ಕರ್ನಾಟಕ

ನೀರಿನ ಕೊರತೆ ಯಿಂದ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆಯಲ್ಲಿ ಕುಸಿತ

Pinterest LinkedIn Tumblr

shivaಮಳವಳ್ಳ, ಮೇ 11- ಬರದ ಹಿನ್ನೆಲೆಯಲ್ಲಿ ನೀರಿನ ಕೊರತೆ ಬಹುವಾಗಿ ಕಾಡಿ ಇತಿಹಾಸ ಪ್ರಸಿದ್ಧ ಶಿವನಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಕ್ರಮೇಣ ಕುಸಿದಿದೆ. ನಿಗದಿಯಂತೆ ಉತ್ಪಾದನೆಯಾಗುವ ವಿದ್ಯುತ್‌ನಲ್ಲಿ ಶೇ.98ರಷ್ಟು ಕುಸಿದಿದೆ ಎಂದು ತಿಳಿದು ಬಂದಿದೆ. 42 ಮೆಗಾವ್ಯಾಟ್ ಸಾಮರ್ಥ್ಯದ ಶ್ರೀ ಕೆ.ಶೇಷಾದ್ರಿ ಅಯ್ಯರ್ ವಿದ್ಯುತ್ ಕೇಂದ್ರ 1902ರಲ್ಲಿ ಕಾರ್ಯಾರಂಭ ಮಾಡುವ ಮೂಲಕ ಏಷ್ಯಾದ ಮೊಟ್ಟ ಮೊದಲ ಜಲವಿದ್ಯುತ್ ಉತ್ಪಾದನಾ ಕೇಂದ್ರ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು.

ಈ 12 ಘಟಕಗಳಲ್ಲಿ 11 ಘಟಕಗಳು ಇತ್ತೀಚೆಗೆ ಕಾರ್ಯ ಸ್ಥಗಿತಗೊಳಿಸುವೆ. ಕೇವಲ ಒಂದೇ ಒಂದು ಘಟಕ ಮಾತ್ರವೇ ನೀರಿನ ಲಭ್ಯತೆ ಅಧರಿಸಿ ಕಾರ್ಯ ನಿರ್ವಹಿಸುತ್ತಿದೆ ಎನ್ನುತ್ತಾರೆ ನಿಗಮದ ಅಧಿಕಾರಿಗಳು. ವಿದ್ಯುತ್ ಉತ್ಪಾದನಾ ಕೇಂದ್ರಗಳು ಕಾವೇರಿ ನೀರನ್ನೇ ಅವಲಂಬಿಸಿದೆ. ಆದರೆ ಕೆಆರ್‌ಎಸ್‌ನಲ್ಲಿ ನೀರಿನ ಮಟ್ಟ 80 ಅಡಿಗೆ ಕುಸಿದಿರುವದರಿಂದ ಹೊರ ಹರಿವನ್ನು ಗಮನಾರ್ಹ ಪ್ರಮಾಣದಲ್ಲಿ ಇಳಿಸಲಾಗಿದೆ. ಇದರ ಪರಿಣಾಮ ಕಾವೇರಿ ಸೊರಗಿದ್ದುದರಿಂದ ಎಲ್ಲಾ ಹನ್ನೊಂದು ಘಟಕಗಳನ್ನು ಸ್ಥಗಿತಗೊಳಿಸಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನಿತ್ಯ 1.5 ಮಿಲಿಯನ್ ಯೂನಿಟ್ಸ್ ನಿಂದ 3 ಮಿಲಿಯನ್ ಯೂನಿಟ್ಸ್‌ವರೆಗೆ ಉತ್ಪಾದಿಸುತ್ತಿದ್ದ ಈಘಟಕಗಳು ಇದೀಗ ಕೇವರ 20.640 ಯೂನಿಟ್ಸ್‌ನಷ್ಟೇ ಉತ್ಪಾದಿಸುತ್ತಿವೆ ಇದೇ ರೀತಿಯ ಪರಿಸ್ಥಿತಿ ಕಳೆದ ವರ್ಷವೂ ಉದ್ಬವಿಸಿತ್ತು. ಆಗ ಶೇಷಾದ್ರಿ ಅಯ್ಯರ್ ಕೇಂದ್ರವು 215 ಮಿಲಿಯನ್ ಯೂನಿಟ್ಸ್ ವಿದ್ಯುತ್ ಉತ್ಪಾದಿಸಿದ್ದರೆ ಶಿವಪುರ 55 ಮಿಲಿಯನ್ ಯೂನಿಟ್ಸ್ ವಿದ್ಯುತ್ ಉತ್ಪಾದಿಸಿತ್ತು ಸದ್ಯದ ಪರಿಣಾಮ ಕೆಆರ್‌ಎಸ್ ನ ಹೊರ ಹರಿವು 350 ಕ್ಯೂಸೆಕ್‌ನಷ್ಟಿದೆ. ಇದರಿಂದಲೇ ಬೆಂಗಳೂರಿಗೆ ಕುಡಿಯುವ ನೀರುನ್ನು ನೀಡಬೇಕು. ಆದ ಕಾರಣ ಮೈಸೂರು ಜಿಲ್ಲೆಯ ಕಬಿನಿ ಮೂಲಕ ಹರಿಸಲಾಗುತ್ತಿದೆ.

