ರಾಷ್ಟ್ರೀಯ

ಸಹರಾ ಮುಖ್ಯಸ್ಥನಿಗೆ ನಾಲ್ಕು ವಾರಗಳ ಷರತ್ತುಬದ್ಧ ಪೆರೋಲ್

Pinterest LinkedIn Tumblr

sahara-webನವದೆಹಲಿ: ತಾಯಿಯ ಅಂತ್ಯಸಂಸ್ಕಾರದ ವಿಧಿ, ವಿಧಾನ ಕೈಗೊಳ್ಳುವ ಸಲುವಾಗಿ ಸಹರಾ ಮುಖ್ಯಸ್ಥ ಸುಬ್ರತೊ ರಾಯ್ ಅವರಿಗೆ ಸುಪ್ರೀಂ ಕೋರ್ಟ್ ನಾಲ್ಕು ವಾರಗಳ ಷರತ್ತುಬದ್ಧ ಪೆರೋಲ್ ನೀಡಿದೆ.

ಸುಬ್ರತೊ ರಾಯ್ ಅವರ 95ರ ಹರೆಯದ ತಾಯಿ ಛಬಿ ರಾಯ್ ಅವರು ಅನಾರೋಗ್ಯದಿಂದ ಶುಕ್ರವಾರ ಮುಂಜಾನೆ ಲಖನೌದಲ್ಲಿ ನಿಧನರಾಗಿದ್ದಾರೆ. ಈ ವಿಚಾರವಾಗಿ ರಾಯ್ ಸುಪ್ರೀಂಕೋರ್ಟಿಗೆ ಅರ್ಜಿಸಲ್ಲಿಸಿದ್ದರು.ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್, ನ್ಯಾಯಮೂರ್ತಿ ಎ ಆರ್ ದವೆೆ ಹಾಗೂ ನ್ಯಾಯಮೂರ್ತಿ ಎ ಕೆ ಸಿಕ್ರಿ ಅವರನ್ನು ಒಳಗೊಂಡ ಪೀಠವು ಷರತ್ತಿನ ಪೆರೋಲ್ ನೀಡಿತು. ತಮ್ಮ ಕಕ್ಷಿದಾರರು ಪ್ರಕರಣದಿಂದ ತಲೆಮರೆಸಿಕೊಳ್ಳುವುದಿಲ್ಲ ಹಾಗೂ ವಿದೇಶಕ್ಕೆ ಪ್ರಯಾಣ ಬೆಳೆಸುವುದಿಲ್ಲ ಎಂದು ವಕೀಲರಾದ ಕಪಿಲ್ ಸಿಬಲ್ ಅವರು ನೀಡಿದ ಭರವಸೆಯ ಆಧಾರದ ಮೇಲೆ ನ್ಯಾಯಮೂರ್ತಿಗಳು ಈ ಆದೇಶ ನೀಡಿದರು.

ಷೇರುದಾರರಿಗೆ ನೀಡಬೇಕಾಗಿದ್ದ ಹಣವನ್ನು ವಂಚಿಸಿದ ಆರೋಪದ ಮೇಲೆ ಸುಬ್ರತೊ ರಾಯ್ ಅವರನ್ನು 2014ರ ಮಾರ್ಚ್ 4ರಂದು ಬಂಧಿಸಿ, ನ್ಯಾಯಾಲಯದ ಆದೇಶದ ಮೇರೆಗೆ ತಿಹಾರ್ ಜೈಲಿನಲ್ಲಿಡಲಾಗಿದೆ.

Write A Comment