ಮನೋರಂಜನೆ

ರಹತ್ ಫತೆ ಅಲಿ ಖಾನ್ ಮತ್ತು ಜಾವೆದ್ ಅಲಿ ಖಾನ್ ಉತ್ತಮ ಗಾಯಕರು : ಆಶಾ ಬೋಸ್ಲೆ

Pinterest LinkedIn Tumblr

ashaಮುಂಬೈ – ಮೇ 6: ಭಾರತದಲ್ಲಿ ಪ್ರಸ್ತುತ ಇರುವ ಎಲ್ಲಾ ಗಾಯಕರಿಗಿಂತ ರಹತ್ ಫತೆ ಅಲಿ ಖಾನ್ ಮತ್ತು ಜಾವೆದ್ ಅಲಿ ಖಾನ್ ಉತ್ತಮ ಗಾಯಕರು ಎಂದು ಸಂಗೀತ ಲೋಕದ ದಂತಕಥೆ ಪ್ರಖ್ಯಾತ ಗಾಯಕಿ ಆಶಾ ಬೋಸ್ಲೆ ತನ್ನ ಮೆಚ್ಚುಗೆಯನ್ನು ವ್ಯಕ್ತ ಪಡಿಸಿದ್ದಾರೆ. ನಿನ್ನೆ ಬಿಡುಗಡೆಗೊಂಡ ಸೊಸೈಟಿ ನಿಯತಕಾಲಿಕೆಯ ಕವರ್ ಪುಟಕ್ಕೆ ಆಶಾ ಬೋಸ್ಲೆ ರವರನ್ನು ಇಂದಿನ ಪೀಳಿಗೆಯಲ್ಲಿ ನಿಮಗೆ ಇಷ್ಟವಾದ ಗಾಯಕರು ಯಾರೆಂದು ಅವರನ್ನು ಕೇಳಿದ್ದಕ್ಕೆ ಈ ರೀತಿಯ ಪ್ರತಿಕ್ರಿಯೆ ಅವರಿಂದ ವ್ಯಕ್ತವಾಯಿತು.

ರಹತ್ ಫತೆ ಅಲಿ ಖಾನ್ ಮತ್ತು ಜಾವೆದ್ ಅಲಿ ಖಾನ್ ಇಬ್ಬರು ಸಹ ಉತ್ತಮ ಕಂಠ ಸಿರಿಯನ್ನು ಮನನ ಮಾಡಿಕೊಂಡಿದ್ದು,ಸಾಕಷ್ಟು ಸಂಗೀತದಲ್ಲಿ ಅನುಭವ ವನ್ನು ಹೊಂದಿದ್ದಾರೆ ಎಂದು ಅವರು ತಿಳಿಸಿದರು. ರಹತ್ ಫತೆ ಅಲಿ ಖಾನ್ ಗಾಯನದ ‘ಮನ್ ಕಿ ಲಗನ್ ‘ ತೆರೆ ಮಸ್ತ್ ಮಸ್ತ್ ದೊನೇ, ಮತ್ತು ಆಝ್ ದಿನ್ ಚಡೆಯಾ ತುಂಬಾ ಅದ್ಬುತವಾಗಿದ್ದು , ಎಲ್ಲಾ ಸಂಗೀತ ದಿಗ್ಗಜರಿಗೂ ಗೊತ್ತಿದೆ. ಹಾಗೆಯೆ ಜಾವೆದ್ ಅಲಿ ಖಾನ್ ಗಾಯನದ ‘ಜಷ್ಣ ಭಹಾರ ಹೇ’, ಮತ್ತು’ ಅರ್ಜೀಯನ್’ ಹಾಡುಗಳು ಅಮೋಘವಾಗಿದ್ದು ಹಲವಾರು ಪ್ರಶಸ್ತಿಗಳನ್ನು ಇಬ್ಬರು ಪಡೆದಿದ್ದಾರೆ ಎಂದೂ ಶ್ಲಾಘಿಸಿದರು.

82 ವರ್ಷ ದ ಆಶಾ ಬೋಸ್ಲೆ 72 ವರ್ಷಗಳ ಕಾಲ ಸುದೀರ್ಘವಾಗಿ ಸಂಗೀತ ಗಾಯನದ ಸೇವೆಯನ್ನು ಸಿನಿಮಾ ಲೋಕಕ್ಕೆ ನೀಡಿರುವ ಅವರು ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ . ಆದರೆ ಅವರು ಪ್ರಸ್ತುತ ಯಾವುದೇ ಹಾಡಿಗೂ ಕಂಠಸಿರಿ ನೀಡುತಿಲ್ಲ. ಇತ್ತೀಚಿನ ದಿನಗಳ ಲ್ಲಿ ಎಲ್ಲಾ ಗೀತೆಗಳು ಸಹ ಕೆಟ್ಡದಾಗಿವೆ , ಉತ್ತಮ ಸಾಹಿತ್ಯ ಮೂಡಿಬರುತ್ತಿಲ್ಲಾ , ಆದ್ದರಿಂದ ಉತ್ತಮ ಸಾಹಿತ್ಯ ಅಗತ್ಯ .ಅರ್ಥಬದ್ದ ಸಾಹಿತ್ಯ ಇದ್ದಾಗ ಮಾತ್ರ ಆ ಗೀತೆ ಉತ್ತಮ ಹೆಸರನ್ನು ಮಾಡುತ್ತದೆ ಎಂದು ಅವರು ಮಾಧ್ಯಮಗಳಿಗೆ ತಮ್ಮ ಅಭಿಪ್ರಾಯ ವ್ಯಕ್ತ ಪಡಿಸಿದರು.

ತಮ್ಮ ಸಂಗೀತ ಲೋಕದ ಗಣನೀಯ ಸೇವೆಗೆ 2008 ರಲ್ಲಿ ಪದ್ಮ ಭೂಷಣ ಗೌರವಕ್ಕೆ ಬಾಜನರಾದರು. ಈಗಲೂ ಸಹ ಹಾಡಲು ಸಿದ್ಧನಿದ್ದೇನೆ ಎಂಬ ತುಡಿತ ವ್ಯಕ್ತಪಡಿಸಿದ ಅವರು ಉತ್ತಮ ಸಾಹಿತ್ಯ ದ ಹಾಡುಗಳು ಸಿಕ್ಕರೆ ಖಂಡಿತ ಹಾಡುತ್ತೆನೆ ಎಂದು ಅವರು ಮಾಧ್ಯಮಗಳಿಗೆ ತಿಳಿಸಿದರು.

Write A Comment