ಮನೋರಂಜನೆ

ಅಣಜಿ ನಾಗರಾಜ್‌ ಕೈಗೆ ಬಂದ ಚಕ್ರವರ್ತಿ

Pinterest LinkedIn Tumblr

Darshan-(96)ಕಳೆದ ಕೆಲವು ವರ್ಷಗಳಿಂದ ಚಿತ್ರ ನಿರ್ಮಾಣದಿಂದ ದೂರವೇ ಉಳಿದಿದ್ದ ನಿರ್ಮಾಪಕ ಅಣಜಿ ನಾಗರಾಜ್‌, ಈಗ ಮತ್ತೆ ನಿರ್ಮಾಣಕ್ಕೆ ಕೈ ಹಾಕಿದ್ದಾರೆ. ಅವರು ದರ್ಶನ್‌ ಅಭಿನಯದ ಚಿತ್ರವೊಂದನ್ನು ನಿರ್ಮಿಸುತ್ತಿದ್ದಾರೆ. ಅವರು ನಿರ್ಮಿಸುತ್ತಿದ್ದಾರೆ ಎನ್ನುವುದಕ್ಕಿಂತ, ಇನ್ನಾéರೋ ಮಾಡಬೇಕಿದ್ದ ಸಿನಿಮಾವನ್ನು ನಿರ್ಮಿಸುವ ಅವಕಾಶ ಅವರಿಗೆ ಬಂದಿದೆ ಎಂದರೆ ಅದು ಹೆಚ್ಚು ಸೂಕ್ತ.

ಹಾಗೆ ಅಣಜಿ ಕೈ ಸೇರಿರುವ ಸಿನಿಮಾದ ಹೆಸರು ಚಕ್ರತೀರ್ಥ’. ಈ ಚಿತ್ರವನ್ನು “ಸಾರಥಿ’ ಮಾಡಿದ್ದ ಸತ್ಯಪ್ರಕಾಶ್‌ ಮೊದಲಿಗೆ ನಿರ್ಮಿಸಬೇಕಿತ್ತು. ಆದರೆ, ಕಾರಣಾಂತರಗಳಿಂದ ಈಗ ಅವರು ಅದನ್ನು ಬಿಟ್ಟುಕೊಟ್ಟಿದ್ದಾರಂತೆ. ಅವರಿಗಿದ್ದ ಕಾಲ್‌ಶೀಟ್‌, ಈಗ ಅಣಜಿ ನಾಗರಾಜ್‌ಗೆ ಬಂದಿದೆ. ಬರೀ ನಿರ್ಮಾಪಕರು ಬದಲಾಗಿರುವುದು ಬಿಟ್ಟರೆ, ಮಿಕ್ಕಂತೆ ಚಿತ್ರದಲ್ಲಿ ಯಾವುದೇ ತರಹದ ಬದಲಾವಣೆಗಳಾಗಿಲ್ಲ.

ಹೀರೋ ಆಗಿ ದರ್ಶನ್‌ ನಟಿಸುತ್ತಿದ್ದರೆ, ಅವರಿಗೆ ನಾಯಕಿಯಾಗಿ ಅಂಜಲಿ ನಟಿಸುತ್ತಿದ್ದಾರೆ. ಇನ್ನು ಆದಿತ್ಯ ಸಹ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂಬ ಸುದ್ದಿ ಇದೆ. ಇದಕ್ಕೂ ಮೊದಲು ದರ್ಶನ್‌ ಮತ್ತು ಆದಿತ್ಯ ಇಬ್ಬರೂ, “ಅರಸು’ ಮತ್ತು “ಸ್ನೇಹಾನಾ ಪ್ರೀತೀನಾ’ ಚಿತ್ರಗಳಲ್ಲಿ ನಟಿಸಿದ್ದರು. ಇದೀಗ ಮೂರನೆಯ ಬಾರಿಗೆ ಈ ಚಿತ್ರದಲ್ಲಿ ಇಬ್ಬರೂ ಒಟ್ಟಾಗಿ ಕೆಲಸ ಮಾಡುತ್ತಿದ್ದಾರೆ. ಮೇ 24ರಂದು ಪ್ರಾರಂಭವಾಗಲಿರುವ ಈ ಚಿತ್ರಕ್ಕೆ ಅರ್ಜುನ್‌ ಜನ್ಯ ಅವರ ಸಂಗೀತ ನಿರ್ದೇಶನವಿದೆ.
-ಉದಯವಾಣಿ

Write A Comment