್ದೇ ಇರತ್ತೆ ಅನ್ನೋ ಒಪೀನಿಯನ್ನು ಸಿನಿಮಾ ಪ್ರೇಮಿಗಳಲ್ಲಿದೆ. ಹಾಗಾಗಿ ಇದೇ ಶುಕ್ರವಾರ ಬಿಡುಗಡೆಯಾಗಲಿರುವ ಪವನ್‌ರ ಹೊಸ ಚಿತ್ರ “ಯೂಟರ್ನ್’ ಬಗ್ಗೆ ನಿರೀಕ್ಷೆ ಹುಟ್ಟಿಕೊಂಡಿದೆ. ಈ ಸಿನಿಮಾ ಕುರಿತಾದ ಎರಡು ಇಂಟರೆಸ್ಟಿಂಗ್‌ ಸುದ್ದಿ ಇಲ್ಲಿದೆ.

1 ಸಮಂತಾ ರಿಮೇಕ್‌ ಮಾಡ್ತಿದಾರೆ
ಸಾಮಾನ್ಯವಾಗಿ ಯಾವುದೇ ಭಾಷೆಯ ಸಿನಿಮಾ ಬಿಡುಗಡೆಯಾಗಿ ಆ ಸಿನಿಮಾ ಬಾಕ್ಸ್‌ಆಫೀಸ್‌ ಕೊಳ್ಳೆ ಹೊಡೆದರೆ ಬೇರೆ ಭಾಷೆಯ ಜನ ಆ ಸಿನಿಮಾವನ್ನು ನೋಡಿ ನಿರ್ಮಾಪಕರು ಅಥವಾ ನಿರ್ದೇಶಕರು ರೀಮೇಕ್‌ ರೈಟ್ಸ್‌ ಖರೀದಿಸುತ್ತಾರೆ. ಆದರೆ ಪವನ್‌ ಸಿನಿಮಾ ವಿಷ್ಯದಲ್ಲಿ ಅದು ಉಲ್ಟಾ ಆಗಿದೆ. ತೆಲುಗಿನ ಖ್ಯಾತ ನಟಿ ಸಮಂತಾ ಈ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಷ್ಟೇ ಅಲ್ಲ, ಈ ಸಿನಿಮಾವನ್ನು ರಿಮೇಕ್‌ ಮಾಡಲು ಪ್ಲಾನ್‌ ಹಾಕಿಕೊಂಡಿದ್ದಾರೆ. ತೆಲುಗು ಮತ್ತು ತಮಿಳು ಎರಡು ಭಾಷೆಗೆ ಈ ಸಿನಿಮಾ ರಿಮೇಕ್‌ ಆಗಲಿದೆ. ಕೇವಲ ಸಿನಿಮಾ ನೋಡಿ, ಕತೆ ಮೇಲೆ ನಂಬಿಕೆ ಇಟ್ಟು ರಿಮೇಕ್‌ ಹಕ್ಕು ತೆಗೆದುಕೊಂಡಿರುವುದು ವಿಶೇಷವೇ. ಸಮಂತಾಳೇ ಈ ಸಿನಿಮಾ ನಿರ್ಮಿಸುತ್ತಾರೆ ಅನ್ನೋ ಸುದ್ದಿ ಹರಿದಾಡುತ್ತಿದ್ದರೂ ಪವನ್‌ ಮಾತ್ರ ಇನ್ನೂ ಫೈನಲ್‌ ಆಗಿಲ್ಲ ಅನ್ನುತ್ತಾರೆ. ಎಲ್ಲಾ ಅಂದುಕೊಂಡಂತೆ ಆದರೆ ತಮಿಳು, ತೆಲುಗು ಭಾಷೆಯ ಸಿನಿಮಾವನ್ನೂ ಪವನ್‌ ಕುಮಾರ್‌ ಅವರೇ ನಿರ್ದೇಶಿಸಬಹುದು.

2 ಹೊಸ ಥರ ಪಬ್ಲಿಸಿಟಿ
ಪವನ್‌ ಏನಾದರೂ ಹೊಸ ಹೊಸ ಐಡಿಯಾ ಮಾಡುತ್ತಾ ಇರುತ್ತಾರೆ. ಅದಕ್ಕೆ ಇನ್ನೊಂದು ಸೇರ್ಪಡೆ ಯೂ ಟರ್ನ್ ಟೀ ಷರ್ಟು. ಈಗೀಗ ಸಿನಿಮಾ ಹೆಸರಿನ ಟೀಷರ್ಟು ಸಿದ್ಧಗೊಳಿಸುವುದು ಸಾಮಾನ್ಯ. ಆದರೆ ಪವನ್‌ಕುಮಾರ್‌ ಒಂದು ಹೆಜ್ಜೆ ಮುಂದೆ ಹೋಗಿದ್ದಾರೆ. ಯೂಟರ್ನ್ ಟೀಷರ್ಟು ಖರೀದಿಸಿದರೆ ಪ್ರೀಮಿಯರ್‌ ಶೋಗೆ ಪಾಸ್‌ ಸಿಗುತ್ತದೆ. ಯುನೈಟೆಡ್‌ ಸ್ಕ್ವೇರ್ಸ್‌ ವೆಬ್‌ಸೈಟ್‌ನಲ್ಲಿ(http://www.unitedsquares.in/uturn-movie) ಟೀಷಟ್‌ ìಗೆ ಆರ್ಡರ್‌ ಮಾಡಿ ಅದರ ಇನ್‌ವಾಯ್ಸ ಪ್ರಿಂಟ್‌ಔಟ್‌ ಅನ್ನು ಥಿಯೇಟರ್‌ಗೆ ತಂದರೆ ಪ್ರೀಮಿಯರ್‌ ಶೋ ಪಾಸ್‌ ಸಿಗುತ್ತದೆ. ಅಂದಹಾಗೆ ಮೆಜೆಸ್ಟಿಕ್‌ ಭೂಮಿಕಾ ಥಿಯೇಟರ್‌ನಲ್ಲಿ ಮೇ19 (ಇಂದು) ಸಂಜೆ 7ಕ್ಕೆ ಪ್ರೀಮಿಯರ್‌ ಶೋ. ಬಾಲ್ಕನಿ ಪಾಸ್‌ ಬೇಕಾದರೆ ರೂ.250 ಬೆಲೆಯ ನೇವಿ ಬ್ಲೂ ಷರ್ಟ್‌. ಸೆಕೆಂಡ್‌ ಕ್ಲಾಸ್‌ ಪಾಸ್‌ಗೆ ರೂ.150 ಬೆಲೆಯ ಗ್ರೇ ಟೀಷರ್ಟ್‌. ಅಭಿಮಾನಿಗಳಿಗೆ ಪಾಸ್‌ ಸಿಕ್ಕಿದಂತೆಯೂ ಆಯ್ತು, ಟೀಷರ್ಟ್‌ ಮೂಲಕ “ಯೂಟರ್ನ್’ ಜನರಿಗೆ ತಲುಪಿದಂತೆಯೂ ಆಯ್ತು.
-ಉದಯವಾಣಿ

Comments are closed.