ಪರಿಣಾಮದಿಂದ ಘಟಕಗಳು ಕಾರ್ಯ ಸ್ಥಗಿತಗೊಳಿಸುವೆ. ಇದೇ ಪರಿಸ್ಥಿತಿ ಮತ್ತೊಂದಿಷ್ಟು ವಾರಗಳ ಕಾಲ ಮುಂದುವರೆಯಲಿದೆ. ಅಲ್ಲದೆ ಮಳೆ ಕೈಕೊಡುತ್ತಿರುವ ಕಾರಣ ಮುಂದಿನ ಎರಡು ತಿಂಗಳು ಈ ಎರಡು ಕೇಂದ್ರಗಳ ಹನ್ನೆರಡೂ ಘಟಕಗಳು ಸ್ಥಗಿತಗೊಂಡರೂ ಆಶ್ಚರ್ಯವಿಲ್ಲ. ಸಾಮಾನ್ಯವಾಗಿ ಬೇಸಿಗೆ ಕಾಲದಲ್ಲಿ ವಿದ್ಯುತ್ ಉತ್ಪಾದನೆ ಕುಂಠಿತವಾಗುತ್ತದೆ ಯಾದರೂ ಸ್ವಲ್ಪ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದನೆ ಮಾಡಲಾಗುತ್ತದೆ.

ಆದರೆ ಈ ಭಾರಿ ಮಾತ್ರ ಸಂಪೂರ್ಣ ಸ್ಥಗಿಗೊಳಿಸುವ ಹಂತಕ್ಕೆ ಬಂದಿದೆ. ಬೆಂಗಳೂರು ಮತ್ತಿತರ ಕಡೆಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಹೆಚ್ಚಿನ ಪ್ರಮಾಣದಲ್ಲಿ ಜಲಾಶಯದಿಂದ ನೀರು ಹರಿಯ ಬಿಟ್ಟರೆ ಮಾತ್ರ ಆ ನೀರನ್ನು ಬಳಕೆ ಮಾಡಿಕೊಂಡು ವಿದ್ಯುತ್ ಉತ್ಪಾದನೆ ಮಾಡಬಹುದು. ಒಂದು ವೇಳೆ ಕಡಿಮೆ ಪ್ರಮಾಣದಲ್ಲಿ ನೀರು ಹರಿಸಿದಲ್ಲಿ ಯಾವುದೇ ಕಾರಣಕ್ಕೂ ಅದನ್ನು ಬಳಕೆ ಮಾಡಲು ಸಾಧ್ಯವಾಗುವುದಿಲ್ಲ ಎಂಬುದು ಇಲ್ಲಿಯೇ ಅಧಿಕಾರಿಗಳ ಮಾತಾಗಿದೆ.

Write A Comment