ಮನೋರಂಜನೆ

3 ದಿನಗಳ ಕಾಲ ಕಾಸರವಳ್ಳಿ ಚಿತ್ರೋತ್ಸವ

Pinterest LinkedIn Tumblr

kasaraಈಗಾಗಲೇ ಹಲವು ಬಾರಿ ರಾಜ್ಯ ಸರ್ಕಾರ ಹಾಗು ಸಾಕಷ್ಟು ಸಂಘ, ಸಂಸ್ಥೆಗಳು ರಾಷ್ಟ್ರಪ್ರಶಸ್ತಿ ಪುರಸ್ಕೃತ ಹಿರಿಯ ನಿರ್ದೇಶಕ ಗಿರೀಶ್‌ ಕಾಸರವಳ್ಳಿ ಅವರ ಚಿತ್ರೋತ್ಸವಗಳನ್ನು ಆಯೋಜಿಸಿವೆ. ಹಲವು ಸಂಘಟನೆಗಳು ಕಾಸರವಳ್ಳಿ ಅವರು ನಿರ್ದೇಶಿಸಿರುವ ಅಪರೂಪದ ಚಿತ್ರಗಳನ್ನು ಪ್ರದರ್ಶಿಸಿವೆ.ಈಗ ಅವುಗಳ ಸಾಲಿಗೆ ಮತ್ತೂಂದು ಗಿರೀಶ್‌ ಕಾಸರವಳ್ಳಿ ಚಿತ್ರೋತ್ಸವ ಸೇರ್ಪಡೆಯಾಗಿದೆ.

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯ ಬೆಂಗಳೂರಿನ ರಾಷ್ಟ್ರೀಯ ಆಧುನಿಕ ಕಲಾ ಸಂಗ್ರಹಾಲಯದಿಂದ ಈ ಚಿತ್ರೋತ್ಸವನ್ನು ಏರ್ಪಡಿಸಿದೆ. ಬೆಂಗಳೂರಿನ ಅರಮನೆ ರಸ್ತೆಯಲ್ಲಿರುವ ರಾಷ್ಟ್ರೀಯ ಆಧುನಿಕ ಸಂಗ್ರಹಾಲಯದ ಸಭಾಂಗಣದಲ್ಲಿ ಈ ಚಿತ್ರೋತ್ಸವ ನಡೆಯಲಿದೆ.

2016 ರ ಮೇ 20, 21 ಹಾಗು 22 ರ ಮೂರುದಿನಗಳ ಕಾಲ ಗಿರೀಶ್‌ ಕಾಸರವಳ್ಳಿ ಚಿತ್ರೋತ್ಸವ ನಡೆಯಲಿದ್ದು, ಮೇ 20 ರಂದು ಸಂಜೆ 5.30 ಕ್ಕೆ “ಲೈಫ್ ಇನ್‌ಮೆಟಫೋರ್ಸ್‌-ಎ ಪೋರ್ಟ್‌ರೈಟ್‌ ಆಫ್ ಗಿರೀಶ್‌ ಕಾಸರವಳ್ಳಿ’ ಪ್ರದರ್ಶನವಾಗಲಿದೆ. ಮೇ 21 ರ ಶನಿವಾರ ಬೆಳಗ್ಗೆ 10.30 ಕ್ಕೆ “ತಾಯಿ ಸಾಹೇಬ’, ಮಧ್ಯಾಹ್ನ 2 ಗಂಟೆಗೆ “ಘಟಶ್ರಾದ್ಧ’ ಮತ್ತು ಸಂಜೆ 5 ಗಂಟೆಗೆ “ದ್ವೀಪ’ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

22 ರಂದು ಬೆಳಗ್ಗೆ 10.30 ಕ್ಕೆ “ಕೂರ್ಮಾವತಾರ’, ಮಧ್ಯಾಹ್ನ 2 ಗಂಟೆಗೆ “ಕನಸೆಂಬೋ ಕುದುರೆಯನೇರಿ’ ಹಾಗು ಸಂಜೆ 5 ಗಂಟೆಗೆ “ಗುಲಾಬಿ ಟಾಕೀಸ್‌’ ಚಿತ್ರಗಳನ್ನು ಪ್ರದರ್ಶನ ಮಾಡಲಾಗುತ್ತದೆ. ಈ ಚಿತ್ರೋತ್ಸವದಲ್ಲಿ ಪ್ರದರ್ಶಗೊಳ್ಳುವ ಚಿತ್ರಗಳ ಬಳಿಕ ನಿರ್ದೇಸಕ ಗಿರೀಶ್‌ಕಾಸರವಳ್ಳಿ ಅವರೊಂದಿಗೆ ಪ್ರಕಾಶ್‌ಬೆಳವಾಡಿ ಅವರು ಸಂವಾದ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.
-ಉದಯವಾಣಿ

Comments are closed.