ಮನೋರಂಜನೆ

ಯಶೋಮಾರ್ಗದಲ್ಲಿ ನೀವೂ ನೆರವಾಗಬಹುದು ಅಂತಾರೆ ಯಶ್‌

Pinterest LinkedIn Tumblr

yashಬರಪಡೀತ ಪ್ರದೇಶಗಳಿಗೆ ನೀರು ಕೊಡುವ ಯೋಜನೆ ಕೇವಲ ಆರಂಭಶೂರತ್ವ ಅಲ್ಲ ಎಂಬುದನ್ನು ಯಶ್‌ ತೋರಿಸಿಕೊಟ್ಟಿದ್ದಾರೆ. ಅವರೇ ಹೇಳಿದಂತೆ, ಎರಡನೆಯ ಸುತ್ತಿನಲ್ಲಿ ಗದಗದ 15 ಹಳ್ಳಿಗಳಿಗೆ ನೀರು ಸರಬರಾಜು ಮಾಡಲು ಆರಂಭಿಸಿದ್ದಾರೆ. ಅದರ ಬೆನ್ನಿಗೇ ರಾಯಚೂರು ಮತ್ತು ಬೆಳಗಾವಿಯ ಹಳ್ಳಿಗಳತ್ತ ಹೆಜ್ಜೆ ಇಟ್ಟಿದ್ದಾರೆ.

ಮೂರನೇ ಹಂತದಲ್ಲಿ ಬೀದರ್‌, ಯಾದಗಿರಿ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆ ಗಳಿಗೆ ಈ ಜಲಸರಬರಾಜು ಯೋಜನೆಯನ್ನು ವಿಸ್ತರಿಸುವ ಯೋಚನೆಯಲ್ಲಿದ್ದಾರೆ. “ಇದೆಲ್ಲ ನನ್ನೊಬ್ಬನಿಂದ ಆದ ಕೆಲಸ ಅಂತ ಹೇಳುತ್ತಿಲ್ಲ. ನನ್ನ ಜೊತೆ ಅಭಿಮಾನಿಗಳಿದ್ದಾರೆ. ತರುಣರು, ಸ್ಥಳೀಯ ಸಂಸ್ಥೆಗಳ ಪದಾಧಿಕಾರಿಗಳು, ಊರ ಮುಖಂಡರು ಇದ್ದಾರೆ. ಅವರೆಲ್ಲ ಹಗಲಿರುಳು ಶ್ರಮಿಸಿದ್ದಾರೆ. ಅವರೆಲ್ಲರಿಗೂ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ನಿಸ್ವಾರ್ಥ ಸೇವೆ ಮಾಡುವವರು ಸಾಕಷ್ಟು ಮಂದಿ ಇದ್ದಾರೆ ಅನ್ನುವುದನ್ನು ಅವರೆಲ್ಲ ತೋರಿಸಿಕೊಟ್ಟಿದ್ದಾರೆ’

ಎನ್ನುತ್ತಾರೆ ಯಶ್‌. ನಿಮ್ಮ ಅಕ್ಕರೆಗೆ ಶರಣು ಎಂದು ಆರಂಭವಾಗುವ ಪತ್ರದಲ್ಲಿ ಅವರು ಹೀಗೆ ಹೇಳಿಕೊಂಡಿದ್ದಾರೆ:

ನಾವು ಆರಂಭಿಸಿದ ಯೋಜನೆ ಈ ಮಟ್ಟಕ್ಕೆ ವಿಸ್ತಾರಗೊಳ್ಳುತ್ತದೆ ಎಂಬ ಕಲ್ಪನೆ ನಮಗೆ ಇರಲಿಲ್ಲ.ಆದರೆ, ನಿಮ್ಮ ಸಹಕಾರ ಮತ್ತು ಉತ್ತೇಜನದಿಂದಾಗಿ ಇದು ಅನೇಕ ಜಿಲ್ಲೆ ಗಳಿಗೆ ಹಬ್ಬುವುದು ಸುಲಭವಾಯಿತು. ನಮ್ಮ ಶ್ರಮದ ಒಂದು ಸಣ್ಣ ಪಾಲನ್ನು ಕೊಟ್ಟಿದ್ದಕ್ಕೆ ಎರಡು ಜಿಲ್ಲೆ ಗಳ 50 ಹಳ್ಳಿಗಳಿಗೆ ಕುಡಿಯುವ ನೀರನ್ನು ಕೊಡುವುದು ಸಾಧ್ಯವಾಗಿದೆ ಎಂಬ ವಿಷಯವೇ ನಮ್ಮಲ್ಲಿ ಸಾರ್ಥಕ ಭಾವ ಮೂಡಿಸಿ ಯೋಜನೆಯನ್ನು ವಿಸ್ತರಿಸಲು ಚೈತನ್ಯ ಮೂಡಿಸಿದೆ. ನಿಮ್ಮ ಪೋ›ತ್ಸಾಹ ನಮಗೆ ಹುಮ್ಮಸ್ಸು ಮತ್ತು ಹೊಸ ಆತ್ಮವಿಶ್ವಾಸ ನೀಡಿದೆ.

ಇದೀಗ ಬೀದರ್‌, ಯಾದಗಿರಿ, ಕೊಪ್ಪಳ ಮತ್ತು ಬಾಗಲಕೋಟೆ ಜಿಲ್ಲೆಗೆ ವಿಸ್ತರಿಸಿಕೊಳ್ಳಲಿರುವ ನಮ್ಮ ಯೋಜನೆಗೆ ನಿಮ್ಮ ಸಹಕಾರ ಬೇಕು. ಈ ಜಿಲ್ಲೆಗಳ ಒಡನಾಟ ಉಳ್ಳವರು, ಪರಿಚಯ ಇರುವವರು, ಈ ಪ್ರದೇಶಗಳಲ್ಲಿ ಉತ್ತರ ಸಂಪರ್ಕ ಹೊಂದಿರುವವರು ನಮ್ಮ ಈ ಕಾರ್ಯದಲ್ಲಿ ಕೈ ಜೋಡಿಸುವ ಇಚ್ಛೆ ಇದ್ದಲ್ಲಿ ಯಶೋಮಾರ್ಗ ಅಂಥವರನ್ನು ಹೃತೂ$ರ್ವಕವಾಗಿ ಸ್ವಾಗತಿಸುತ್ತದೆ. ದಯವಿಟ್ಟು ಆಸಕ್ತರು ತಮ್ಮ ವಿವರಗಳನ್ನು ನೀಡಬೇಕೆಂದು ಕೋರಿಕೆ.
ನಿಮ್ಮಯಶ್‌

ಉತ್ತಮ ಜೀವನ ಎಲ್ಲರ ಹಕ್ಕು.
ಪರಿವರ್ತನೆ ನಮ್ಮೆಲ್ಲರ ಕರ್ತವ್ಯ.
-ಉದಯವಾಣಿ

Write A Comment