ಕರ್ನಾಟಕ

ವೇಶ್ಯಾವಾಟಿಕೆ ನಡೆಸುತ್ತಿದ್ದ ಐವರ ಬಂಧನ

Pinterest LinkedIn Tumblr

veshaಬೆಂಗಳೂರು, ಮೇ 11- ವಿದೇಶಿ ಮಹಿಳೆಯನ್ನು ಮನೆಯಲ್ಲಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸಿ ಅಕ್ರಮ ಹಣ ಸಂಪಾದಿಸುತ್ತಿದ್ದ ಐದು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಮೂಲತಃ ಪಶ್ಚಿಮ ಬಂಗಾಳದ ಸುಮನ್ ಸಹಾ, ಪರಿಮಲ್ ಪಾಲ್, ಮಂಡ್ಯದ ನಂದೀಶ್, ಬೆಂಗಳೂರಿನ ಗಿರೀಶ್ ಮತ್ತು ದಿನುಕುಮಾರ್ ಬಂಧಿತ ಆರೋಪಿಗಳಾಗಿದ್ದು, ಇವರಿಂದ 8 ಮೊಬೈಲ್, 5 ಸಾವಿರ ರೂ. ಹಣ, ಗುಲ್ನೋಜ್ ಸುಬಿರೋವಾ ಕಡೆಯಿಂದ ಜೆಟ್ ಏರ್‌ವೇಸ್ ಬೋರ್ಡಿಂಗ್ ಪಾಸ್‌ಅನ್ನು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಂದ ಉಜ್ಬೇಕಿಸ್ಥಾನದ ಮಹಿಳೆಯನ್ನು ಬಂಧಿಸಿದ್ದಾರೆ. ಈಕೆಯನ್ನು ವಿಚಾರಣೆಗೊಳಪಡಿಸಿದಾಗ ತನ್ನ ಬಳಿ ನನ್ನ ದೇಶದ ಪಾಸ್‌ಪೋರ್ಟ್ ಮತ್ತು ಭಾರತದ ವೀಸಾ ಹೊಂದಿರುವ ಬಗ್ಗೆ ಅವುಗಳನ್ನು ಹಾಜರುಪಡಿಸುವಲ್ಲಿ ವಿಫಲಳಾಗಿದ್ದಾಳೆ. ಈಕೆ ವಿರುದ್ಧ ಪಾಸ್‌ಪೋರ್ಟ್ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜೆಸಿ ನಗರ ವ್ಯಾಪ್ತಿಯ ನಂದಿದುರ್ಗ ರಸ್ತೆಯ ಮನೆಯೊಂದರಲ್ಲಿ ಹುಡುಗಿಯರನ್ನಿಟ್ಟುಕೊಂಡು ವೇಶ್ಯಾವಾಟಿಕೆ ನಡೆಸುತ್ತಿದ್ದಾರೆಂಬ ಮಾಹಿತಿ ಮೇರೆಗೆ ಮನೆ ಮೇಲೆ ದಾಳಿ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ಏಳು ಮಂದಿ ಸೆರೆ: ಮಸಾಜ್ ಪಾರ್ಲರ್ ಹೆಸರಿನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಏಳು ಮಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿ 18,100ರೂ. ಹಣ, 9 ಮೊಬೈಲ್ ವಶಪಡಿಸಿಕೊಂಡಿದ್ದಾರೆ. ಸಂದೀಪ್, ಹರೀಶ್, ಶ್ಯಾಮ್, ಸಂತೋಷ್, ನವೀನ್, ಪ್ರವೇಶ್ ಚಟ್ರಿ, ಸಯ್ಯದ್ ಮಹಮ್ಮದ್ ಬಂಧಿತ ಆರೋಪಿಗಳಾಗಿದ್ದು, ಇವರ ವಿರುದ್ಧ ಕಮರ್ಷಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ನಾಲ್ಕು ಮಂದಿ ಪಶ್ಚಿಮ ಬಂಗಾಳದ ಮಹಿಳೆಯರನ್ನು ರಕ್ಷಿಸಲಾಗಿದೆ. ಕಮರ್ಷಿಯಲ್ ಸ್ಟ್ರೀಟ್ ವ್ಯಾಪ್ತಿಯ ವೀರಪಿಳೈ ಸ್ಟ್ರೀಟ್‌ನಲ್ಲಿರುವ ಮಸಾಜ್ ಪಾರ್ಲರ್‌ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಈ ದಾಳಿ ನಡೆಸಿದ್ದರು.

Write A Comment