ಅಂತರಾಷ್ಟ್ರೀಯ

ಪಾಕ್​ನಲ್ಲಿ ಕಾಣಿಸಿಕೊಂಡ ಸೂರ್ಯ ಪುತ್ರರು!

Pinterest LinkedIn Tumblr

pak-webಇಸ್ಲಾಮಾಬಾದ್: ಸೂರ್ಯನ ಕಿರಣಗಳು ಮೈ ಮೇಲೆ ಬೀಳುತ್ತಿದ್ದಂತೆ ಸಕ್ರಿಯರಾಗುವ ಸಹೋದರರು, ಸೂರ್ಯ ಮರೆಯಾಗುತ್ತಿದ್ದಂತೆ ತಟಸ್ಥರಾಗುವ ವಿಚಿತ್ರ ರೀತಿಯ ಕಾಯಿಲೆಯೊಂದಕ್ಕೆ ತುತ್ತಾಗಿದ್ದಾರೆ.

ಹೌದು, ಒಂಬತ್ತು ಹಾಗೂ ಹದಿಮೂರು ವರ್ಷದ ಪಾಕಿಸ್ತಾನದ ಸಹೋದರರಿಗೆ ಗೌಪ್ಯವಾದ ಕಾಯಿಲೆಯೊಂದು ಅಂಟಿಕೊಂಡಿದೆ. ಇವರಿಗೆ ಸೋಲಾರ್ ಮಕ್ಕಳೆಂದೇ ಕರೆಯಲಾಗುತ್ತಿದ್ದು, ಸೂರ್ಯನ ಕಿರಣ ಮೈ ಮೇಲೆ ಬೀಳದಿದ್ದರೆ ಮಾತು ಹಾಗೂ ಚಲನವಲನ ಸಂಪೂರ್ಣವಾಗಿ ಸ್ಥಬ್ದವಾಗುತ್ತದೆ. ಈ ವಿಚಿತ್ರ ಕಾಯಿಲೆ ಕುರಿತು ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆ ಪರೀಕ್ಷೆ ನಡೆಸಿದ್ದು, ರೋಗದ ವಿವರ ಪತ್ತೆಹಚ್ಚಲು ವಿಫಲವಾಗಿದೆ.

ಈ ಸಂಸ್ಥೆಯ ಪ್ರಾಧ್ಯಾಪಕರಾದ ಜಾವೇದ್ ಅಕ್ರಮ್ ಅವರು, ‘ಪ್ರಕರಣ ವೈದ್ಯಲೋಕಕ್ಕೆ ಪರೀಕ್ಷೆಯಾಗಿದೆ. ಬಾಲಕರ ವೈದ್ಯಕೀಯ ಖರ್ಚನ್ನು ಸರ್ಕಾರವೇ ಉಚಿತವಾಗಿ ಭರಿಸಲಿದೆ. ಅಷ್ಟೇ ಅಲ್ಲ ಇವರ ರಕ್ತದ ಮಾದರಿಯನ್ನು ಅಮೆರಿಕಾ ಸೇರದಂತೆ ವಿವಿಧ ದೇಶಗಳಿಗೆ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ಬಾಲಕರ ತಂದೆ ಬಲೂಚಿಸ್ತಾನದ ಕ್ವೆಟ್ಟಾ ಸಮೀಪದ ಹಳ್ಳಿಯೊಂದರ ನಿವಾಸಿಯಾಗಿರುವ ಮೊಹಮ್ಮದ್ ಹಾಶಿಮ್ ‘ನನ್ನ ಮಕ್ಕಳಿಗೆ ಬಹುಶಃ ಸೂರ್ಯನಿಂದ ಚೈತನ್ಯ ಬರುತ್ತಿದೆ’ ಎಂದು ಹೇಳಿದ್ದಾರೆ.

Write A Comment